ಸೇಡಂ ತಾಲ್ಲೂಕಿನ ಕೂಡ್ಲಾ ಗ್ರಾಮದಲ್ಲಿ ಹೆಸರು ಬೆಳೆ ಕ್ಷೇತ್ರೋತ್ಸವ

ಕಲಬುರಗಿ:ಅ.೭:ಐಸಿಎರ್-ಕೃಷಿ ವಿಜ್ಞಾನ ಕೇಂದ್ರ ರದ್ದೇವಾಡಗಿ (ಕಲಬುರಗಿ-೨)ಯು ದಿನಾಂಕ: ೦೬-೦೮-೨೦೨೫ ರಂದು ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಕೊಡ್ಲಾ ಗ್ರಾಮದ ಪ್ರಗತಿಪರ ರೈತ, ಕೃಷಿ ಪಂಡಿತ ಮತ್ತು ಕೃಷಿ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯೋÃತ್ಸವ ಪ್ರಶಸ್ತಿ ವಿಜೇತರಾದ ಶ್ರೀ ಸೋಮನಾಥರೆಡ್ಡಿ ಪೂರ್ಮಾರವರ ಹೊಲದಲ್ಲಿ ಃಉS-೯ ತಳಿಯ ಹೆಸರು ಬೆಳೆ ಕ್ಷೇತ್ರೋತ್ಸವ ಮತ್ತು ಮುಂಗಾರು ಬೆಳೆಗಳಲ್ಲಿನ ಸಮಗ್ರ ಬೇಸಾಯ ಕ್ರಮಗಳ ಕುರಿತು ಕೃಷಿ ಇಲಾಖೆ ಸೇಡಂ, ಇಫ್ಕೋ ಕಲಬುರಗಿ ವಿಭಾಗ ಹಾಗೂ ಪಿ.ಕೆಪಿ.ಎಸ್. ಕೊಡ್ಲಾ ಇವರುಗಳ ಸಹಯೋಗದೊಂದಿಗೆ ಕೈಗೊಳ್ಳಲಾಯಿತು. ರೈತಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು ಡಾ. ಪಿ. ವಾಸುದೇವ ನಾಯ್ಕ್ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು ಕೆವಿಕೆ ರದೇವಾಡಗಿ ಇವರು ಅತಿಥಿಗಳನ್ನು ವೇದಿಕೆಗೆ ಸ್ವಾಗತಿಸಿದರು ಡಾ. ಶಿವಶಂಕರ ಎನ್. ವಿಸ್ತರಣಾ ನಿರ್ದೆಶಕರು, ಕೃ.ವಿ.ವಿ ರಾಯಚೂರು ಇವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ತದನಂತರ ಗೌರವಾನ್ವಿತ ಕುಲಪತಿಗಳು ಕೃ.ವಿ.ವಿ ರಾಯಚೂರು ಡಾ ಎಮ್. ಹನುಮಂತಪ್ಪ ರವರು ಗಿಡಕ್ಕೆ ನೀರುಣಿೆಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ತಮ್ಮ ಉದ್ಧಾಟನಾ ಭಾಷಣದಲ್ಲಿ ಶ್ರೀ ಸೋಮನಾಥರೆಡ್ಡಿಯವರು ಒಬ್ಬ ಮಾದರಿ ಪ್ರಗತಿಪರ ರೈತರಾಗಿದ್ದು, ಉಳಿದ ರೈತರು ಅವರಂತೆ ಕೃಷಿಯಲ್ಲಿನ ನೂತನ ತಾಂತ್ರಿಕತೆಗಳನ್ನು ತಮ್ಮ ಹೊಲದಲ್ಲಿ ಅಳವಡಿಸಿಕೊಂಡು ಮಾದರಿ ರೈತರಾಗಬೇಕೆಂದು ರೈತರಿಗೆ ಗೌರವಾನ್ವಿತ ಕುಲಪತಿಗಳು ಮನವರಿಕೆ ಮಾಡಿಕೊಟ್ಟರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ ಎಸ್. ಬಿ. ಗೌಡಪ್ಪ ಡೀನ್, ಕೃಷಿ ಮಹಾವಿದ್ಯಾಲಯ ಕಲಬುರಗಿ, ಈ ಕಾರ್ಯಕ್ರಮದ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಾ ರೈತರು ನೂತನ ತಾಂತ್ರಿಕತೆಗಳೊAದಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಪಡೆಯಬೇಕೆಂದು ರೈತರಿಗೆ ಸಲಹೆ ನೀಡಿದರು. ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಡಾ.ಬಿ.ಎಮ್. ದೊಡ್ಡಮನಿ. ಸಹ ಸಂಶೋಧಾನ ನಿರ್ದೇಶಕರು ವಲಯ ಕೃಷಿ ಸಂಶೋಧಾನಾ ಕೇಂದ್ರ ಕಲಬುರಗಿ, ಇವರು ತಮ್ಮ ಅದ್ಯಕ್ಷೀಯ ಭಾಷಣದಲ್ಲಿ ಸುಧಾರಿತ ತಳಿಯಾದ ಃಉS-೯ ಹೆಸರು ಬೆಳೆಯನ್ನು ಸಮಗ್ರ‍್ರ ಬೇಸಾಯ ಕ್ರಮಗಳೊಂದಿಗೆ ಹೆಚ್ಚಿನ ಇಳುವರಿ ಪಡೆದು ಹೆಚ್ಚಿನ ಲಾಭ ಪಡೆಯಬೆಕೆಂದು ರೈತರಿಗೆ ಸಲಹೆ ನೀಡಿದರು. ತದನಂತರ ಕೃಷಿ ಇಲಾಖೆಯ ಉಪ ಕೃಷಿ ನಿರ್ದೆಶಕರಾದ ಶ್ರೀಮತಿ ಅನುಸೂಯಾ ಹೂಗಾರರವರು ಕೃಷಿ ಇಲಾಖೆಯ ಲಭ್ಯವಿರುವ ವಿವಿಧ ಸೌಲಭ್ಯಗಳ ಕುರಿತು ವಿವರಿಸಿದರು. ಇಫ್ಕೋ ಕಂಪನಿಯ ಕ್ಷೇತ್ರ ವ್ಯವಸ್ಥಾಪಕರಾದ ಶ್ರೀ ಸಿದ್ಧಾರೂಢ್ ಪಾಟೀಲ್. ಇವರು ನ್ಯಾನೋ ಯೂರಿಯಾ, ನ್ಯಾನೋ ಡಿಎಪಿ ಹಾಗೂ ಇಫ್ಕೋ ಕಂಪನಿಯ ರಸಗೊಬ್ಬರಗಳ ಸಿಂಪರಣೆಯನ್ನು ಡ್ರೋನ್ ತಂತ್ರಜ್ಞಾನದ ಮೂಲಕ ರೈತರ ಹೊಲದಲ್ಲಿ ಪ್ರಾತ್ಯಕ್ಷೀಕೆ ಮೂಲಕ ವಿವರಿಸಿದರು. ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರು ಶ್ರೀ ಸೋಮನಾಥರೆಡ್ಡಿ ಪೂರ್ಮಾರವರು ಹೆಚ್ಚು ಹೆಚ್ಚು ಸಾವಯವ ಹಾಗೂ ನೈಸರ್ಗಿಕ ಕೃಷಿಗೆ ಒತ್ತು ಕೊಡಬೇಕೆಂದು ರೈತರಿಗೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಸಮಗ್ರ ಪೋಷಕಾಂಶ ನಿರ್ವಹಣೆಯ ತರಬೇತಿ ಮತ್ತು ಸಣ್ಣ ಸಾವಯವ ರೈತರಿಗೆ ಕೌಶಲ್ಯ ತರಬೇತಿ ನೀಡಿದ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಡಾ. ಎ. ಆರ್. ಕುರುಬುರ್, ಸಹ ವಿಸ್ತರಣಾ ನಿರ್ದೇಶಕರು ಕೃವಿವಿ ರಾಯಚೂರು, ಡಾ. ರಾಜು, ಜಿ, ತೆಗ್ಗಳ್ಳಿ, ಡಾ. ಮಲ್ಲಿಕಾರ್ಜುನರೆಡ್ಡಿ, ಸಹಾಯಕ ಪ್ರಾಧ್ಯಾಪಕರು, ಕೃಷಿ ಮಹಾವಿದ್ಯಾಲಯ ಕಲಬುರಗಿ, ಶ್ರೀ ವಿಶಾಲ ಸಹಾಯಕ ಕೃಷಿ ನಿರ್ದೇಶಕರು ಕೃಷಿ ಇಲಾಖೆ ಸೇಡಂ, ಶ್ರೀ ಭೀಮರೆಡ್ಡಿ ಕೃಷಿ ಅಧಿಕಾರಿ, ಶ್ರೀ ಅಮೀನರೆಡ್ಡಿ, ಪಿಕೆಪಿಎಸ್ ಅಧ್ಯಕ್ಷರು ಕೊಡ್ಲಾ ಹಾಗೂ ಸುತ್ತಮುತ್ತಲಿನ ಗ್ರಾಮದ ಸುಮಾರು ೧೦೦ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಂಡರು. ಡಾ ಜ್ಞಾನದೇವ ಬುಳ್ಳಾ, ವಿಜ್ಞಾನಿ (ಬೀಜ ವಿಜ್ಞಾನ) ವಂದಿಸಿದರು, ಡಾ ಚಂದ್ರಕಾAತ ವಿಜ್ಞಾನಿ (ಮಣ್ಣು ವಿಜ್ಞಾನ) ಕಾರ್ಯಕ್ರಮವನ್ನು ನಿರುಪಿಸಿದರು