
ಸುರಪುರ:ಫೆ.೧೦: ಸುರಪುರ ಇತಿಹಾಸ ಸಂಶೋಧನಾ ಕೇಂದ್ರ ಭೀಮರಾಯನ ಗುಡಿ, ಓಕುಳಿ ಪ್ರಕಾಶನ ಸುರಪುರ, ಜಾಗೃತಿ ಸಮಾಜ ಸೇವಾ ಸಂಘ ಸುರಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ವೀರಪ್ಪ ನಿಷ್ಠಿ ಇಂಜಿನಿಯರಿAಗ್ ಕಾಲೇಜ್ ಸಭಾಂಗಣದಲ್ಲಿ ಸುರಪುರ ವಿಜಯೋತ್ಸವ ೧೮೫೮ ಕಾರ್ಯಕ್ರಮ ಆಚರಿಸಲಾಯಿತು.
ಕಾರ್ಯಕ್ರಮದಲ್ಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹೆಸರಾಂತ ಅನುವಾದಕರಾಗಿರುವ ರಿಯಾಜ್ ಬೋಡೆ ಮಾತನಾಡಿ, ೧೮೫೭-೫೮ ರ ಪ್ರಥಮ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ರಾಜಾ ನಾಲ್ವಡಿ ವೆಂಕಟಪ್ಪ ನಾಯಕರ ಪಾತ್ರ ಹಾಗೂ ಆ ಸಂದರ್ಭದಲ್ಲಿ ಆತನ ಜೊತೆಗೆ ಯುದ್ಧದಲ್ಲಿ ಕೈಜೋಡಿಸಿದ ಸುರಪುರ ಸೈನಿಕರ ತ್ಯಾಗ ಬಲಿದಾನಗಳ ಕುರಿತು ವಿವರಿಸಿ, ಸುರಪುರ ಕೇವಲ ಸುರಪುರಕ್ಕೆ ಮಾತ್ರ ಸೀಮಿತವಲ್ಲದೆ ಸುರಪುರ ಸಂಸ್ಥಾನ ಎಂದರೆ ಶಹಾಪುರ, ಯಾದಗಿರಿ,ಜೇವರ್ಗಿ,ದೇವದುರ್ಗ,ಮುದ್ದೇಬಿಹಾಳ ಪ್ರದೇಶಗಳನ್ನು ಒಳಗೊಂಡ ಬಹುದೊಡ್ಡ ಪ್ರದೇಶ, ಈ ಪ್ರದೇಶದಲ್ಲಿ ಸಾಮರಸ್ಯದಿಂದ ಆಡಳಿತ ಮಾಡಿದ ಶ್ರೇಯಸ್ಸು ಸುರಪುರ ಸಂಸ್ಥಾನದ ರಾಜರಿಗೆ ಸಲ್ಲುತ್ತದೆ ಎಂದು ತಿಳಿಸಿದರು. ಇಂತಹ ಸುರಪುರ ಸಂಸ್ಥಾನ ಮೊಗಲ್ ಸಾಮ್ರಾಟ ನನ್ನು ಎದುರಿಸಿದ್ದು ಅವಿಸ್ಮರಣೀಯ. ಔರಂಗಜೇಬ್ ತನ್ನ ಕೊನೆಯ ದಿನಗಳನ್ನು ಈ ಪರಿಸರದಲ್ಲಿಯೇ ಕಳೆದ ಆ ದಿನಗಳು ಕುರಿತು ಸಂಶೋಧನೆಗಳ ಆಗಬೇಕಾಗಿದೆ ಎಂದು ತಿಳಿಸಿದರು.
ಸನ್ಮಾನವನ್ನು ಸ್ವೀಕರಿಸಿದ ಬಸವರಾಜ ಕೊಡೇಕಲ್ ಅವರು ಈ ಸನ್ಮಾನ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದ್ದು ಮುಂದಿನ ದಿನಗಳಲ್ಲಿ ಸುರಪುರ ಪರಿಸರದ ಇತಿಹಾಸದ ಮೇಲೆ ಹೊಸ ಬೆಳಕನ್ನು ಚೆಲ್ಲುವ ಕೆಲಸವನ್ನು ಮಾಡುತ್ತೇವೆ ಈ ಸನ್ಮಾನ ನಮ್ಮ ಎಲ್ಲರ ಜವಾಬ್ದಾರಿ ಹೆಚ್ಚಿಸಿದೆ ಎಂದು ತಿಳಿಸಿದರು.
ಉಪನ್ಯಾಸಕ ರಾಜಗೋಪಾಲ್ ಎಂ ವಿಭೂತಿ ಪ್ರಾಸ್ತಾವಿಕ ಮಾತನಾಡಿ, ಸುರಪುರ ಇತಿಹಾಸ ಸಂಶೋಧನಾ ಕೇಂದ್ರದ ಮೂಲಕ ಸುಮಾರು ೨೬ ವರ್ಷಗಳಿಂದ ಈ ವಿನೂತನ ಸುರಪುರ ವಿಜಯೋತ್ಸವ ೧೮೫೭ರ ಕಾರ್ಯಕ್ರಮ ಆಚರಿಸುತ್ತಿದ್ದು, ಈ ಮೂಲಕ ಭಾರತದ ಪ್ರಥಮ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಸುರಪುರದ ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ರವರು ಇಡೀ ದಕ್ಷಿಣ ಭಾರತದ ಎಲ್ಲ ಸ್ವತಂತ್ರ ರಾಜ್ಯಗಳ ನೇತೃತ್ವ ವಹಿಸಿಕೊಳ್ಳುವ ಮೂಲಕ ಬ್ರಿಟಿಷರ ವಿರುದ್ಧ ಹೋರಾಟವನ್ನು ಮಾಡಿ ಫೆಬ್ರವರಿ ೮ ೧೮೫೮ ರಲ್ಲಿ ಕ್ಯಾಪ್ಟನ್ ಜಾರ್ಜ್ ನ್ಯೂ ಬೆರಿ ಎಂಬ ಬ್ರಿಟಿಷ್ ಅಧಿಕಾರಿಯನ್ನು ಕೊಲ್ಲುವ ಮೂಲಕ ವಿಜಯವನ್ನು ಸಾಧಿಸಿರುವ ಈ ದಿನವನ್ನು ಸುರಪುರ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಶಾಂತಲಾ ಎಸ್ ನಿಷ್ಠಿಯವರು ಅಧ್ಯಕ್ಷೀಯ ಮಾತುಗಳಾಡಿದರು. ವೇದಿಕೆ ಮೇಲೆ ಉದ್ಘಾಟಕರಾಗಿ ಆಗಮಿಸಿದ್ದ ಸುರಪುರ ಅರಸು ವಂಶಸ್ಥರಾದ ರಾಜಾ ಲಕ್ಷ್ಮೀನಾರಾಯಣ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು.ವೇದಿಕೆಯಲ್ಲಿ ಕೃಷ್ಣಾ ಸುಬೇದಾರ ,ಗರುಡಾದ್ರಿ ಕಲಾವಿದ ವಿಜಯ ಹಾಗರಗುಂಡಗಿ,ಪಾಲಿಟೆಕ್ನಿಕ್ ಕಾಲೇಜಿನ ಆಯ್ಕೆ ಶ್ರೇಣಿಯ ಉಪನ್ಯಾಸ ರಾಮನಗೌಡ ,ಉಮೇಶ್ ಮುಡುಗೋಡ್, ಎಚ್ ಶ್ರವಣಕುಮಾರ್ ನಾಯಕ ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ಬಸವರಾಜ್ ಕೊಡೇಕಲ್ ಉಪನ್ಯಾಸಕರು , ಸಣ್ಣಕೆಪ್ಪ ಕೊಂಡಿಕಾರ್, ಪ್ರಖರವಾಗ್ಮಿಗಳು,ಸಂಶೋಧಕರು ಶರಣಬಸಯ್ಯ ಎಂ ಹಿರೇಮಠ್ ರವರನ್ನು ಸನ್ಮಾನಿಸಲಾಯಿತು.
ರಾಜಕುಮಾರ್ ಎಸ್ ದೊರೆ ನಿರೂಪಿಸಿದರು, ನಬಿಸಾಬ್ ಸ್ವಾಗತಿಸಿದರು, ರಜಾಕ್ ಎಸ್ ಭಗವಾನ್ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಮುಖಂಡರಾದ ಬಸವರಾಜ್ ಜಮಾದರಖಾನಿ, ಪ್ರಕಾಶ್ ಚಂದನ್, ಗೋಣೆಪ್ಪ ಪೂಜಾರಿ, ಪರಶುರಾಮ್ ನಾಯಕ್ ಗುಡ್ಡ ಕಾಯಿ, ರಮೇಶ್ ಕುಲಕರ್ಣಿ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.






















