Home ಜಿಲ್ಲೆ ಕಲಬುರಗಿ ನಾಡಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅವಿಸ್ಮರಣೀಯ

ನಾಡಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅವಿಸ್ಮರಣೀಯ

ಕಲಬುರಗಿ :ಜೂ.೪: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯು ನಾಡಿನ ಇತಿಹಾಸದಲ್ಲಿ “ಸುವರ್ಣಯುಗ”ವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯ ಮೂಲಕ ಕನ್ನಡ ಭಾಷೆ ಮತ್ತು ಸಾಹಿತ್ಯದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ನೀರಾವರಿ ಯೋಜನೆಗಳು, ರಸ್ತೆಗಳು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ನಾಡಿಗೆ ಅವಿಸ್ಮರಣೀಯ ಕೊಡುಗೆಯನ್ನು ನೀಡಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದ ‘ನರೇಂದ್ರ ಪದವಿ ಪೂರ್ವ ಕಾಲೇಜ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ದಾಖಲೆಯ ೭೦೦೦ನೇ ಕಾರ್ಯಕ್ರಮವಾದ ” ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ೧೪೨ನೇ ಜನ್ಮದಿನಾಚರಣೆ ” ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದಾದ್ಯಂತ ಕನ್ನಡ ಪುಸ್ತಕಗಳನ್ನು ಜನರಿಗೆ ತಲುಪಿಸಲು ಸಾರ್ವಜನಿಕ ಗ್ರಂಥಾಲಯ ಜಾಲವನ್ನು ವಿಸ್ತರಿಸಿದರು. ಆಡಳಿತದಲ್ಲಿ ಕನ್ನಡಕ್ಕೆ ಆದ್ಯತೆಯನ್ನು ನೀಡಿದರು. ಕನ್ನಡ ಪತ್ರಿಕೋದ್ಯಮಕ್ಕೆ ಬೆಂಬಲಿಸಿದರು.ಅನೇಕ ಕನ್ನಡ ಕವಿಗಳು, ಸಾಹಿತಿಗಳು ಮತ್ತು ವಿದ್ವಾಂಸರನ್ನು ಸನ್ಮಾನಿಸಿ ಪೋಷಿಸಿದರು. ಶಿಕ್ಷಣ, ಕೈಗಾರಿಕೆಗಳು ಮತ್ತು ನೀರಾವರಿ ಕ್ಷೇತ್ರಗಳಲ್ಲೂ ಕನ್ನಡ ನಾಡು ಅಭಿವೃದ್ಧಿ ಹೊಂದಿತು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ತಾಯಪ್ಪ ದೊಡ್ಡಮನಿ, ಕಾಲೇಜಿನ ಪ್ರಾಚಾರ್ಯ ಸಂಜಯಕುಮಾರ ಪಾಟೀಲ, ಯಡ್ರಾಮಿ ಕದಂಬ ಪಿಯು ಕಾಲೇಜಿನ ಪ್ರಾಚಾರ್ಯ ದೇವೇಂದ್ರ ಬಿ.ಗುಡುರ್, ಕಾಲೇಜಿನ ಉಪನ್ಯಾಸಕರಾದ ಶರಣೇಂದ್ರ, ಸಿಬ್ಬಂದಿ ಕೀರ್ತಿ ಗಂಗಾಕರ್, ಅಕ್ಷತಾ ಪಡಶೆಟ್ಟಿ, ಶಿಕ್ಷಕ ವಿಜಯಕುಮಾರ ಪೂಜಾರಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.