ಕೋಲಾರ,ಆ.೧೬: ನಗರದ ಪಾಲಸಂದ್ರ ಲೇಔಟ್‌ನಲ್ಲಿರುವ ನಳಂದ ಶಾಲೆಯಲ್ಲಿ ೭೯ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಟಿ.ಆರ್. ಜಯರಾಮ್, ಖಜಾಂಚಿ ಮಮತಾ, ಪ್ರಾಂಶುಪಾಲ ಸದಾಶಿವಯ್ಯ ಹಾಜರಿದ್ದರು. ಕಾರ್ಯಕ್ರಮವನ್ನು ಶಾಲೆಯ ಕಾರ್ಯದರ್ಶಿ ನಡೆಸಿಕೊಟ್ಟರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿಬಂದವು. ಮಕ್ಕಳಿಗೆ ಸಿಹಿ ಹಂಚಲಾಯಿತು.




























