
ಬೀದರ್ : ಡಿ.೪:ತಾಲೂಕಿನ ನಾಗೂರಾ ಗ್ರಾಮದ ಯುವಕ ಹರೀಶ್ ಗುಂಡಯ್ಯಾ ಸ್ವಾಮಿ ಭಾರತೀಯ ಸೈನ್ಯಕ್ಕೆ ನೇಮಕವಾಗಿರುವ ಹಿನ್ನೆಲೆ ಯಾಕತಪೂರ್ ಗ್ರಾಮದ ಲೀಟ್ಲ್ ಫ್ಲಾವರ್ ಪಬ್ಲಿಕ್ ಶಾಲೆಯಲ್ಲಿ ಎಸ್‌ಎಸ್ ಮುದ್ದೆ ಶಿಕ್ಷಣ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಗಿದೆ.
ಲೀಟ್ಲ್ ಫ್ಲಾವರ್ ಪಬ್ಲಿಕ್ ಶಾಲೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿವರೆಗೆ ಓದಿರುವ ಯುವಕ ಹರೀಶ್ ಸ್ವಾಮಿ ಇದೀಗ ಭಾರತೀಯ ಸೈನ್ಯಕ್ಕೆ ಸೇರಿರುವುದು ಹೆಮ್ಮೆಯ ಸಂಗತಿಯಾಗಿದೆ. ಗ್ರಾಮೀಣ ಭಾಗದ ಯುವಕ ದೇಶ ಕಾಯುವ ಉನ್ನತ ಸೇವೆಗೆ ನಿಯುಕ್ತಿಗೊಂಡಿರುವುದು ಹರ್ಷದ ಸಂಗತಿಯಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಸೈಯದ್ ಅಹ್ಮದ್ ಮುದ್ದೆ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶಿವಶರಣಪ್ಪಾ ಜಾಲಿ ಸ್ವಾಗತಿಸಿದರು. ಚಾಂದಪಾಶಾ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.


























