Home ಜಿಲ್ಲೆ ಬೇಳಖೆರಾ ಗ್ರಾಮದಲ್ಲಿ ಪುರಾಣ ಪ್ರವಚನ

ಬೇಳಖೆರಾ ಗ್ರಾಮದಲ್ಲಿ ಪುರಾಣ ಪ್ರವಚನ

ಸಂಜೆವಾಣಿ ವಾರ್ತೆ
ಚಿಟಗುಪ್ಪ : ಫೆ.೨೮:ಬೇಳಕೆರಾ ಗ್ರಾಮದ ಬೆಟ್ಟದ ರೇವಣಸಿದ್ದೇಶ್ವರ ೧೭ನೇ ಜಾತ್ರಾ ಮತ್ತು ಮಹಾರಠೋತ್ಸವ ಪ್ರಯುಕ್ತ ಪುರಾಣ ಪ್ರವಚನ ಕಾರ್ಯಕ್ರಮ ಶುಕ್ರವಾರ ರಾತ್ರಿ ಜರುಗಿತ್ತು.
ದಿವ್ಯ ಸಾನಿಧ್ಯ ಮರುಳಾರಾಧ್ಯ ಶಿವಾಚಾರ್ಯ,
ಹುಬ್ಬಳ್ಳಿ ಡಾ.ರಾಜಶೇಖರ್ ಶಿವಾಚಾರ್ಯ ಪ್ರವಚನ ನೀಡಿದರು.ಶಿವಕುಮಾರ್ ಪಾಟೀಲ್ ಮಾತನಾಡಿ,ಶುಭಾಷ್ ಕಲ್ಲೂರ್ ಅವರಿಂದ ಮೊದಲಿಗೆ ಜಾತ್ರೆ ಆರಾಂಭವಾಗಿದೆ.ಇವತ್ತು ಬಹಳ ಪ್ರಸಿದ್ದಿಯಾಗಿ ಬೆಳೆದಿದೆ.ಹೀಗಾಗಿ ಇನ್ನೂ ಅಭಿವೃದ್ಧಿಗೆ ಕೆಲಸ ನಡಿಯಬೇಕಾಗಿದೆ. ಅದಕ್ಕೆ ಜನ ಪ್ರತಿನಿಧಿಗಳು ಸಹಕಾರ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಎ???ಸ್ಕೆ ಅಧ್ಯಕ್ಷ ಸುಭಾಸ್ ಕಲ್ಲೂರ್, ಪಿ.ಎ.ಲ್ಡಿ.ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಮಾಶೆಟ್ಟಿ, ದೇವಸ್ಥಾನ ಕಮಿಟಿ ಅಧ್ಯಕ್ಷ ಅನಿಲ ಪಾಟೀಲ್, ಶಿವಕೂಮಾರ ಮಹಾಗಾಂವಕರ್, ಪ್ರವೀಣ ಶಾಮತಾಬಾದ, ಚಂದು ನಾರಾಯಣಪೆಟ್, ಸಂಜು ಗೌಡಪನೂರ, ಮಹೇಬೂಬ್ ಸಾಹೇಬ್,ಗುಂಡಪ್ಪ ಮೂಲಗಿ,ಚನ್ನಬಸಪ್ಪ,ಚನ್ನಾವಿರ ಪಾಟೀಲ್,ರಾಜಶೇಖರ್ ಕೋರಿ,ವೀರಶೆಟ್ಟಿ ಮೂಲಗಿ,ಅಶೋಕ ರೆಡ್ಡಿ,ಸಂಗಯ್ಯ ಸ್ವಾಮಿ, ರೇವಣಯ್ಯ, ಜಗನಾಥ್ ರೆಡ್ಡಿ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು