
ಕಲಬುರಗಿ: ಮಯೋಪಿಯ ಇದು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ಒಂದು ಪ್ರಮುಖ ದೃಷ್ಟಿ ಸಮಸ್ಯೆಯಾಗಿದೆ. ಮಯೋಪಿಯ ಅಥವಾ ನೇರದೃಷ್ಟಿ ದೋಷದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗುತ್ತದೆ.
ಮಯೋಪಿಯಾ ಎಂದರೇನು?:
ಮಯೋಪಿಯಾ ಅಂದರೆ ನಿಕಟ ವಸ್ತುಗಳು ಅಂದರೆ ಪುಸ್ತಕಗಳು, ಮೊಬೈಲ್ ಇವು ಸ್ಪಷ್ಟವಾಗಿ ಕಾಣುತ್ತವೆ. ಆದರೆ ದೂರದ ಬ್ಲ್ಯಾಕ್‌ಬೋರ್ಡ್ ಅಥವಾ ರಸ್ತೆ ಗುರುತುಗಳು ಅಸ್ಪಷ್ಟವಾಗಿ ಕಂಡುಬರುತ್ತವೆ. ಇದು ರೋಗವಲ್ಲ. ಆದರೆ ಆರಂಭದಲ್ಲಿಯೇ ಇದರ ಬಗ್ಗೆ ಸಾಕಷ್ಟು ಗಮನಕೊಡಬೇಕಾದ ಅವಶ್ಯಕತೆ ಇರುತ್ತದೆ.
ಇದು ಎಷ್ಟು ಗಂಭೀರ? :
ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮಯೋಪಿಯಾ ಹೆಚ್ಚಾಗಿ ಕಂಡುಬರುತ್ತಿದೆ. ಮೊಬೈಲ್, ಟ್ಯಾಬ್, ಟಿವಿ ಮುಂತಾದ ಉಪಕರಣಗಳ ಬಳಕೆ ಹೆಚ್ಚಾಗಿರುವುದರಿಂದ ಮತ್ತು ಹೊರಾಂಗಣ ಆಟ ಕಡಿಮೆಯಾಗಿರುವುದರಿಂದ ಮಯೋಪಿಯಾ ಉಂಟಾಗುವ ಪ್ರಮಾಣ ಹೆಚ್ಚಾಗಿದೆ.
ಮಯೋಪಿಯಾ ಏಕೆ ಉಂಟಾಗುತ್ತದೆ? :
ವಂಶಪಾರAಪರ್ಯ: ಪೋಷಕರಿಗೆ ಮಯೋಪಿಯಾ ಇದ್ದರೆ ಅದು ಮಕ್ಕಳಿಗೂ ಬರುವ ಸಾಧ್ಯತೆ ಹೆಚ್ಚು.ಅಸ್ತವ್ಯಸ್ತ ಜೀವನಶೈಲಿ: ಹೆಚ್ಚು ಸಮಯ ನಿಕಟ ವಸ್ತುಗಳನ್ನು ನೋಡುತ್ತಿರುವುದು ಅಂದರೆ ಓದು, ಸ್ಕ್ರೀನ್ ಬಳಕೆ, ಕಡಿಮೆ ಬೆಳಕಿನಲ್ಲಿ ನಡೆದಾಡುವುದು ಮತ್ತು ಹೊರಗೆ ನಡೆದಾಡದಿರುವುದು, ಆಟ-ಕೂಟಗಳಲ್ಲಿ ತೊಡಗದಿರುವುದು ಇವು ‘ಮಯೋಪಿಯಾ’ ಉಂಟುಮಾಡುವ ಪ್ರಮುಖ ಕಾರಣಗಳಾಗಿವೆ.
ಇದು ಚಿಂತೆಯ ವಿಷಯವೇಕೆ? :
ಸಾಮಾನ್ಯ ಮಯೋಪಿಯಾವನ್ನು ಕನ್ನಡಕದಿಂದ ಸುಲಭವಾಗಿ ನಿಯಂತ್ರಿಸಬಹುದಾದರೂ, ಹೆಚ್ಚು ಗಂಭೀರವಾದ ಮಯೋಪಿಯಾ (ಹೈ ಮಯೋಪಿಯಾ) ಉಂಟಾಗಿದ್ದರೆ ಕಣ್ಣಿನ ಸಮಸ್ಯೆಗಳು ಉಂಟಾಗಬಹುದು. ಉದಾಹರಣೆಗೆ ರೆಟಿನಾ ಕುಸಿತ, ಗ್ಲೂಕೋಮಾ ಅಥವಾ ದೃಷ್ಟಿ ನಷ್ಟ ಆಗಬಹುದು.
ಏನು ಮಾಡಬೇಕು? :
ಮಕ್ಕಳ ದೃಷ್ಟಿಯನ್ನು ರಕ್ಷಿಸಲು ನೀವು ಈ ೫ ಸರಳ ಹಂತಗಳನ್ನು ಅನುಸರಿಸಿ:
೧. ಪ್ರತಿದಿನ ಮಕ್ಕಳು ಹೊರಗೆ ಆಟವಾಡುವಂತೆ ನೋಡಿಕೊಳ್ಳಿ: ಕನಿಷ್ಠ ೨ ಗಂಟೆಗಳ ಕಾಲ ಅವರು ಪ್ರಕೃತಿಯೊಂದಿಗೆ ಕಾಲ ಕಳೆಯಬೇಕು
೨. ಸ್ಕ್ರೀನ್ ಸಮಯ ನಿಯಂತ್ರಿಸಿ: ಮಕ್ಕಳಿಗೆ ದಿನಕ್ಕೆ ೧-೨ ಗಂಟೆಗಳಿಗಿAತ ಹೆಚ್ಚು ಮೊಬೈಲ್ ಅಥವಾ ಟಿವಿ ಬಳಸಲು ಕೊಡಬೇಡಿ.
೩. ೨೦-೨೦-೨೦ ನಿಯಮ ಪಾಲಿಸಿ: ಪ್ರತಿ ೨೦ ನಿಮಿಷ ಓದಿನ ನಂತರ, ೨೦ ಅಡಿ ದೂರದ ವಸ್ತುವನ್ನು ೨೦ ಸೆಕೆಂಡುಗಳ ಕಾಲ ನೋಡಲು ತಿಳಿಸಿ.
೪. ಓದುವ ಭಂಗಿ ಸರಿಯಾಗಿರಲಿ : ಪುಸ್ತಕ ಅಥವಾ ಡಿವೈಸ್‌ಗಳನ್ನು ಕಣ್ಣುಗಳಿಂದ ಕನಿಷ್ಠ ೩೦ ಸೆಂ.ಮೀ ದೂರ ಇಡುವಂತೆ ನೋಡಿಕೊಳ್ಳಿ.
೫. ಪ್ರತಿ ವರ್ಷ ಕಣ್ಣಿನ ತಪಾಸಣೆ ಮಾಡಿಸಿ : ದೃಷ್ಟಿ ದೋಷದ ಯಾವುದೇ ಲಕ್ಷಣಗಳಿಲ್ಲದಿದ್ದರೂ ವರ್ಷಕ್ಕೆ ಒಮ್ಮೆಯಾದರೂ ಅವರ ನೇತ್ರ ತಪಾಸಣೆ ಮಾಡುವ ಅಗತ್ಯವಿದೆ.
ಪೋಷಕರು ಗಮನಿಸಬೇಕಾದ ಲಕ್ಷಣಗಳು
- ಕಣ್ಣು ಮಿಟುಕಿಸುವುದು
- ಟಿವಿಗೆ ಹತ್ತಿರ ಕುಳಿತುಕೊಳ್ಳುವುದು
- ಪುಸ್ತಕವನ್ನು ತುಂಬಾ ಹತ್ತಿರದಿಂದ ಓದುವುದು
- ತಲೆನೋವು ಅಥವಾ ಕಣ್ಣು ನೋವು
ಮಕ್ಕಳಲ್ಲಿ ಮೇಲಿನ ಲಕ್ಷಣಗಳು ಕಂಡುಬAದರೆ ತಕ್ಷಣ ನೇತ್ರ ತಜ್ಞರನ್ನು ಸಂಪರ್ಕಿಸಬೇಕು.
ಕನ್ನಡಕ ಧರಿಸುವ ಬಗ್ಗೆ ಭಯ ಬೇಡ :
ಕನ್ನಡಕ ಧರಿಸುವುದರ ಬಗ್ಗೆ ಮಕ್ಕಳಿಗೆ ಯಾವುದೇ ಆತಂಕ ಬೇಡ. ಅದು ಅವರಿಗೆ ಸ್ಪಷ್ಟ ದೃಷ್ಟಿಯನ್ನು ಒದಗಿಸುತ್ತದೆ ಮತ್ತು ಅವರ ಕಲಿಕೆಯ ಗುಣಮಟ್ಟವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ.ಮಯೋಪಿಯಾ ಒಂದು ಸಾಮಾನ್ಯ ದೃಷ್ಟಿ ಸಮಸ್ಯೆಯಾಗಿದ್ದರೂ, ಸೂಕ್ತ ಸಮಯದಲ್ಲಿ ಚಿಕಿತ್ಸೆ ಹಾಗೂ ಕೆಲವು ಅಗತ್ಯ ಕ್ರಮಗಳನ್ನು ಕೈಕೊಂಡರೆ ಅದನ್ನು ನಿಯಂತ್ರಿಸಬಹುದು.
ಜೀವನಶೈಲಿಯಲ್ಲಿ ಸಣ್ಣಪುಟ್ಟ ಬದಲಾವಣೆಗಳು ಮಕ್ಕಳ ದೃಷ್ಟಿಯ ಆರೋಗ್ಯವನ್ನು ದೀರ್ಘಕಾಲ ಕಾಪಾಡಲು ಸಹಾಯ ಮಾಡುತ್ತವೆ. ಪೋಷಕರು, ಶಿಕ್ಷಕರು, ಮತ್ತು ಸಮುದಾಯ ಸೇರಿ ಮಕ್ಕಳ ಕಣ್ಣುಗಳ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸೋಣ.
ಸ್ಪಷ್ಟ ದೃಷ್ಟಿ ಎಂದರೆ ಕೇವಲ ನೋಡುವುದು ಅಲ್ಲ; ಅದು ಉತ್ತಮವಾಗಿ ಬದುಕುವ ಗುಣಮಟ್ಟವನ್ನು ರೂಪಿಸುತ್ತದೆ.
_ಡಾ. ವಿಶ್ವನಾಥ ರೆಡ್ಡಿ, ಡಾ. ರಾಜಶ್ರೀ ರೆಡ್ಡಿ, ಡಾ. ಸಿದ್ದಲಿಂಗ ರೆಡ್ಡಿ, ಡಾ. ರಾಜೇಶ್ವರಿ ರೆಡ್ಡಿ
ಶ್ರೀ ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆ
ಶಾಂತಿ ನಗರ, ಕಲಬುರಗಿ