
ಕೋಲಾರ,ಜು,೬- ಕೋಲಾರ ಜಿಲ್ಲೆಯ ಆಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಮೈಲಾರಪ್ಪ ಎಂ.ಅವರು ಶ್ರೀನಿವಾಸಪುರದ ಜಾಕೀರ್ ಹುಸೇನ್ ಮೊಹಲ್ಲಾದ ಸರ್ಕಾರಿ ಉರ್ದು ಮತ್ತು ಇಂಗೀಷ್ ಮಾಧ್ಯಮ ಶಾಲೆಗೆ ಭೇಟಿ ನೀಡಿ ಶಾಲೆಯ ಮೂಲಭೂತ ಸೌಲಭ್ಯಗಳ ಹಾಗೂ ಪಾಠ ಪಠ್ಯ ಚಟುವಟಿಕೆಗಳ ಪರಿಶೀಲನೆ ನಡೆಸಿದರು,
ವಿದ್ಯಾರ್ಥಿಗಳ ದಾಖಲಾತಿ ಮತ್ತು ಹಾಜರಾತಿ ಸಂಖ್ಯೆಗಳ ಕುರಿತು ಪರಿಶೀಲನೆ ನಡೆಸಿದರು, ಶಿಕ್ಷಕರೊಂದಿಗೆ ಸಭೆ ನಡೆಸಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಆರೋಗ್ಯ ಹಾಗೂ ಇತರೆ ಚಟುವಟಿಕೆಗಳತ್ತ ವಿಶೇಷ ಗಮನ ಹರಿಸ ಬೇಕಾಗಿರುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಶೇ ೧೦೦ ರಷ್ಟು ಸಾಧನೆಯ ಜೊತೆಗೆ ಅತ್ಯತ್ತಮವಾದ ಅಂಕಗಳನ್ನು ಪಡೆಯುವ ಮೂಲಕ ಸುಧಾರಣೆಗೆ ತರಲು ಅಗತ್ಯವಾದ ಕ್ರಮಗಳನ್ನು ಜರುಗಿಸ ಬೇಕೆಂದು ಸೂಚಿಸಿದರು.
ಶಾಲೆಯ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಸಾವಲುಗಳು ಮತ್ತು ಅಗತ್ಯವಿರುವ ಸೌಲಭ್ಯಗಳನ್ನು ಕುರಿತು ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು,
ಶಾಲೆಯ ವಿದ್ಯಾರ್ಥಿಗಳ ದಾಖಲಾತಿಯ ಸಂಖ್ಯೆಯನ್ನು ಹೆಚ್ಚಿಸಲು ಸಮುದಾಯದ ಜೂತೆ ಸಹಕಾರ ಮತ್ತು ಹೊಂದಣಿಕೆಯೊಂದಿಗೆ ಸೌರ್ಹಾದತೆಯನ್ನು ಕಾಪಾಡಿ ಕೊಂಡು ಹೋಗ ಬೇಕೆಂದು ಕಿವಿ ಮಾತು ತಿಳಿಸಿದರು,
ಸಭೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ಮೊಹಮ್ಮದ್ ಶಾಧಿಕ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಹಿದಾಯತ್‌ಊಲ್ಲಾ ಖಾನ್, ಸ್ಥಳೀಯ ಇಮ್ತಿಯಾಜ್ ಪಾಷ, ಹಾಗೂ ಇತರ ಶಿಕ್ಷಕರು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.