ಕಲಬುರಗಿ,ಆ.14: ನಗರದ ಅಳಂದ ಚೆಕ್ ಪೆÇೀಸ್ಟ್ ಹತ್ತಿರದ ಶ್ರೀಯಮ್ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನನ್ನ ಮತ ಮಾರಾಟಕ್ಕಿಲ್ಲ- ಮತದಾರ ಜಾಗೃತಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಪ್ರಾಂಶುಪಾಲ ಪಂಡರಿನಾಥ ಕುಂಬಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ದೇಶದ ಭವಿಷ್ಯ ಯುವ ಜನಾಂಗದ ಕೈಯಲ್ಲಿದ್ದು ,ಯುವ ಜನಾಂಗ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು.ಚುನಾವಣೆಗಳಲ್ಲಿ ಹೆಚ್ಚುತ್ತಿರುವ ಹಣಬಲದಿಂದಾಗಿ ದೇಶಕ್ಕೆ ಭವಿಷ್ಯದಲ್ಲಿ ಗಂಡಾಂತರ ಬರಲಿದೆ.ಚುನಾವಣೆಗಳಲ್ಲಿ ಹಣಬಲ ನಿಲ್ಲದೆ ಹೋದರೆ ಭ್ರಷ್ಟಾಚಾರ ಇನ್ನೂ ಹೆಚ್ಚು ತಾಂಡವಾಡುತ್ತದೆ.ಮುಂದೊಂದು ದಿನ ದೇಶಕ್ಕೆ ಭ್ರಷ್ಟಾಚಾರ ಶಾಪವಾಗಿ ಪರಿಣಮಿಸಲಿದೆ.ಮತದಾರರು ಚುನಾವಣೆಗಳಲ್ಲಿ ಕೆಲವು ಅಭ್ಯರ್ಥಿಗಳು ನೀಡುವ ಆಮಿಷಕ್ಕೆ ಬಲಿಯಾಗದೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿ ಸಂಸ್ಥಾಪಕ ರಮೇಶ ಆರ್ ದುತ್ತರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿದ್ಯಾರ್ಥಿನಿ ಶೃತಿ ಪಾರ್ಥನ ಗೀತೆ ಹಾಡಿದರು.ಉಪನ್ಯಾಸಕಿ ಅಶ್ವಿನಿ ಶಿರೂರು ಸ್ವಾಗತಿಸಿದರು. ಉಪನ್ಯಾಸಕ ವಿಜಯಕುಮಾರ ಮಿಣಜಿಗಿ ಕಾರ್ಯಕ್ರಮನಿರೂಪಣೆ ಮಾಡಿದರು. ಉಪನ್ಯಾಸಕ ರೋಹಿತ್ ವಂದನಾರ್ಪಣೆ ಮಾಡಿದರು.ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಪ್ರತಿಜ್ಞಾವಿಧಿ ಭೋದಿಸಲಾಯಿತು.























