ಇಂಡಿ :ಅ.4:ಅಭಿನಂದನೆ, ಸನ್ಮಾನ, ಸತ್ಕಾರಗಳು ವ್ಯಕ್ತಿಗೆ ಪೆÇ್ರೀತ್ಸಾಹಿಸುವುದರ ಜತೆಗೆ ಸಾಧನೆ ಮಾಡಲು, ಸಮಾಜಮುಖಿಯಾಗಲು ಪ್ರೇರಣೆ ನೀಡುತ್ತದೆ. ಬಸವತತ್ವದ ಅಡಿಯಲ್ಲಿ ಎಲ್ಲರೊಂದಿಗೆ ಬೆರೆತು ಪತ್ರಿಕಾ ವೃತ್ತಿ ಮಾಡುತ್ತಿರುವ ಕನ್ನಡಪ್ರಭ ವರದಿಗಾರ ಖಾಜು ಸಿಂಗೆಗೋಳ ಅವರಿಗೆ ಬಸವಚೇತನ ಪ್ರಶಸ್ತಿ ಲಭಿಸಿದ್ದು,ನಿಜಕ್ಕೂ ಅವರು ಆ ಪ್ರಶಸ್ತಿಗೆ ಅರ್ಹರು ಎಂದು ಇಂಡಿ ಹೋಮ್ ಗಾರ್ಡ ಘಟಕಾಧಿಕಾರಿ ನಾಗರಾಜ ಗವಳಿ ಹೇಳಿದರು.
ಅವರು ಪಟ್ಟಣದ ಹೋಮ್ ಗಾರ್ಡ್ ಕಚೇರಿಯಲ್ಲಿ ಹೋಮ್ ಗಾರ್ಡ್ ಬಳಗ ಹಮ್ಮಿಕೊಂಡ ಬಸವಚೇತನ ಪ್ರಶಸ್ತಿ ಪಡೆದ ಪತ್ರಕರ್ತ ಖಾಜು ಸಿಂಗೆಗೋಳ ಅವರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಹಲವಾರು ಅಡೆತಡೆಗಳನ್ನು ದಾಟಿಕೊಂಡು ಬಂದು ಸಾಧನೆ ಮಾಡಿದವರಿಗೆ ಯಾರೋ ಈ ರೀತಿ ಸನ್ಮಾನ ಮಾಡಿದಾಗ ಇನ್ನೂ ಒಂದಷ್ಟು ಒಳ್ಳೆಯ ಕೆಲಸ ಮಾಡಲು ಹುಮ್ಮಸ್ಸು ಬರುತ್ತದೆ ಮತ್ತು ಪ್ರಶಸ್ತಿ ಪಡೆದವರನ್ನು ನೋಡಿ ಇತರರಿಗೂ ಸ್ಫೂರ್ತಿ ಬರುತ್ತದೆ. ಇದು ಶ್ಲಾಘನೀಯ ಕೆಲಸ ಎಂದು ಬಣ್ಣಿಸಿದರು. ಯಾವುದೇ ಒಂದು ಕ್ಷೇತ್ರದಲ್ಲಿ ನಾವು ಸಾಧನೆ ಮಾಡಬೇಕಾದರೆ ನಿರಂತರವಾದ ಪ್ರಯತ್ನ ಬಹಳ ಮುಖ್ಯ. ಆ ನಿರಂತರ ಪ್ರಯತ್ನದ ಫಲವೇ ಇವತ್ತಿನ ಸಾಧಕರು.ಪ್ರಶಸ್ತಿ ಪಡೆಯುವ ಸಾಧಕರು ಪ್ರಶಸ್ತಿ ಪಡೆದಿದ್ದು ಇತರರು ಮೆಚ್ಚಿಕೊಳ್ಳುವಂತಿರಬೇಕು.ಅಂದಾಗ ಪ್ರಶಸ್ತಿಗೆ ಬೆಲೆ ಬರುತ್ತದೆ.ಸಾಧನೆ ಮಾಡದೇ ಪ್ರಶಸ್ತಿ ಪಡೆದರೆ ಸಮಾಜದ ನಿಂದನೆಗೆ ಒಳಗಾಗಬೇಕಾಗುತ್ತದೆ ಎಂದು ಹೇಳಿದರು.
ಒಳ್ಳೆಯ ಸಾಧಕರನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಹಣದ ಬೆನ್ನುಹತ್ತಿ ಪ್ರಶಸ್ತಿ ಪಡೆಯುವುದು,ಪ್ರಶಸ್ತಿ ನೀಡುವುದು ಶೋಭೆಯಲ್ಲ ಎಂದು ಹೇಳಿದ ಅವರು, ಪತ್ರಿಕಾ ವೃತ್ತಿ ಧರ್ಮ ಪಾಲಿಸುತ್ತ ಸರ್ವರೊಂದಿಗೆ ಬೆರೆತು ಸರಳ ವ್ಯಕ್ತಿತ್ವ, ಬಸವ ಮಾರ್ಗದಲ್ಲಿ ಬದುಕು ಸಾಗಿಸುತ್ತಿರುವ ಖಾಜು ಸಿಂಗೆಗೋಳ ಅವರಿಗೆ ಬಸವಚೇತನ ಪ್ರಶಸ್ತಿ ದೊರೆತಿದ್ದು ಸಂತಸದ ಸಂಗತಿ ಎಂದು ಹೇಳಿದರು.
ಸಮಾಜವನ್ನು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಬಹಳ ಮುಖ್ಯ. ಪತ್ರಕರ್ತರು ಸಮಾಜದ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಾರೆ ಮತ್ತು ಸತ್ಯವನ್ನು ಜನರ ಮುಂದಿಡುತ್ತಾರೆ.ಸಮಾಜದಲ್ಲಿ ಜಾಗೃತಿ ಉಂಟಾಗುತ್ತದೆ ಎಂದು ಹೇಳಿದರು.ಯು.ಆರ್.ಪಟ್ಟಣಶೆಟ್ಟಿ,
ಆರ್.ಜೆ.ರಾಠೋಡ,ಎಸ್.ಎ.ದಾರೆಕರ,ಸಿ.ಎಂ.ಬಡಿಗೇರ,ಬಿ.ಸಿ.ಪ್ರಚಂಡಿ,ಎಫ್.ಎಂ.ಬಾಗವಾನ,ವಿ.ಆರ್.ನಿಗಡಿ,ಎ.ಎಂ.ಕುಂಟೋಜಿ,ಬಿ.ಎಸ್.ಲಾಳಸಂಗಿ, ಎಂ.ಎ.ನಾಗಠಾಣ, ಎಂ.ಎ.ವಾಲಿಕಾರ, ಎ.ಎಸ್.ಬಿಜ್ಜರಗಿ,ಜೆ.ಎ.ಮಧುರಕರ,ಡಿ.ಆರ್.ಮಾನೆ,ಡಿ.ಎಸ್.ಗವಳಿ,ಎಸ್.ಎಸ್.ಗೊಂದಳಿ,ಎನ್.ಎಸ್.ಅರಬಾಳಿ,ಎ.ಡಿ.ಪಾಟೀಲ,ಕೆ.ಬಿ.ಹೊನ್ನಕಸ್ತೂರಿ,ಎಂ.ಟಿ.ಸಪ್ತಾಳದರ,ಬಿ.ಎಸ್.ಬಿರಾದಾರ,ಆರ್.ಎಂ.ಮೇಲಿನಕೇರಿ,ಎಸ್.ಜಿ.ಕಾಂಬಳೆ,ಎಸ್.ಎಸ್.ಮಾದರ ಮೊದಲಾದವರು ಉಪಸ್ಥಿತರಿದ್ದರು.





















