Home ಜಿಲ್ಲೆ ಕಲಬುರಗಿ ನಿರಂತರ ಅಭ್ಯಾಸದಿಂದ ಸಂಗೀತ ಸಾಧನೆ

ನಿರಂತರ ಅಭ್ಯಾಸದಿಂದ ಸಂಗೀತ ಸಾಧನೆ

ಕಲಬುರಗಿ : ಮೇ.17:ಸಂಗೀತ ಕಲಿಯಬೇಕೆಂಬ ಬಯಕ ಇಂದಿನ ಯುವ ಪೀಳಿಗೆಗೆ ಬಹಳ ಉತ್ಸುಕತೆ ಇದೆ. ಅದನ್ನು ಗುರುಗಳಿಂದ ವಿದ್ಯೆಯನ್ನು ಪಡೆದು ನಿರಂತರ ಅಭ್ಯಾಸ ಮಾಡಿದಾಗ ಮಾತ್ರ ಸಾಧನೆ ಆಗುತ್ತದೆ ಎಂದು ಉಚ್ಛನ್ಯಾಯಲಯದ ಹಿರಿಯ ನ್ಯಾಯಧೀಶರಾದ ಎಸ್. ವಿ ದೇಶಮುಖ ಹೇಳಿದರು.
ಇತ್ತೀಚಿಗೆ ನಡೆದ ಶಂಕರ ಶ್ರೀ ಸಾಂಸ್ಕøತಿಕ ಕಲಾ ಸಂಘ, ಕಲಬುರಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಬೆಂಗಳೂರ ಇವರ ಆಶ್ರಯದಲ್ಲಿ ನಡೆದ ಸಂಗೀತ ನಾದೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ಮುಖಂಡ ಶಿವರಾಯ ಹೂಗಾರ ಮಾತನಾಡಿ, ಅನೇಕ ವಿದ್ಯೆಗಳಲ್ಲಿ ಸಂಗೀತ ವಿದ್ಯೆ ಶ್ರೇಷ್ಠ ವಿದ್ಯೆ ಆಗಿದೆ. ಅದನ್ನು ಪೆÇೀಷಿಸುವುದು ನಮ್ಮೆಲ್ಲರ ಕರ್ತವ್ಯ ಆಗಿದೆ ಎಂದು ಹೇಳಿದರು. ಸಂಗಣ್ಣಗೌಡ ಎಸ್. ಎಮ್. ಸಿದ್ದಣ್ಣ ಅಂಬಲಗಿ ಪ್ರಕಾಶ ಪಾಟೀಲ ಭಾಗವಹಿಸಿದರು. ನಂತರ ಸಂಗೀತ ಕಾರ್ಯಕ್ರಮದಲ್ಲಿ ದತ್ತರಾಜ ಕಲಶೇಟ್ಟಿ ,ಮಲ್ಲಿಕಾರ್ಜುನ ಮಣ್ಣೂರ, ಸಂಗಮೇಶ ನೀಲಾ, ತೋಟಯ್ಯ ಶಾಸ್ತ್ರೀ, ಶಿವಶರಣಯ್ಯ ಸ್ವಾಮಿ, ಶಿವಶರಣ ಪೂಜಾರಿ, ಕಲ್ಮೇಶ ಹೂಗಾರ, ರೇವಣಸಿದ್ದ ಹೂಗಾರ, ಮನೋಹರ ಟೇಂಗಳಿ, ಪೂಜಾ ಮಡಿವಾಳ, ಬಸವರಾಜ ಮಡಿವಾಳ ಇವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಸಂಸ್ಥೆಯ ಅಧ್ಯಕ್ಷ ಜಗದೀಶ ಹೂಗಾರ ನಿರೂಪಿಸಿದರು. ಹಿರಿಯ ಸಂಗೀತ ಕಲಾವಿದರಾದ ಸಿದ್ದಣ್ಣ ಹೂಗಾರ ವಂದಿಸಿದರು.