
ಹುಮನಾಬಾದ್:ಮೇ.19:ಸಂಗೀತ ಅಂತರಾಳದ ಸಂಕಷ್ಟವನ್ನು ದೂರಮಾಡುತ್ತದೆ ಎಂದು ಶ್ರೀ ಮಾಣಿಕ ಪ್ರಭು ಅಂಧ ಮಕ್ಕಳ ಶಾಲೆಯ ಮುಖ್ಯ ವ್ಯವಸ್ಥಾಪಕ ಪ್ರಭು ಪಂಚಾಳ ಹೆಳಿದರು.
ಮಾಣಿಕ ನಗರದ ಶ್ರೀ ಮಧುಮತಿ ಕಲ್ಯಾಣ ಮಂಟಪದಲ್ಲಿ ಸ್ವರಸಿಂಧು ಯುಜನ ಮತ್ತು ಸಾಂಸ್ಕøತಿಕ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃಇ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಮಾನಸಿಕ ಸ್ಥಿರತೆಗೆ, ನೇಮ್ಮದಿ ಜೀವನಕ್ಕೆ ಸಂಗೀತ ಅವಶ್ಯವಾಗಿದೆ ಎಂದರು.
ಸುವರ್ಣ ಕಾರರ ಸಂಘದ ಮುಖಂಡರಾದ ರಮೇಶ ಸೋನಾರ ಮಾತನಾಡಿ ಜಾನಪದ ಸಾಹಿತ್ಯ ಮತ್ತು ಸಂಗೀತ ಸಾಮಾನ್ಯ ಜನರಿಂದ ರಚಿತವಾಗಿದ್ದು, ನಮ್ಮ ಜನರ ಬದುಕು ರಿತಿ-ನಿತಿ ಜೀವನ ಶೈಲಿಯನ್ನು ಬಿಂಬಿಸುತ್ತದೆ, ಜಾತಿ,ಮತ,ಧರ್ಮ ಭೆದವಿಲ್ಲದೆ ಜನಪದ ಸಾಹಿತ್ಯ ಹಿಂದಿನ ಕಾಲದಿಂದ ಇಂದಿನವರೆಗೂ ಎಲ್ಲರ ಜೀವನದಲ್ಲಿ ಹಾಸು ಹೊಕ್ಕಾಗಿದೆ ಎಂದರು.
ವಿಶ್ವಕರ್ಮ ಸಮಾಜದ ಹಿರಿಯ ಮುಖಂಡರಾದ ಶ್ರೀ ರಾಮಚಂದ್ರ ಪಂಚಾಳ. ದಿನಕರ ಪಿ. ಶಿಕ್ಷಕ ಸಂದಿಪ ಮತನಾಡಿದರು. ಮಾಜಿ ಗ್ರಾಮ ಪಂಚಾಯತ ಸದಸ್ಯ ಸಂಗಪ್ಪಾ ಎಮ್,ಪಿ. ಅಧ್ಯಕ್ಷತೆ ವಹಿಸಿದರು. ಖ್ಯಾತ ಕಲಾವಿದರಾದ ಶ್ರೀ ಮಂಜುನಾಥ ಉಡುಬನಳ್ಳಿ ತತ್ವಪದ ಹಾಡಿ ಎಲ್ಲರನ್ನು ರಂಜಿಸಿದರು. ಸೂರ್ಯಕಾಂತ ಹಡಪದ ಜಾನಪದ ಹಾಡಿದರು.
ರಮೇಶ ಪಂಚಾಳ ವಳಖಿಂಡಿ ವಚನ ಗೀತೆ ಹಾಡಿದರು. ಕು.ದಿಶಾ ದಿನಕರ ಭಕ್ತಿಗೀತೆ ಹಾಡಿದರು. ಕು.ನಿಕಿತಾ ಪ್ರಭು ದಾಸವಾಣಿ ಗೀತೆಗಳು ಹಾಡಿದರು. ಆಕಾಶವಾಣಿ ಕಲಾವಿದ ಮನೋಹರ ವಿಶ್ವಕರ್ಮ ಸುಗಮ ಸಂಗೀತ ನಡೆಸಿಕೊಟ್ಟರು. ಯುವಕಲಾವಿದ ದಿನೇಶ ಕುಲಕರ್ಣಿ ಹರ್ಮೋನಿಯಂ, ಖ್ಯಾತ ತಬಲಾ ಛತ್ರಪ್ಪಾ ಹಡಪದ ತಬಲಾ ಸಾಥ್ ನೀಡಿದರು. ಸಾಗರ ಸ್ವಾಗತಿಸಿದರು. ಶ್ರೀಮತಿ ಸ್ವಪ್ನಾ ನಿರೂಪಿಸಿದರು.






















