
ಕಲಬುರಗಿ,ಮೇ.11-ಶರಣ ಸಿರಸಗಿಯ ಶರಣಬಸವೇಶ್ವರ ಮಹಾಮನೆಯಲ್ಲಿ ಭಾನುವಾರ ಪಂ.ಪುಟ್ಟರಾಜ ಗವಾಯಿಗಳ ಸಾಂಸ್ಕøತಿಕ ಹಾಗೂ ಶಿಕ್ಷಣ ಸೇವಾ ಟ್ರಸ್ಟ್ ಜೇವರ್ಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ವೇ. ಸಿದ್ದಯ್ಯ ಶಿವಲಿಂಗಯ್ಯ ಹಿರೇಮಠ ಮಾತನಾಡಿ ಸಂಗೀತ ಒಂದು ಕೇವಲ ಒಂದು ದೇಶಕ್ಕೆ ಸೀಮಿತವಲ್ಲ ಅದು ವಿಶ್ವದ ಭಾಷೆ, ಯಾವ ದೇಶ ಸುತ್ತಿದರು ಸಂಗೀತಕ್ಕೆ ಒಂದೇ ಇರುತ್ತದೆ, ಈ ಸಂಸ್ಥೆಯು ಪ್ರತಿ ವರುಷ ಸಂಗೀತ ಸಮ್ಮೇಳನವನ್ನು ಹಮ್ಮಿಕೊಂಡು ಬಹಳ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ. ನಮ್ಮ ಶರಣ ಶಿರಸಿಗಿ ಗ್ರಾಮದಲ್ಲಿ ಇಂತ ಸಂಗೀತ ಹಮ್ಮಿಕೊಂಡಿದ್ದು ನಮ್ಮೆಲ್ಲರ ಭಾಗ್ಯವೆಂದು ತಿಳಿಸಿದರು.
ಉದ್ಘಾಟಕರಾಗಿ ಆಗಮಿಸಿದ್ದ ಶರಣಗೌಡ ಉಮರಾವ ಪೆÇಲೀಸ್ ಪಾಟೀಲ ಮಾತನಾಡಿ ಭಾರತದಲ್ಲಿ ಸಂಗೀತ ಕ್ಷೇತ್ರದಲ್ಲಿ ಹಲವಾರು ದಿಗ್ಗಜರನ್ನು ನಾವು ಕಂಡಿದ್ದೇವೆ ಅದರಲ್ಲಿ ನಮ್ಮ ಕರ್ನಾಟಕದಲ್ಲಿ ಪಂ ಪುಟ್ಟರಾಜ ಗವಾಯಿಗಳು ಹುಟ್ಟುಹಾಕಿದ ಮರದ ಬಳ್ಳಿಗಳು ನಮ್ಮ ಸಂಗೀತ ಕಲಾವಿದರು, ಅವರ ನಿಸ್ವಾರ್ಥ ಸೇವೆಯಿಂದ ಎಷ್ಟೋ ಜನ ಇವತ್ತು ಕಲಾವಿದರಾಗಿ ಅವರ ಜೀವನವನ್ನು ನಡೆಸುತ್ತಿದ್ದಾರೆ, ಗವಾಯಿಗಳು ಕೇವಲ ಸಂಗೀತ ವಲ್ಲದೆ ಹಲವಾರು ಶರಣ ಪುರಾಣ ಪ್ರವಚನವನ್ನು ಬರೆದಿದ್ದಾರೆ ಅದರಲ್ಲಿ ನಮ್ಮ ಕಲಬುರಗಿ ಶರಬಸವೇಶ್ವರರ ಪುರಾಣವು ಒಂದಾಗಿರುತ್ತೆ ಎಂದು ಬಹಳ ಚೆನ್ನಾಗಿ ಮಾತನಾಡಿದರು. ಶರಣಬಸಪ್ಪ ಬಸವನಪ್ಪ ಪಟ್ಟಣಕರ, ಅಂಬಾರಿಯ ಶಿವಶರಣಪ್ಪ ಹಂಗರಗಿ, ಶರಣಬಸಪ್ಪ ಭೀಮಾಶಂಕರ ಜಮಾದಿಯವರು ಸಂಗೀತ ಕಲಾವಿದರ ಸಿದ್ರಾಮಪ್ಪ ಪೆÇಲೀಸ್ ಪಾಟೀಲ ಕುಕನೂರು ಅವರು ಮಾತನಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈರೀತಿ ಧನಸಹಾಯ ನೀಡುತ್ತಿರುವುದರಿಂದ ಕರ್ನಾಟಕ ರಾಜ್ಯದ ಕಲಾವಿದರಿಗೆ ಬಹಳ ಅನುಕೂಲವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಿಂದೂಸ್ತಾನಿ ಸಂಗೀತವನ್ನು ಸಿದ್ರಾಮಪ್ಪ ಪೆÇಲೀಸ್ ಪಾಟೀಲ ಗವಾಯಿಗಳು ಕುಕನೂರು ರವರು ನೀಡಿದರು, ಮಹಾಂತಯ್ಯ ಮಂತಳ ಸುಗಮ ಸಂಗೀತ ನೀಡಿದರು, ಬಾಬುರಾವ ಕೋಬಳ, ಲಕ್ಷ್ಮಿಕಾಂತ ವಿಶ್ವಕರ್ಮ, ಶಿವಶಂಕರ್ ಗೋಬರ್ ತತ್ವಪದ ಸಂಗೀತ ಸೇವೆ ಸಲ್ಲಿಸಿದರು ಹಾಗೂ ಮಹಾಂತೇಶ ಹರವಾಳ, ವಿಶ್ವನಾಥ ಐನೊಳ್ಳಿ ತಬಲಾ ಸಾಥ್ ನೀಡಿದರು ಎಂದು ಸಂಸ್ಥೆಯ ಕಾರ್ಯದರ್ಶಿಗಳಾದ ಶಿವಾನಂದ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



























