ಸಂಗೀತ- ಜಾನಪದ ಇಂದಿಗೂ ಪ್ರಸ್ತುತ: ಡಾ.ಜಯದೇವಿ ಗಾಯಕವಾಡ

ಕಲಬುರಗಿ: ಫೆ.3:ಸಂಗೀತ ಜಾನಪದ ಒಂದು ನಾಣ್ಯದ ಮುಖ.
ಸಂಗೀತ ಮೂಲಕ ನಮಗೆ ಬಿಪಿ,ಷುಗರ್ ದೂರ ಮಾಡುವ ಮಳೆಯನ್ನೇ ತರಿಸುವ,ಆಕಳುಗಳು ಸಂಗೀತ ಆಲಿಸಿ ಹಾಲು ಕೊಡಿವ ಶಕ್ತಿ ಇದೆ.ಜಾನಪದ ಸಾಹಿತ್ಯ ಜನರಿಂದ ಜನರಿಗೆ ಬಂದ ಮೌಖಿಕ ಪರಂಪರೆ ಇದರ ಮೂಲಕ ಶರಣರು ಸಹ ಜಾನಪದದ ಮೂಲಕ ವಚನ ರಚಿಸಿದರು.
ಗುರು, ಹಿರಿಯರು, ತಂದೆ, ತಾಯಿ ಯನ್ನು ಗೌರವಿಸುವ ನೀತಿಯನ್ನು ಜಾನಪದ ಹೇಳುತ್ತದೆ ಜನಪದ ಸಂಸ್ಕøತಿಯು ಜೀವನ ಮೌಲ್ಯಗಳನ್ನು ಬಿತ್ತರಿಸುತ್ತವೆ ಹೀಗಾಗಿ ಸಂಗೀತ ಮತ್ತು ಜಾನಪದ ಇಂದಿಗೂ ಪ್ರಸ್ತುತ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯರಾದ ಡಾ.ಜಯದೇವಿ ಗಾಯಕವಾಡ ಅಭಿಮತ ವ್ಯಕ್ತಪಡಿಸಿದರು

ಗೋಕುಲ ನಗರದ ಸಾಂಸ್ಕೃತಿಕ ಭವನದಲ್ಲಿ ಜರುಗಿದ ಮಹಾಂತ ಜ್ಯೋತಿ ಪ್ರತಿಷ್ಠಾನ,ಕಲಬುರಗಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಬುರಗಿ ಪ್ರಾಯೋಜಿತ ಸುಗಮ ಸಂಗೀತ ಹಾಗೂ ಜಾನಪದ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಾನಪದ ಸಾಹಿತ್ಯ ಹುಲುಸಾಗಿ ಬಂದಿದೆ.ಜನಪದರು ಉಸಿರು ಹಸಿರಾಗಿದೆ.ಜಾನಪದ ತ್ರಿಪದಿಗಳು ಮನುಷ್ಯನ ಬದುಕಿಗೆ ಜಾನಪದ ಗಂಗೋತ್ರಿಯಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಸುಗಮ ಸಂಗೀತ ಕನ್ನಡ ಕವಿಗಳಾದ ಬೇಂದ್ರೆ, ಕುವೆಂಪು, ಜಿ.ಎಸ್.ಎಸ್.ಮೊದಲಾದವರ ಗೀತೆ ಪ್ರಸಿದ್ಧವಾಗಿವೆ. ಜಾನಪದ ಸಾಹಿತ್ಯ ಹಾಡಿನ ಮೂಲಕ ಜನಪ್ರಿಯವಾದರೆ ಇಂದು ಅಶ್ಲೀಲ ಪದ ಬಳಕೆಗೆ ಕಡಿವಾಣ ಹಾಕಬೇಕಾಗಿದೆ ಎಂದರು.ಶ್ರೀಮತಿ ಪ್ರಭಾ ಎಂ.ಪ್ರಭಾರಿ ವೇದಿಕೆ ಮೇಲಿದ್ದರು.ಅಧ್ಯಕ್ಷತೆಯನ್ನು ಹಿರಿಯ ಪತ್ರಿಕೋದ್ಯಮಿ ಡಾ.ಬಸವರಾಜ ಕೊನೇಕ ವಹಿಸಿ ನಮ್ಮ ಜೀವನದ ಸಂಗೀತ -ಜಾನಪದ ಅವಿಭಾಜ್ಯ ಅಂಗವಾಗಿದೆ ಎಂದರ.ಸಾನಿಧ್ಯವನ್ನು ರುದ್ರಾಕ್ಷಿ ಮಠದ ಮಾತೋಶ್ರೀ ಕಸ್ತೂರಿಬಾಯಿ ವಹಿಸಿದ್ದರು. ಸಂಗೀತಗಾರರಾದ ಮಾಜಿ ಜಾನಪದ ಅಕಾಡೆಮಿ ಸದಸ್ಯರಾದ ಶ್ರೀಮತಿ ಹನಿಫಾ ಎಂ. ಶೇಖ ಕಲಾ ತಂಡ ಮತ್ತು ಶ್ರೀ ತಿಪ್ಪಣ್ಣ ಸ್ವಾಮಿ ಕಲಾತಂಡ ಜಾನಪದ ಗಾಯನವನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿ ದರು.ಜಗನ್ನಾಥ ಚೇಂಗಟೆ ತಬಲಾ ಸಾಥಿನೀಡಿದರೆ ಸೂರ್ಯಕಾಂತ ಹಾರ್ಮೋನಿಯಂ ಸಾಥ್ ನೀಡಿದರು.
ಖ್ಯಾತ ಕಲಾವಿದ ಸೂರ್ಯಕಾಂತ ಪ್ರಾರ್ಥನೆ ಗೀತೆ ಹಾಡಿದರು.ಪ್ರತಿಷ್ಠಾನ ಕಾರ್ಯದರ್ಶಿ ಶಾಂತಾ ವಾಲಿ ಸ್ವಾಗತಿಸಿದರು.ಮಹಾಂತಜ್ಯೋತಿ ಪ್ರತಿಷ್ಠಾನ ಅಧ್ಯಕ್ಷ ಪೆÇ್ರ.ಶಿವರಾಜ ಪಾಟೀಲ ಪ್ರಾಸ್ತಾವಿಕ ನುಡಿ ಆಡಿದರು. ಡಾ.ನಾನಾಗೌಡ ಪಾಟೀಲ ನಿರೂಪಿಸಿದರು ಡಾ.ಶೀಲಾದೇವಿ ಬಿರಾದಾರ ವಂದಿಸಿದರು.

ಗೋಕುಲ ನಗರದ ಸಾಂಸ್ಕೃತಿಕ ಭವನದಲ್ಲಿ ಜರುಗಿದ ಮಹಾಂತ ಜ್ಯೋತಿ ಪ್ರತಿಷ್ಠಾನ,ಕಲಬುರಗಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಬುರಗಿ ಪ್ರಾಯೋಜಿತ ಸುಗಮ ಸಂಗೀತ ಹಾಗೂ ಜಾನಪದ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯರಾದ ಡಾ.ಜಯದೇವಿ ಗಾಯಕವಾಡ ಅಭಿಮತ ವ್ಯಕ್ತಪಡಿಸಿದರು.ಮುಖ್ಯ ಅತಿಥಿಗಳಾಗಿ ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ,ಶ್ರೀಮತಿ ಪ್ರಭಾ ಎಂ.ಪ್ರಭಾರಿ,ಹಿರಿಯ ಪತ್ರಿಕೋದ್ಯಮಿ ಡಾ.ಬಸವರಾಜ ಕೊನೇಕ,ಸಾನಿಧ್ಯವನ್ನು ರುದ್ರಾಕ್ಷಿ ಮಠದ ಮಾತೋಶ್ರೀ ಕಸ್ತೂರಿಬಾಯಿ ವಹಿಸಿದ್ದರು.ಸಂಗೀತಗಾರರಾದ ಮಾಜಿ
ಜಾನಪದ ಅಕಾಡೆಮಿ ಸದಸ್ಯರಾದ ಶ್ರೀಮತಿ ಹನಿಫಾ ಎಂ. ಶೇಖ ಕಲಾ ತಂಡ ಮತ್ತು ಶ್ರೀ ತಿಪ್ಪಣ್ಣ ಸ್ವಾಮಿ ಕಲಾತಂಡ ಜಾನಪದ ಗಾಯನವನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿ ದರು.ಜಗನ್ನಾಥ ಚೇಂಗಟೆ ತಬಲಾ ಸಾಥಿನೀಡಿದರೆ ಸೂರ್ಯಕಾಂತ ಹಾರ್ಮೋನಿಯಂ ಸಾಥ್ ನೀಡಿದರು.
ಹಾಡಿದರು.ಪ್ರತಿಷ್ಠಾನ ಕಾರ್ಯದರ್ಶಿ ಶಾಂತಾ ವಾಲಿ ಸ್ವಾಗತಿಸಿದರು.ಮಹಾಂತಜ್ಯೋತಿ ಪ್ರತಿಷ್ಠಾನ ಅಧ್ಯಕ್ಷ ಪೆÇ್ರ.ಶಿವರಾಜ ಪಾಟೀಲ ಪ್ರಾಸ್ತಾವಿಕ ನುಡಿ ಆಡಿದರು. ಡಾ.ನಾನಾಗೌಡ ಪಾಟೀಲ ನಿರೂಪಿಸಿದರು ಡಾ.ಶೀಲಾದೇವಿ ಬಿರಾದಾರ ವಂದಿಸಿದರು.