
ಕಲಬುರಗಿ,ಮೇ 26: ನಗರದ ಡಾ.ಎಸ್.ಎಂ ಪಂಡಿತ ರಂಗಮಂದಿರದಲ್ಲಿಂದು ಅಫಜಲಪುರ ತಾಲೂಕು ಅವರಳ್ಳಿಯ ಸಂಗೀತರಸಋಷಿ ಪಂಡಿತ ಪುಟ್ಟರಾಜ ಗವಾಯಿ ಸಮಗ್ರಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳವರ 81 ನೇ ಪುಣ್ಯ ಸ್ಮರಣೋತ್ಸವ ಹಾಗೂ ಗಾನಯೋಗಿ ಪುಟ್ಟರಾಜ ಕವಿ ಗವಾಯಿಗಳವರ 15 ನೇ ಪುಣ್ಯ ಸ್ಮರಣೋತ್ಸವ ಹಾಗೂ ಗುರುಸೇವಾರತ್ನ ರಾಷ್ಟ್ರೀಯ ಪ್ರಶಸ್ತಿ ಮತ್ತು ರಾಜ್ಯಮಟ್ಟದ ಹೆಬ್ಬಾಳದ ವರಕವಿರತ್ನ ಪ್ರಶಸ್ತಿ ಪ್ರದಾನ ಸಮಾರಂಭ ,ಗ್ರಂಥ ಬಿಡುಗಡೆ,ಅಂತರಾಷ್ಟ್ರೀಯ ಕಲಾವಿದರಿಂದ ಸಂಗೀತೋತ್ಸವ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾ ಭಗವತ್ಪಾದಂಗಳವರು ವಹಿಸಿದ್ದರು.ಕೇಸರಿಬೆಟ್ಟ ವಿಕೆ ಸಲಗರ ಸಂಸ್ಥಾನ ಹಿರೇಮಠದ ತಪೋರತ್ನ ಬಾಲ ತಪಸ್ವಿ ದ್ವಿತೀಯ ಸಾಂಬ ಶಿವಾಚಾರ್ಯ ಮಹಾರಾಜರು ನೇತೃತ್ವ ವಹಿಸಿದ್ದರು.
ಭರತನೂರ ವಿರಕ್ತಮಠದ ಚಿಕ್ಕ ಗುರುನಂಜೇಶ್ವರ ಮಹಾಸ್ವಾಮಿಗಳು,ನಾಲತವಾಡ ಸಂಸ್ಥಾನ ಹಿರೇಮಠದ ಗುರು ಮಹಾಸ್ವಾಮಿಗಳು,ಕರಜಗಿ ಸಂಸ್ಥಾನ ಹಿರೇಮಠದ 108 ರೇಣುಕ ಶಿವಾಚಾರ್ಯರು,ಕಲ್ಲಬೇನೂರು ಉದ್ಭವ ಲಿಂಗೇಶ್ವರ ಮಠದ ಬಸವ ದೇವರು ಉಪಸ್ಥಿತರಿದ್ದರು.ಅವರಳ್ಳಿಯ ರಾಜುಗೌಡ ಪೊಲೀಸ್ ಪಾಟೀಲ,ಪ್ರಭುಗೌಡ ಪೊಲೀಸ್ ಪಾಟೀಲ್ ಸೇರಿದಂತೆ ಹಲವಾರು ಗಣ್ಯರು, ಹಿರಿಯ ಮತ್ತು ಯುವ ಸಂಗೀತ ಕಲಾವಿದರು ಉಪಸ್ಥಿತರಿದ್ದರು






















