
ಬೀದರ್:ಮಾ.8: ಸಂಗೀತದಿಂದ ಮನುಷ್ಯನಿಗೆ ಸಂಸ್ಕಾರ ಮತ್ತು ಸಂತೃಪ್ತಿ ಲಭಿಸುತ್ತದೆ ಎಂದು ಲೋಕಸಭಾ ಸದಸ್ಯ ಸಾಗರ ಖಂಡ್ರೆ ತಿಳಿಸಿದರು.
ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಹಯೋಗದಲ್ಲಿ ಪಂಚಾಕ್ಷರ ಗವಾಯಿ 81ನೇ ಪುಣ್ಯತಿಥಿ, ಪುಟ್ಟರಾಜ ಗವಾಯಿಗಳ 15ನೇ ಪುಣ್ಯತಿಥಿ ಹಾಗೂ ಸಂಘದ 23ನೇ ವಾರ್ಷಿಕೋತ್ಸವ ನಿಮಿತ್ಯ ಜರುಗಿದ ರಾಜ್ಯಮಟ್ಟದ ಸಂಗೀತ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಸಮಾರೋಪ ಭಾಷಣದಲ್ಲಿ ಮಾತನಾಡಿದರು.
ಸಂಗೀತದಿಂದ ಗುರು-ಶಿಷ್ಯರ ಪರಂಪರೆ ಬೆಳೆಯುತ್ತದೆ. ಜಾತಿ ಧರ್ಮಗಳಾಚೆ ಪರಸ್ಪರ ವಿನಯದಿಂದ ನಮಸ್ಕರಿಸಿಕೊಳ್ಳುತ್ತಾರೆ. ಇದರಿಂದಲೇ ವ್ಯಕ್ತಿಗೆ ಸಂಸ್ಕಾರ ಲಭಿಸುತ್ತದೆ. ಸಂಗೀತಕ್ಕೆ ಪೆÇ್ರೀತ್ಸಾಹ ನೀಡಲಾಗುವುದು. ಕೇಂದ್ರ ಸರ್ಕಾರದಿಂದಲೂ ಕಲಾವಿದರಿಗೆ ಮಾಶಾಸನ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಾಗರ ಈ. ಖಂಡ್ರೆ ಭರವಸೆ ನೀಡಿದರು.
ಹಾರಕೂಡದ ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ಮಾತನಾಡುತ್ತ ನಮ್ಮ ಶ್ರೀಮಠವು ಕಲಾವಿದರಿಗೆ ಹಾಗೂ ಸಾಹಿತಿಗಳಿಗೆ ನಿರಂತರವಾಗಿ ಪೆÇ್ರೀತ್ಸಾಹ ನೀಡುತ್ತ ಬಂದಿದೆ. ಕಲೆ ಎಂಬುದು ವ್ಯಕ್ತಿಯ ಗುರುತಾಗಿದೆ. ಎಂತಹ ಕಲೆ ಅಭಿವ್ಯಕ್ತಪಡಿಸುತ್ತೇವೆಯೋ ಅಂತಹ ಗುಣಗಳು ನಮ್ಮಲ್ಲಿ ಬೆಳೆಯುತ್ತವೆ. ಆದ್ದರಿಂದ ದೇಶಿ ಕಲೆಗೆ ಹೆಚ್ಚು ಒತ್ತು ನೀಡಬೇಕೆಂದು ಪ್ರತಿಪಾದಿಸಿದರು.
ಸಮ್ಮೇಳನದಲ್ಲಿ ಪ್ರಮುಖ ನಾಲ್ಕು ನಿರ್ಣಯಗಳನ್ನು ಕೈಗೊಳ್ಳಲಾಯಿತು. ರಾಜ್ಯ ಸರ್ಕಾರ ಶೀಘ್ರವೇ ಬಹುದಿನಗಳಿಂದ ಬಾಕಿ ಉಳಿದಿರುವ ಸಂಗೀತ ಶಿಕ್ಷಕರ ನೇಮಕಾತಿ ಮಾಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಲಾವಿದರ ಮಾಶಾಸನ ಹೆಚ್ಚಳ ಮಾಡಬೇಕು. ಪಂಚಾಕ್ಷರ ಗವಾಯಿ ಸೇವಾ ಸಂಘದ ನಿವೇಶನದಲ್ಲಿ ಕಲಾಭವನ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಬೇಕು. ಕಲಾವಿದರಿಗೆ ತರಬೇತಿ ಮತ್ತು ವಸತಿಗಾಗಿ ನಗರದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಬೇಕೆಂಬ ನಾಲ್ಕು ನಿರ್ಣಯಗಳನ್ನು ಸಂಘದ ಗೌರವಾಧ್ಯಕ್ಷ ಪೆÇ್ರ. ಎಸ್.ವಿ.ಕಲ್ಮಠ ಮಂಡಿಸಿದರು. ಸಭೀಕರು ಕರತಾಡನ ಮೂಲಕ ಒಪ್ಪಿಗೆ ಸೂಚಿಸಿದರು.
ಇದೇ ವೇಳೆ ವೇದಿಕೆ ಮೇಲೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಡಿವಾಳಯ್ಯ ಸಾಲಿ ಅವರಿಗೆ ಪಂಚಾಕ್ಷರ ಪ್ರಶಸ್ತಿ, ಏಕನಾಥ ಸಿದ್ದೆಸುರೆ ಅವರಿಗೆ ಪುಟ್ಟರಾಜ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪೂಜ್ಯ ಜ್ಯೋತಿರ್ಮಯಾನಂದ ಸ್ವಾಮೀಜಿ ರಾಮಕೃಷ್ಣಾಶ್ರಮ ಬೀದರ, ಡಾ. ಗಂಗಾಂಬಿಕಾ ಅಕ್ಕ ಬಸವಗಿರಿ ಬೀದರ, ಪ್ರಭುದೇವ ಸ್ವಾಮೀಜಿ ಲಿಂಗಾಯತ ಮಹಾಮಠ, ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾಳೆ, ಲಿಂಗಾಯತ ಸಮಾಜ ಅಧ್ಯಕ್ಷ ಬಿ.ಜಿ.ಶೆಟಕಾರ, ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ, ಸರ್ವಾಧ್ಯಕ್ಷ ಎಸ್.ಕೆ.ಪಾಟೀಲ, ಜಾಗತಿಕ ಲಿಂಗಾಯತ ಮಹಾಸಭೆ ಅಧ್ಯಕ್ಷ ಬಸವರಾಜ ಧನ್ನೂರ, ಉದ್ಯಮಿ ಜೈರಾಜ ಖಂಡ್ರೆ, ಡಾ. ಮಲ್ಲಿಕಾರ್ಜುನ ಚಟನಳ್ಳಿ ಹಾಜರಿದ್ದರು. ಖ್ಯಾತ ಸಂಗೀತಗಾರರಾದ ವೆಂಕಟೇಶ ಅಲಕೋಡ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.


















