ಅಣಬೆ ಕೃಷಿ ಮಹಿಳೆಯರ ಸಬಲೀಕರಣಕ್ಕೆ ದಾರಿ

ದೇವನಹಳ್ಳಿ ಬೆಂ ಗ್ರಾ ಆ೧೧,ಬೆಂಗಳೂರು ಗ್ರಾ ಜಿಲ್ಲೆಯದೇವನಹಳ್ಳಿ ತಾಲೂಕಿನಯಲಿಯೂರು ಗ್ರಾಮದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ (ಖಂWಇ) ಕಾರ್ಯಕ್ರಮದ ಭಾಗವಾಗಿ ‘ಅಣಬೆ ಕೃಷಿ: ಮಹಿಳೆಯರ ಸಬಲೀಕರಣಕ್ಕೆ ಹೊಸ ದಾರಿ’ ಎಂಬ ವಿಷಯದ ಕುರಿತು ಜಿಕೆವಿಕೆ ಕೃಷಿ ವಿಶ್ವ ವಿಶ್ವವಿದ್ಯಾಲಯ ವಿಧ್ಯಾರ್ಥಿಗಳಿಂದ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.


ಕಾರ್ಯಕ್ರಮದಲ್ಲಿ ಕೃಷಿ ಜೀವಾಣು ಶಾಸ್ತ್ರದ ಸಹಾಯಕ ಪ್ರಾಚಾರ್ಯ ಡಾ. ಬಿಂದುಶ್ರೀ ಅವರು ರಂಗಿನ ಮಾತುಗಳಿಂದ ದೃಷ್ಟಿಯಿಂದ ಅಣಬೆ ಕೃಷಿಯ ಮಹತ್ವವನ್ನು ವಿವರಿಸುತ್ತಾ “ಅಣಬೆ (ಮಶ್ರೂಮ್) ಕೃಷಿ ಒಂದು ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ, ಕಡಿಮೆ ಸ್ಥಳದಲ್ಲಿ ಹೆಚ್ಚು ಆದಾಯ ನೀಡುವ ಕೃಷಿ ಪದ್ಧತಿ. ಇದು ಮನೆಯಲ್ಲೇ ಸುಲಭವಾಗಿ ಬೆಳೆಯಬಲ್ಲದು. ಮಹಿಳೆಯರು ಮನೆಯ ಕೆಲಸದ ಜೊತೆಗೆ ಇದನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾಗಿದೆ,” ಎಂದು ಹೇಳಿದರು.


ಅವರು ಅಣಬೆ ಬೆಳೆದುಕೊಳ್ಳುವ ವಿಧಾನ, ಹವಾಮಾನ, ಶುದ್ಧತೆಯ ನಿಯಮಗಳು ಹಾಗೂ ಮಾರುಕಟ್ಟೆ ವ್ಯವಸ್ಥೆ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು.


ಕಾರ್ಯಕ್ರಮದಲ್ಲಿ ಕೃಷಿ ವಿಸ್ತರಣಾ ವಿಭಾಗದ ಸಹ ಪ್ರಾಧ್ಯಾಪಕಿ ಹಾಗೂ ಖಂWಇ ಶಿಕ್ಷಕಿ ಡಾ. ಹಚ್.ಕೆ. ಪಂಕಜಾ ಅವರು ಉಪಸ್ಥಿತರಿದ್ದರು. ಅವರು ಕಾರ್ಯಕ್ರಮದ ಮಹತ್ವವನ್ನು ತಿಳಿಸಿ, “ಈ ರೀತಿಯ ಶೈಕ್ಷಣಿಕ ಕಾರ್ಯಕ್ರಮಗಳು ಗ್ರಾಮೀಣ ಮಹಿಳೆಯರಿಗೆ ಆತ್ಮವಿಶ್ವಾಸವನ್ನು ನೀಡುತ್ತವೆ ಮತ್ತು ಅವರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತವೆ,” ಎಂದು ಹೇಳಿದರು.


ಈ ಉಪನ್ಯಾಸದಲ್ಲಿ ಸುಮಾರು ೪೦ಕ್ಕಿಂತ ಹೆಚ್ಚು ಮಹಿಳೆಯರು ಭಾಗವಹಿಸಿದ್ದು, ಕಾರ್ಯಕ್ರಮದ ನಿರ್ವಹಣೆಯನ್ನು ಕೃಷಿ ಮಹಾವಿದ್ಯಾಲಯ, ಜಿ.ಕೆ.ವಿ.ಕೆ ಬೆಂಗಳೂರಿನ ೪ನೇ ವರ್ಷದ ವಿದ್ಯಾರ್ಥಿಗಳು ಯಶಸ್ವಿಯಾಗಿ ನಡೆಸಿದರು.


ಅಣಬೆ ಕೃಷಿಯ ಪ್ರಾಯೋಗಿಕ ಪ್ರದರ್ಶನ ಹಾಗೂ ಅನುಭವ ಹಂಚಿಕೆಯ ಮೂಲಕ ಈ ಕಾರ್ಯಕ್ರಮ ಮಹಿಳೆಯರಲ್ಲಿ ತೀವ್ರ ಚಟುವಟಿಕೆಯನ್ನು ಉಂಟುಮಾಡಿದ್ದು, ಭವಿಷ್ಯದಲ್ಲಿ ಇದನ್ನು ವೃತ್ತಿಯಾಗಿ ಆರಂಭಿಸಲು ಇಚ್ಛೆ ವ್ಯಕ್ತಪಡಿಸಿದರು.


ಮಹಿಳೆಯರಿಗೆ ಅಣಬೆ ಕೃಷಿ – ಹೊಸ ಆದಾಯದ ಹಾದಿ, ಸಬಲೀಕರಣದ ಸಾಧನೆ!