ವಿಧಾನ ಪರಿಷತ್ ಸದಸ್ಯ ಅನಿಲ್‌ರಿಂದ ಬೆದರಿಕೆ- ಮುರಳಿ ಆರೋಪ

ಕೋಲಾರ,ಸೆ,೨- ಕೋಲಾರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ ಚಂಚಿಮಲೆ ಗ್ರಾಮದಿಂದ ಸೀತಿ ಹೂಸೂರು ಮತ್ತು ಬೈರಂಡಹಳ್ಳಿ ಮಾರ್ಗವಾಗಿ ಕಡಗಟ್ಟೂರು ಗ್ರಾಮದವರೆಗೆ ಸುಮಾರು ೫ ಕೋಟಿ ರೂ ವೆಚ್ಚದ ಕಾಮಗಾರಿಯ ಶಂಕುಸ್ಥಾಪನೆಯ ಕಾರ್ಯಕ್ರಮ ಭಾನುವಾರವು ಶಂಕು ಸ್ಥಾಪನೆಯನ್ನು ಶಾಸಕರಾದ ಕೊತ್ತೂರು. ಡಾ. ಜಿ.ಮಂಜುನಾಥ್ ನೆರವೇರಿಸಿದರು. ಈ ಸಂದರ್ಭದಲ್ಲಿ ನಾನು ಕಾಮಗಾರಿಗೆ ಸಂಬಂಧಿಸಿದಂತೆ ಮಂಜೂರಾತಿ ಅಗಿರುವುದು ಸರಿ ಅದರೆ ವರ್ಕ್ ಆರ್ಡರ್ ಇದೆಯೇ ಎಂದು ಪ್ರಶ್ನಿಸಿದೆ. ಆಗಾ ಏಕಾಏಕಿ ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್ ನನಗೆ ಧಮಕಿ ಹಾಕಿ ಬೆದರಿಕೆ ಹಾಕಿದ್ದಾರೆ ಎಂದು ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಸೀತಿಹೊಸೂರು ಮುರುಳಿ ಆರೋಪಿಸಿದರು.


ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಅವರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿ ಈ ಹಿಂದೆ ಎರಡು ಭಾರಿ ಇದೇ ರೀತಿ ಶಂಕು ಸ್ಥಾಪನೆಯನ್ನು ಮಾಡಿ ಕಾಮಗಾರಿಯನ್ನು ಮಾಡಿರಲಿಲ್ಲ. ಈ ಕುರಿತು ವಿಪಕ್ಷಗಳ ಟೀಕೆಗೆ ಗುರಿಯಾಗಿದ್ದೇವು ಹಾಗಾಗಿ ನಾನು ಸಂಬಂಧ ಪಟ್ಟ ಅಧಿಕಾರಿಗೆ ಹಾಗೂ ಶಾಸಕರಿಗೆ ಹಿಂದಿನ ಪ್ರಕರಣವನ್ನು ವಿವರಿಸಿ ಟೆಂಡರ್ ಅಗಿರುವುದು ಸರಿ ಕಾಮಗಾರಿಯ ಆದೇಶವನ್ನು ಪ್ರದರ್ಶಿಸಿ ಎಂದು ಪ್ರಶ್ನಿಸಿದ್ದು ನಿಜ ಎಂದರು.
ನಾನು ಮತ್ತು ಶಾಸಕರು ಶಾಂತ ರೀತಿಯಿಂದಲೇ ಈ ಬಗ್ಗೆ ಮಾತನಾಡುತ್ತಿದ್ದಾಗ ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್,ಅನಿಲ್ ಕುಮಾರ್ ಅವರು ಏಕಾ ಏಕಿ ಮಧ್ಯ ಪ್ರವೇಶಿಸಿ ನೀನು ಯಾವ ನಾಯಕ, ಇದೆಲ್ಲಾ ಕೇಳಲು ನೀನು ಯಾರು, ನಿನ್ನ ಬಳಿ ಒಂದು ಮತ ಮಾತ್ರ ಇದೆ, ನೀನು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಎಲ್ಲಿದ್ದೇ ಎಂಬುವುದು ಸೇರಿದಂತೆ ವಿವಿಧ ರೀತಿಯಲ್ಲಿ ಟೀಕೆ ಮಾಡಿ ಅಪಮಾನಿಸಿದ್ದಾರೆ ಎಂದು ದೂರಿದರು.


ಅಲ್ಲದೆ ನಾನು ಅಧಿಕಾರಿಯನ್ನು ಏಕ ವಚನದಲ್ಲಿ ಮಾತನಾಡಿದೆ ಎಂದು ಸುಳ್ಳು ಆರೋಪ ಮಾಡಿ ದಿಕ್ಕು ತಪ್ಪಿಸಿ ಗೊಂದಲ ಹುಟ್ಟು ಹಾಕಿದರು. ನಾನು ಅಧಿಕಾರಿಯನ್ನು ಏಕ ವಚನದಿಂದ ಮಾತನಾಡಿಲ್ಲ ಹಾಗೇನಾದರೂ ಮಾತನಾಡಿರುವ ದಾಖಲೆ ಇದ್ದರೆ ಪ್ರದರ್ಶಿಸಲಿ ಎಂದು ಸವಾಲ್ ಹಾಕಿದರು.


ಸರ್ಕಾರಿ ಅಧಿಕಾರಿಗಳನ್ನು ಆ ರೀತಿ ಮಾತನಾಡುವುದು ಅವರ ಸಂಸ್ಕೃತಿಯಾಗಿದೆ ಈ ಹಿಂದೆ ಕಾಲೇಜಿನ ಕಾಮಗಾರಿ ಶಂಕು ಸ್ಥಾಪನೆ ಸಂದರ್ಭದಲ್ಲಿ ಪ್ರಾಂಶುಪಾಲರನ್ನು ಏಕ ವಚನದಲ್ಲಿ ಮಾತನಾಡಿ ಅಪಮಾನಿಸಿರುವುದು ಯಾರು ಎಂಬುವುದು ಇಡೀ ಕ್ಷೇತ್ರದ ಜನತೆಗೆ ಗೊತ್ತಿದೆ ಎಂದು ಹೇಳಿದರು.


ನನ್ನನ್ನು ದಿನೇಶ್ ಗುಂಡುರಾವ್ ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಪಟ್ಟಣ ಪಂಚಾಯಿತಿ ಸಂದರ್ಭದಲ್ಲಿ ನನಗೆ ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಬಂಗಾರಪೇಟೆ ಹಾಗೂ ಬೆಂಗಳೂರಿನ ರಾಜಾ ರಾಜೇಶ್ವರಿಯಲ್ಲಿ ಚುನಾವಣೆಗೆ ಜವಾಬ್ದಾರಿಯ ವೀಕ್ಷಕರಾಗಿ ಜವಾಬ್ದಾರಿ ವಹಿಸಿದ್ದರು ಹಾಗಾಗಿ ನಾನು ಈ ಚುನಾವಣೆಯಲ್ಲಿ ಕಾಣಿಸಿ ಕೊಳ್ಳದಿದ್ದರೂ ಸಹ ಮತದಾರರಿಗೆ ನಾನು ಮೊಬೈಲ್ ಮೂಲಕ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದೆ. ಈ ಹಿಂದೆ ನಮ್ಮ ಗ್ರಾಮದಲ್ಲಿ ಕಾಂಗ್ರೇಸ್‌ಗೆ ಶೂನ್ಯ ಮತ ಇರುವುದನ್ನು ೩೦೦ಕ್ಕೆ ಏರಿಕೆ ಮಾಡಿರುವೇ ಎಂದು ತಿಳಿಸಿದರು.


ಇದೇ ರೀತಿ ಬೈರಂಡಹಳ್ಳಿ ಕೆರೆಗೆ ೩ ಬಾರಿ ಶಂಕು ಸ್ಥಾಪನೆ ಮಾಡಿದ್ದರು ಅದರೆ ಕಾಮಗಾರಿಯು ತಮ್ಮ ಬಾಮೈದ ಅಂಕತಟ್ಟಿ ಬಾಬಾಣ್ಣ ಅವರಿಗೆ ಟೆಂಡರ್ ಆಗಲಿಲ್ಲ ಎಂದು ಚಂಜಿಮಲೆ ರಮೇಶ್ ವರ್ಕ್ ಆರ್ಡರ್ ಕೊಡಿಸರಲಿಲ್ಲ ಈಗಾ ಕೊಡಿಸಿದ್ದಾರೆ. ಕಲ್ವಮಂಜಲಿ ರಸ್ತೆ ೨ ಭಾರಿ ಕ್ಯಾಲನೂರು ರಸ್ತೆ ೨ ಬಾರಿ ಶಂಕು ಸ್ಥಾಪನೆ ಮಾಡಲಾಗಿದೆ. ವೇಮಗಲ್ ಸೀತಿ ರಸ್ತೆಗೆ ೮ ಕೋಟಿ ರೂ ಕಾಮಗಾರಿಗೆ ಭೂಸ್ವಾದೀನಕ್ಕೆ ಸುಮಾರು ೨೫ ಕೋಟಿ ರೂ ಪರಿಹಾರ ನೀಡ ಬೇಕಾಗುತ್ತದೆ ಹಾಗಾಗಿ ಈ ಕುರಿತು ನಾನು ಶಾಸಕರೊಂದಿಗೆ ಚರ್ಚಿಸುತ್ತಿದೆ. ಅವರು ಸಹ ನನಗೆ ಸಮರ್ಪಕವಾಗಿಯೇ ಉತ್ತರ ನೀಡಿ ವಿವರಿಸುತ್ತಿದ್ದರು. ಇದೇ ರೀತಿ ಚಂಜಿಮಲೆ ಕಡಗಟ್ಟೂರು ರಸ್ತೆ ಕಾಮಗಾರಿಗಳು ೪ ಭಾರಿ ಮಂಜೂರು ಅಗಿದ್ದರೂ ವರ್ಕ ಆರ್ಡರ್ ಇಲ್ಲದೆ ೪ ಬಾರಿ ವಾಪಸ್ ಅಗಿದೆ ಎಂದರು.


ಅದರೆ ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್. ಅನಿಲ್ ಕುಮಾರ್ ಅವರು ನಾನು ಕೆ.ಹೆಚ್.ಬೆಂಬಲಿಗನೆಂಬ ಕಾರಣಕ್ಕೆ ನಾನು ಅಧಿಕಾರಿಗೆ ಏಕ ವಚನದಲ್ಲಿ ಮಾತನಾಡಿದ್ದೇನೆ, ಕೈಗಳನ್ನು ತೋರಿಸುತ್ತಾ ಮಾತನಾಡಿದ್ದೇನೆ ಎಂದು ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದಾರೆ ಇವರ ಬಳಿ ಯಾವೂದಾದರೂ ದಾಖಲೆ ಇದ್ದರೆ ಪ್ರದರ್ಶಿಸಲಿ ಇವರು ನನ್ನ ಮೇಲೆ ಮಾಡಿದ ದೌರ್ಜನ್ಯ ವಿಡೀಯೋಗಳು ಎಲ್ಲೆಡೆ ಪ್ರಚಲಿತದಲ್ಲಿದೆ. ಈ ಸಂದರ್ಭದಲ್ಲಿ ಇವರ ಬೆಂಬಲಿಗರಾದ ಜಾಲಿ ಮಂಜು, ಶ್ರೀನಿವಾಸಪುರದ ನವೀನ್ ಎಂಬುವರು ನನ್ನ ಹಿಡಿದು ತಳ್ಳಾಡಿದರು. ಇವರ ಬೆಂಬಲಿಗರಾದ ಚಂಜಿಮಲೆ ರಮೇಶ್ ಎಂಬಾತ ನನ್ನ ಮೇಲೆ ಮನೆ ಬಳಿ ಎರಡು ಭಾರಿ ಗುಂಡಗಳನ್ನು ಛೋ ಬಿಟ್ಟಿದ್ದ. ಈಗಲು ನನಗೆ ಬೇರರೆಯವರಿಂದ ಮೂಬೈಲ್ ಬೆದರಿಕೆ ಹಾಕಿಸಿದ್ದಾರೆ ಎಂದು ದೂರಿದರು.