
ಕೋಲಾರ,ಫೆ,೧೭-ರಾಜ್ಯದ ಮುಖ್ಯ ಮಂತ್ರಿ ಸ್ಥಾನಕ್ಕಾಗಿ ಕಾಂಗ್ರೇಸ್ ಪಕ್ಷದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಕುಮಾರ್ ನಡುವೆ ಫೈಟ್ ನಡೆಯುತ್ತಿದೆ. ಈ ಮಧ್ಯೆ ಕಾಂಗ್ರೇಸ್ ಪಕ್ಷದ ಇಟಾಲಿ ಮತ್ತು ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಿ ಹೀರೋ ಅಗಿ ರಾಜ್ಯದ ಮುಖ್ಯ ಮಂತ್ರಿ ಸ್ಥಾನ ಪಡೆಯುವ ದೆಸೆಯಲ್ಲಿ ಹಗಲು ಕನಸು ಕಾಣುತ್ತಿರುವ ಸಚಿವ ಪ್ರಿಯಾಂಕ ಖರ್ಗೆ ಅವರು ಆರ್.ಎಸ್.ಎಸ್. ದೆವ್ವ ಇದ್ದಂತೆ ಬಿಜೆಪಿ ಅದರ ನೆರಳು ಇದರ ವಿರುದ್ದ ಹೋರಾಟ ಮಾಡ ಬೇಕು. ಆರ್.ಎಸ್. ಎಸ್, ಇಲ್ಲ ಎಂದರೆ ಬಿಜೆಪಿ ಇಲ್ಲ.
ಬಿಜೆಪಿ ಪರಿಸ್ಥಿತಿ ಜೆ.ಡಿ.ಎಸ್. ಗಿಂತಲೂ ಹೀನಾಯವಾಗಿರುತ್ತದೆ ಎಂದು ಟೀಕಿಸಿರುವ ವಿರುದ್ದ ಬಿಜೆಪಿಯ ಮಾಜಿ ಸಂಸದ ಎಸ್.ಮುನಿಸ್ವಾಮಿ ವಾಗ್ದಾಳಿ ನಡೆಸಿದರು.
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಸಚಿವರಾದ ಪ್ರಿಯಾಂಕ ಅವರು ತಮಗೆ ವಹಿಸಿರುವ ಐ.ಟಿ. ಬಿ.ಟಿ. ಕಂಪನಿಗಳ ಅಭಿವೃದ್ದಿ, ಉದ್ಯೋಗ ಸೃಷ್ಟಿ ಮುಂತಾದ ಜವಾಬ್ದಾರಿಯುತ ಕೆಲಸಗಳನ್ನು ಮಾಡದೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಚರ್ಚೆಯಲ್ಲಿ ತೊಡಗಿ ಪುಕ್ಕಟೆ ಪ್ರಚಾರ ಪ್ರಿಯರಾಗಿದ್ದಾರೆ ಎಂದು ವ್ಯಂಗವಾಡಿದರು.
ದಲಿತ ಸಮುದಾಯದ ಡಾ. ಬಿ.ಆರ್. ಅಂಬೇಡ್ಕರ್ ಅವರು ತಂದ ಸಂವಿಧಾನದ ಮೀಸಲಾತಿ ಭಿಕ್ಷೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಅವರ ಪುತ್ರ ಪ್ರಿಯಾಂಕ ಖರ್ಗೆ ಹಾಗೂ ಖರ್ಗೆ ಅವರ ಮಾವ ರಾಧಕೃಷ್ಣ ಸಹ ಸಂಸದರಾಗಿ ಅವರುಗಳು ಸ್ಥಾನ ಮಾನಗಳು ಪಡೆದಿದ್ದಾರೆ. ಡಾ. ಅಂಬೇಡ್ಕರ್ ಅವರಿಗೆ ರಾಜಕಾರಣದಲ್ಲಿ ಬೆಳೆಯಲು ಅವಕಾಶ ನೀಡದಂತೆ ಕುತಂತ್ರ ಮಾಡಿದಂತ ಕಾಂಗ್ರೇಸ್ ಪಕ್ಷದಲ್ಲಿನ ಕಾಳನಾಯಕರು ಎಂದು ದೂರಿದರು.
ಆರ್.ಎಸ್.ಎಸ್. ಬಗ್ಗೆ ಅವಹೇಳನಕಾರಿ ಯಾಗಿ ಮಾತನಾಡುತ್ತಿ ರುವ ಪ್ರಿಯಾಂಕ ಖರ್ಗೆ ಅವರ ಡಿ.ಎನ್.ಎ ಪರೀಕ್ಷೆ ಯಾಗ ಬೇಕು. ಮಲ್ಲಿಕಾರ್ಜುನ ಖರ್ಗೆ ಅವರು ಇಟಾಲಿ ಮೇಡಂ ಮೆಚ್ಚಿಸಲು ತಮ್ಮ ಮಕ್ಕಳಿಗೆ ಪ್ರಿಯಾಂಕ ಹಾಗೂ ರಾಹುಲ್ ಎಂದು ಹೆಸರಿಟ್ಟು ಎ.ಐ.ಸಿ.ಸಿ. ಅಧ್ಯಕ್ಷ ಸ್ಥಾನ ಪಡೆದರು. ಅದೇ ರೀತಿ ಪ್ರಿಯಾಂಕ ಅವರು ಆರ್.ಎಸ್.ಎಸ್. ಹಾಗೂ ಬಿಜೆಪಿಯನ್ನು ಟೀಕಿಸುವ ಮೂಲಕ ರಾಜ್ಯದ ಮುಖ್ಯ ಮಂತ್ರಿ ಕುರ್ಜಿ ಹೊಡೆಯಲು ಕುತಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು.
ಆರ್.ಎಸ್.ಎಸ್. ನೋಂದಣಿಯಾಗಿಲ್ಲ ಎಂದು ದೂರುತ್ತಿದ್ದಾರೆ. ಅದರೆ ಆರ್.ಎಸ್.ಎಸ್. ಪಕ್ಷಕ್ಕೆ ನೊರಾರು ವರ್ಷದ ಇತಿಹಾಸವಿದೆ. ಸ್ವಾತಂತ್ರ್ಯಕ್ಕಾಗಿ ೧೦ ಮಂದಿಯಲ್ಲ ಸಾವಿರಾರು ಮಂದಿ ಹೋರಾಟ ಮಾಡಿ ತಮ್ಮ ಪ್ರಾಣವನ್ನು ತ್ಯಾಗ ಬಲಿದಾನ ಮಾಡಿದ್ದಾರೆ ದಲಿತ ಸಮುದಾಯದಲ್ಲಿ ಹುಟ್ಟಿರುವ ಇವರು ತಮ್ಮ ತಾತನ ಜನ್ಮ ದಿನಾಂಕದ ಪ್ರಮಾಣ ಪತ್ರ ತರಲಿ ತಾತನೇ ಇಲ್ಲದೆ ತಂದೆ ಬರಲು ಹೇಗೆ ಸಾಧ್ಯವಾಗುತ್ತೆ ಎಂದು ಪ್ರಶ್ನಿಸಿದ ಅವರು ಹಿಂದುಗಳು, ಹಿಂದುತ್ವವನ್ನು ವಿರೋಧಿಸುವಂತ ಇಂಥವರಿಗೆ ಆರ್.ಎಸ್.ಎಸ್. ದಾಖಲೆಗಳು ಕೊಡುವಂತ, ತೋರಿಸುವಂತ ಅವಶ್ಯಕತೆ ಇಲ್ಲ ಎಂದರು.
ಸಾರ್ವಜನಿಕರ ಕೋಟ್ಯಾಂತರ ರೂಪಾಯಿ ಮೌಲ್ಯದ ಭೂಮಿಯನ್ನು ಸಿದ್ದಾರ್ಥ ಟ್ರಸ್ಟ್, ಬುದ್ದನ ಹೆಸರಿನಲ್ಲಿ ಕಬಳಿಸಿದ್ದಾರೆ. ವಿದೇಶಗಳಿಂದ ಕೋಟ್ಯಾಂತರ ರೂ ದೇಣಿಗೆ ಬರುವ ಹಣವನ್ನು ಈವರೆಗೆ ಲೆಕ್ಕ ನೀಡಿಲ್ಲ ಸರ್ಕಾರದ ಜಾಗವನ್ನು ಹೊಡೆದು ಸಿಮೆಂಟ್ ಕಾರ್ಖನೆ ಮಾಡಿ. ೧೨ ಸಾವಿರ ಕೋಟಿ ರೂ ಸಹಾಯ ಧನ ಪಡೆದು ನಂತರ ನಷ್ಟವೆಂದು ಕಾರ್ಖಾನೆಗೆ ಬೀಗ ಹಾಕಲು ಮುಂದಾಗಿದ್ದಾರೆ. ಬುದ್ದ ವಿಹಾರದ ಸ್ಥಾಪನೆಯನ್ನು ರಾಷ್ಟ್ರಪತಿಗಳಿಂದ ಉದ್ಘಾಟಿಸಿ ಕೇಂದ್ರ ಹಾಗೂ ವಿದೇಶಗಳಿಂದ ಬಂದ ೧೨೦೦ ಕೋಟಿ ರೂ ಹಣದಲ್ಲಿ ಕೇವಲ ೩೪ ಕೋಟಿ ರೂ ವೆಚ್ಚ ಮಾಡಿದ್ದಾರಷ್ಟೆ ಉಳಿದ ಹಣ ಎಲ್ಲಿ ಹೋಯಿತು ? ಎಂದು ಪ್ರಶ್ನಿಸಿದರು.
ಕಲ್ಯಾಣ ಅಭಿವೃದ್ದಿಯಲ್ಲಿ ಗುಲ್ಬರ್ಗ ಜಿಲ್ಲೆ ತೀರ ಹಿಂದುಳಿದೆ. ರಸ್ತೆ, ಸಾರಿಗೆ ಸೇರಿದಂತೆ ಸಾರ್ವಜನಿಕರಿಗೆ ಮೂಲ ಭೂತ ಸೌಲಭ್ಯಗಳಿಲ್ಲ ಖರ್ಗೆ ಹಿಂಬಾಲಕರು ಮರಳುಗಾರಿಕೆ ಲ್ಯಾಂಡ್ ಮಾಫೀಯ ಐಪಿಎಲ್. ಜೂಜಾಟಗಳು ಹಾಗೂ ದೌರ್ಜನ್ಯ, ಹತ್ಯೆಗಳನ್ನು ಮಾಡಿ ಕೊಂಡು ಸರ್ಕಾರ ಆಸ್ತಿ ಪಾಸ್ತಿಗಳ ಲೊಟಿ ಮಾಡುತ್ತಿದ್ದಾರೆ. ಇಂಥವರಿಗೆ ಆರ್.ಎಸ್.ಎಸ್. ಬಗ್ಗೆ ಮಾತನಾಡುವಂತ ಯೋಗ್ಯತೆಯೂ ಇಲ್ಲ ನೀರಾವರಿ ಯೋಜನೆಗಳ ಅನುದಾನವನ್ನು ತಮ್ಮ ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ದಿ ಬಳಕೆ ಮಾಡಿ ಕೊಂಡಿದ್ದಾರೆ ಎಂದು ಅಪಾದಿಸಿದರು.
ಪ್ರಿಯಾಂಕ ಖರ್ಗೆ ಅವರು ರಾಷ್ಟ್ರ ಪ್ರೇಮ, ರಾಷ್ಟ್ರ ಭಕ್ತಿ ಇರುವಂತ ಈ ನೆಲದ ಹಿಂದುಗಳ ಸಂಘಟನೆಯನ್ನು ಹೀಯ್ಯಾಳಿಸಿರುವುದಕ್ಕೆ ಕೊಡಲೇ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದರು.



























