ಭಾರತಕ್ಕೆ ಮುನಿರ್ ಅಣುಬಾಂಬ್ ಬೆದರಿಕೆ

ನ್ಯೂಯಾರ್ಕ್, ಆ. ೧೧- ಅಮೆರಿಕಾಕ್ಕೆ ಭೇಟಿ ನೀಡಿರುವ ಪಾಕ್ ಸೇನಾ ಮುಖ್ಯಸ್ಥ ಜನರಲ್ ಆಸೀಂ ಮುನಿರ್ ಪ್ರಪಂಚಕ್ಕೆ ಅಣುಬಾಂಬ್ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಭಾರತದ ವಿರೋಧಿ ಹೇಳಿಕೆ ನೀಡಿ ಉದ್ಧಟತನ ಮೆರೆದಿದ್ದಾರೆ. ಮುನೀರ್ ಹೇಳಿಕೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಫ್ಲೋರಿಡಾದ ಟಾಂಪಾದಲ್ಲಿ ಪಾಕ್ ಮೂಲದ ಅಮೆರಿಕನ್ ಉದ್ಯಮಿ ಅದ್ನಾನ್ ಅಸಾದ್ ಆಯೋಜಿಸಿದ್ದ ಸ್ನೇಹಕೂಟ ಹಾಗೂ ವಲಸಿಗರ ಸಭೆಯಲ್ಲಿ ಪಾಲ್ಗೊಂಡು ವೇಳೆ ಮುನೀರ್ ಈ ಮಾತುಗಳನ್ನು ಹಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾವು ಸಹ ಅಣ್ವಸ್ತ್ರ ಗಳನ್ನು ಹೊಂದಿದ್ದೇವೆ. ಒಂದು ವೇಳೆ ಯುದ್ಧಗಳು ನಡೆದು ನಾವು ಸೋತು ಹೋಗುತ್ತೇವೆ ಎನ್ನುವುದಾದರೆ ಆಗ ಅರ್ಧ ಪ್ರಪಂಚವನ್ನೇ ಮುಳುಗಿಸಿ ಹೋಗುತ್ತವೆ. ಪರೋಕ್ಷವಾಗಿ ಭಾರತಕ್ಕೆ ಬೆದರಿಕೆ ಹಾಕಿರುವುದನ್ನು ಉಲ್ಲೇಖಿಸಿ ಖಾಸಗಿ ವೆಬ್‌ಸೈಟ್ ವರದಿ ಮಾಡಿದೆ.
ಸಿಂಧುನದಿ ಭಾರತದ ಸ್ವತ್ತಲ್ಲ. ಆದರೆ ಭಾರತ ನದಿ ನೀರನ್ನು ತಡೆದು ಅಣೆಕಟ್ಟು ನಿರ್ಮಿಸುವುದಾಗಿ ಹೇಳಿದೆ. ಕಟ್ಟಲಿ ನೋಡೋಣ ಆಗ ನಮ್ಮ ಹತ್ತೇ ಹತ್ತು ಕ್ಷಿಪಣಿಗಳಿಂದ ಅಣೆಕಟ್ಟನ್ನು ಪುಡಿ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ಸಿಂಧುಜಲ ಒಪ್ಪಂದ ರದ್ದು ಮಾಡಿದ್ದಾರೆ. ಇದರಿಂದ ಭಾರತ -ಪಾಕಿಸ್ತಾನದ ೨೫ ಕೋಟಿ ಜನರನ್ನು ಹಸಿವಿಗೆ ಸಿಕ್ಕಿಸಬಹುದು. ಆದರೆ ಸಿಂಧುನದಿ ಅಣೆಕಟ್ಟು ನಿರ್ಮಿಸಿದರೆ ನಮ್ಮ ಹತ್ತಿರ ಕ್ಷಿಪಣಿಗಳಿಗೆ ಕೊರತೆ ಏನು ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಕಾಶ್ಮೀರ ವಿಷಯವನ್ನು ಕೆದಕಿರುವ ಮುನೀರ್, ಪಾಕಿಸ್ತಾನದ ಪಾಲಿಗೆ ಕಾಶ್ಮೀರ ಕಂಠಕ ನಾಳವಿದ್ದಂತೆ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದೆ ಎಂದು ಪುನರ್‌ರುಚ್ಚರಿಸುವುದನ್ನು ಉಲ್ಲೇಖಿಸಿ ಸುದ್ಧಿಸಂಸ್ಥೆ ವರದಿ ಮಾಡಿದೆ.