ಮುನೀಂದ್ರ ಶ್ರೀಗಳು ಸಮಾಜದ ಆಧಾರ ಸ್ತಂಭ: ಡಿವೈಎಸ್ಪಿ

ವಾಡಿ: ಜ.29:ಭಕ್ತರ ನಂಬಿಕೆ, ದೇವಸ್ಥಾನದ ಇತಿಹಾಸ, ಪರಂಪರೆ, ಹಿಂದೂ-ಮುಸ್ಲಿಂ ಭಾವೈಕ್ಯತೆ ಸಂಕೇತವನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಕಟ್ಟಿಮನಿ ಹಿರೇಮಠದ ಶ್ರೀಮುನೀಂದ್ರ ಶಿವಾಚಾರ್ಯ ಸ್ವಾಮೀಜಿ ಸಮಾಜದ ಆಧಾರ ಸ್ತಂಭವಾಗಿದ್ದಾರೆ ಎಂದು ಶಹಾಬಾದ ವಿಭಾಗದ ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು.

ಸಮೀಪದ ಹಲಕರಟಿ ಗ್ರಾಮದ ಕಟ್ಟಿಮನಿ ಹಿರೇಮಠದ ಲಿಂಗೈಕ್ಯ ಮುನೀಂದ್ರ ಶಿವಯೋಗಿಗಳ 43ನೇ ಪುಣ್ಯಸ್ಮರಣೆ ಪ್ರಯುಕ್ತ ನೀಡಲಾದ “ಮುನೀಂದ್ರ ಶ್ರೀ” ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ನನಗೆ ಲಭಿಸಿರುವ ಈ ಪ್ರಶಸ್ತಿಯನ್ನು ನನ್ನ ಇಲಾಖೆಯ ಪೆÇಲೀಸ್ ಪೇದೆಗಳಿಗೂ ಸಲ್ಲುತ್ತದೆ. ಕಾರಣ, ಕೆಲವು ಪ್ರಕರಣಗಳನ್ನು ಬೇಧಿಸುವ ಸಂದರ್ಭದಲ್ಲಿ ನನಗೆ ಬೆನ್ನೆಲುಬಾಗಿ ನಿಲ್ಲುವುದೇ ಒಂದು ದೊಡ್ಡ ಶಕ್ತಿ. ತಮ್ಮ ಕುಟುಂಬವನ್ನು ಬಿಟ್ಟು ತನಿಖಾ ತಂಡದಲ್ಲಿ ಉಳಿದುಕೊಳ್ಳುವ ಅವರ ಶ್ರಮ ತುಂಬಾ ಇರುತ್ತದೆ ಎಂದರು.

ನಮ್ಮಲ್ಲಿ ತಾಳ್ಮೆ ಇಲ್ಲದೆ ಹೋದರೆ ಯಾವುದೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಕೃತ್ಯಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ನಿಮ್ಮ ಮೊಬೈಲುಗಳಿಗೆ ಬರುವ ಓಟಿಪಿಗಳನ್ನು ಯಾವುದೇ ಕಾರಣಕ್ಕೂ ಅಪರಿಚಿತರಿಗೆ ನೀಡಬೇಡಬಾರದು. ಮೊಬೈಲ್ ಬಳಕೆಯಲ್ಲಿ ಇತಿ ಮಿತಿ ಇರಬೇಕೆಂದು ಸಲಹೆ ನೀಡಿದರು.

ಹಲಕರಟಿ ಖಾದ್ರಿ ದರ್ಗಾದ ಪೀಠಾಧಿಪತಿ ಅಬುತುರಬಾ ಶಾ ಖ್ವಾಜಾ ಖಾದ್ರಿ ಚಿಸ್ತಿಯಮುನಿ, ಯಾದಗಿರಿ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ಬಸವರಾಜ ಪಾಟೀಲ ನರಬೋಳಿ, ಚಿತ್ತಾಪುರ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಹಲಕರಟಿ ಕಟ್ಟಿಮನಿ ಹಿರೇಮಠದ ಪೂಜ್ಯ ಶ್ರೀ ಮುನೀಂದ್ರ ಶಿವಾಚಾರ್ಯ, ಕಲಕೇರಿ ಸಿದ್ದರಾಮ ಶಿವಾಚಾರ್ಯ ಸಾನಿಧ್ಯ ವಹಿಸಿದ್ದರು.

ಮದ್ಯಾಹ್ನ ಶ್ರೀಮಠದಲ್ಲಿ ಸಹಸ್ರಾರು ಮುತ್ತೈದೆಯ ಮಹಿಳೆಯರಿಗೆ ಉಡಿ ತುಂಬುವ ಸಂಪ್ರದಾಯ ಜರಗಿತು. ಎಸಿಸಿ ಕಾರ್ಮಿಕ ಸಂಘದ ಅಧ್ಯಕ್ಷ ಶರಣಬಸ್ಸು ಶಿರೂರಕರ್, ಜಿಪಂ ಮಾಜಿ ಸದಸ್ಯ ಇಬ್ರಾಹಿಂ ಪಟೇಲ್, ಅಪರಾಧ ವಿಭಾಗದ ಪಿಎಸ್‍ಐ ರೇಣುಕಾ ಊಡುಗಿ, ಮಹ್ಮದ ಖುರೇಶಿ, ಅಖಂಡಯ್ಯ ಸ್ವಾಮಿ, ಇಮ್ತಿಯಾಜ್ ಪಟೇಲ್, ಚಂದ್ರಕಾಂತ್ ಮೇಲಿನಮನಿ, ಬಸವರಾಜ್ ಲೋಕನಹಳ್ಳಿ, ರಾಜುಗೌಡ ಪೆÇ.ಪಾಟೀಲ್, ರವಿ ಸಂಗಶೆಟ್ಟಿ, ಶರಣಪ್ಪಗೌಡ ಪೆÇ.ಪಾಟೀಲ್, ಮೃತ್ಯುಂಜಯ ಸ್ವಾಮಿ ಹಿರೇಮಠ, ಮಲ್ಲಿಕಾರ್ಜುನ ಸ್ವಾಮಿ ಬಿರನೂರ, ಶರಣಪ್ಪ ದೇಸಾಯಿ, ಪ್ರಹ್ಲಾದ್ ರಾವ್ ಕುಲಕರ್ಣಿ, ಗುರಣ್ಣ ಸಾಹು, ಬಸಯ್ಯ ಮಾಸ್ಟರ್, ದೇವಪ್ಪ, ಭೀಮಣ್ಣಗೌಡ, ರೇವಣಸಿದ್ದಪ್ಪ ರೆಡ್ಡಿ, ಲಿಂಗಯ್ಯ ಗುತ್ತೇದಾರ್, ನಿಂಗಣ್ಣಗೌಡ, ಈರಣ್ಣ ವಗ್ಗಾರ, ರಾಘವೇಂದ್ರ ಅಲ್ಲಿಪೂರಕರ್, ಸಿದ್ದು ಮುಗಟಿ, ಈರಣ್ಣ ಇಸಾಬ, ಶಿವುಕುಮಾರ ಆಂದೋಲ, ಮಲ್ಲಿಕಾರ್ಜುನ ಕಟ್ಟಿಮನಿ, ಶರಣು ಬೊಮ್ಮನಳ್ಳಿ, ವೀರೇಶ ಕೊಟಗಿ, ಮಹಾದೇವ ಸೂಲಹಳ್ಳಿ, ಶರಣು ಇಟ್ಟಿನ ಚಿತ್ತಾವಲಿ ಬಾಗಲಕೋಟ ಸಿದ್ದಯ್ಯ ಶಾಸ್ತ್ರಿ ರಾಚಯ್ಯ ಶಾಸ್ತ್ರಿ ಈರಣ್ಣ ವಗ್ಗರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವೇದಮೂರ್ತಿ ಮಡಿವಾಳಯ್ಯ ಶಾಸ್ತ್ರಿ ಪುರಾಣ ನಡೆಸಿಕೊಟ್ಟರು. ವೀರೇಶ ಕಟ್ಟಿಸಂಗಾವಿ ತಬಲಾ ಸಾಥ್ ನೀಡಿದರು. ಮಲ್ಲಿಕಾರ್ಜುನ ಭಜಂತ್ರಿ ಸಂಗೀತ ಸೇವೆಗೆ ಸಾಕ್ಷಿಯಾದರು.
ಶಿಕ್ಷಕ ಬಸವರಾಜ ಅವಂಟಿ ನಿರೂಪಿಸಿದರು. ಬಳಿಕ ಕಟ್ಟಿಮನಿ ಹಿರೇಮಠದ ಪೂಜ್ಯ ಮುನೀಂದ್ರ ಶಿವಾಚಾರ್ಯ ಸ್ವಾಮೀಜಿಯವರಿಗೆ ಭಕ್ತರಿಂದ ತುಲಾಭಾರ ಸೇವೆ ಜರುಗಿತು.