
ಯಾದಗಿರಿ,ಮೇ 31: ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ದಿಢೀರ್ ಭೇಟಿ ನೀಡಿದರು. ಅವರು ಆಸ್ಪತ್ರೆಯ ಶೌಚಾಲಯ, ಕುಡಿಯುವ ಬಿಸಿನೀರು, ಸ್ವಚ್ಫತೆ, ಸಿಬ್ಬಂದಿ ಹಾಜರಾತಿ, ರೋಗಿಗಳ ಹಾಗೂ ಹೆರಿಗೆ ವಾರ್ಡ್‍ಗಳಿಗೆ ಭೇಟಿ ನೀಡಿ ರೋಗಿಗಳಿಂದ ಆಸ್ಪತ್ರೆಯಲ್ಲಿ ದೊರಕುವ ಸೌಲಭ್ಯ ಹಾಗೂ ಚಿಕಿತ್ಸೆ ಸಂಬಂಧ ಮಾಹಿತಿ ಪಡೆದುಕೊಂಡರು.ಆಸ್ಪತ್ರೆಯ ಒಳರೋಗಿಗಳ ಆರೋಗ್ಯವನ್ನು ವಿಚಾರಿಸಿದರು. ರೋಗಿಗಳ ಹಿತ ದೃಷ್ಟಿಯಿಂದ ಕೈಗೊಂಡಿರುವ ಕಾರ್ಯಕ್ರಮಗಳ ವಿವರವನ್ನು ವೈದ್ಯರಿಂದ ಪಡೆದರು.ರಾತ್ರಿಯ ವೇಳೆಯಲ್ಲಿ ಕರ್ತವ್ಯದಲ್ಲಿ ಇರುವ ಸಿಬ್ಬಂದಿಗಳ ಹಾಜರಾತಿ ಮತ್ತು ಕರ್ತವ್ಯ ಪಾಲನೆಯನ್ನು ವೀಕ್ಷಣೆ ಮಾಡಲಾಯಿತು. ನಂತರ ರೋಗಿಗಳ ಸಮಸ್ಯೆಗಳು ಹಾಗೂ ಕುಂದು-ಕೊರತೆಗಳ ಬಗ್ಗೆ ಖುದ್ದು ಪರಿಶೀಲನೆ ಮಾಡಲಾಯಿತು. ಈ ಸಂದರ್ಭ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ಒದಗಿಸುವಂತೆ, ಆಸ್ಪತ್ರೆಯಲ್ಲಿ ಸ್ವಚ್ಛತೆಯನ್ನು ಕಾಪಾಡುವಂತೆ, ಹಾಗೂ ವೈದ್ಯರು ಸಾರ್ವಜನಿಕ ಜೊತೆ ಸ್ನೇಹಪೂರ್ವಕವಾಗಿ ನಡೆದುಕೊಳ್ಳುವಂತೆ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಡಾ. ರಿಜ್ವಾನ ಮೇಡಂ, ಡಾ. ಕುಮಾರ್ ಅಂಗಡಿ, ಡಾ.ಪ್ರಶಾಂತ್, ಪರಿಸರ ಅಭಿಯಂತರ ಪ್ರಶಾಂತ್ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕ ಶಿವಪುತ್ರ ಇದ್ದರು.