
ತಾಳಿಕೋಟೆ:ಫೆ.೧೨: ನಗರ ವ್ಯಾಪ್ತಿಯಲ್ಲಿ ಚಿರೋನೊಮಿಡ್ ನೊಣಗಳ ನಿಯಂತ್ರಣಕ್ಕೆ ಪುರಸಭೆಯಿಂದ ಸಮರೋಪಾದಿಯಾಗಿ ತಕ್ಷಣದಿಂದಲೇ ಕ್ರಮ ಕೈಗೊಳ್ಳಲಾಗುತ್ತಿದ್ದು ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವದರೊಂದಿಗೆ ಪುರಸಭೆಯೊಂದಿಗೆ ಸಹಕರಿಸಬೇಕೆಂದು ಪುರಸಭಾ ಮುಖ್ಯಾಧಿಕಾರಿ ವಸಂತ ಪವಾರ ಅವರು ತಿಳಿಸಿದ್ದಾರೆ.
ತಾಳಿಕೋಟೆ ನಗರದ ಕೆಲವು ಭಾಗಗಳಲ್ಲಿ, ವಿಶೇಷವಾಗಿ ಕೆರೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ ನಿಂತ ನೀರಿರುವ ಚರಂಡಿಗಳಲ್ಲಿ ಚಿರೋನೊಮಿಡ್ ನೊಣಗಳ ಹಾವಳಿ ಹೆಚ್ಚಾಗಿರುವುದು ಕಂಡುಬAದಿದೆ. ಸಾರ್ವಜನಿಕರ ಆರೋಗ್ಯ ಮತ್ತು ಸುಸ್ಥಿತಿಯನ್ನು ಕಾಪಾಡುವ ನಿಟ್ಟಿನಲ್ಲಿ ತಾಳಿಕೋಟೆ ಪುರಸಭೆಯು ತಕ್ಷಣವೇ ಕಾರ್ಯಪ್ರವೃತ್ತವಾಗಿದ್ದು, ಪುರಸಭೆಯಿಂದ ಈಗಾಗಲೇ ಫಾಗಿಂಗ್ ಕಾರ್ಯ ನೊಣಗಳ ಸಂಖ್ಯೆಯನ್ನು ತಕ್ಷಣವೇ ನಿಯಂತ್ರಿಸಲು ಹಗಲು ಮತ್ತು ಸಂಜೆ ವೇಳೆ ಪೀಡಿತ ಪ್ರದೇಶಗಳಲ್ಲಿ ರಾಸಾಯನಿಕ ಮಿಶ್ರಿತ ಹೊಗೆ ಹಾಕುವ ಕಾರ್ಯವನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಕೀಟನಾಶಕ ಸಿಂಪಡಣೆ ನೊಣಗಳ ಲಾರ್ವಾಗಳನ್ನು (ಮೊಟ್ಟೆಗಳು) ಅವುಗಳ ಮೂಲದಲ್ಲೇ ನಾಶಪಡಿಸಲು ಚರಂಡಿಗಳಲ್ಲಿ ಹಾಗೂ ನೀರು ನಿಂತ ಜಾಗಗಳಲ್ಲಿ ಪರಿಣಾಮಕಾರಿ ಕೀಟನಾಶಕಗಳನ್ನು ಸಿಂಪಡಿಸಲಾಗುತ್ತಿದೆ ಮತ್ತು ಚರಂಡಿಯಲ್ಲಿಯ ಹೂಳು ತೆಗೆಯುವ ಕಾರ್ಯವೂ ಕೈಗೊಳ್ಳಲಾಗುತ್ತಿದ್ದು ನೀರು ಸರಾಗವಾಗಿ ಹರಿಯುವಂತೆ ಮಾಡಲು ಮತ್ತು ನೊಣಗಳ ಉತ್ಪತ್ತಿ ತಾಣಗಳನ್ನು ನಾಶಪಡಿಸಲು ಚರಂಡಿಗಳಲ್ಲಿನ ಕಸ ಹಾಗೂ ಹೂಳನ್ನು ತೆಗೆಯುವ ಕಾರ್ಯಾಚರಣೆ ಪ್ರಗತಿಯಲ್ಲಿದ್ದು ಕಾರಣ ಸಾರ್ವಜನಿಕರು ನೊಣಗಳ ಹಾವಳಿಯಿಂದ ಪಾರಾಗಲು ಬೆಳಕಿನ ನಿಯಂತ್ರಣ ಚಿರೋನೊಮಿಡ್ ನೊಣಗಳು ಬೆಳಕಿನತ್ತ ತೀವ್ರವಾಗಿ ಆಕರ್ಷಿತವಾಗುವುದರಿಂದ, ಸಂಜೆ ಸಮಯದಲ್ಲಿ ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಿಕೊಳ್ಳಬೇಕು ಮತ್ತು ನೈರ್ಮಲ್ಯ ಕಾಪಾಡಿಕೊಳ್ಳಲು ಸೂಚಿಸಿದಂತೆ ನಿಮ್ಮ ಮನೆಗಳ ಸುತ್ತಮುತ್ತ ಎಲ್ಲಿಯೂ ನೀರು ನಿಲ್ಲದಂತೆ ಜಾಗ್ರತೆ ವಹಿಸಿ. ಶೇಖರಣಾ ತೊಟ್ಟಿಗಳನ್ನು ಕಡ್ಡಾಯವಾಗಿ ಮುಚ್ಚಿಡುವಂತಹ ಕಾರ್ಯ ಮಾಡಬೇಕೆಂದು ಅವರು ತಿಳಿಸಿದ್ದಾರೆ.
ಪುರಸಭಾ ಸಿಬ್ಬಂದಿಗಳು ಈ ನೋಣಗಳ ಹಾವಳಿಯಲ್ಲಿ ನಿಯಂತ್ರಣಕ್ಕೆ ತರಲು ಸಿಬ್ಬಂದಿಗಳು ಫಾಗಿಂಗ್ ಮತ್ತು ಕ್ರೀಮಿನಾಶಕ ಪೌಡರ್ ಸಿಂಪಡಣೆ ಮಾಡಲು ಬಂದಾಗ ಸಾರ್ವಜನಿಕರು ಪೂರ್ಣ ಸಹಕಾರ ನೀಡಬೇಕು. ಈ ನೊಣಗಳ ಬಗ್ಗೆ ಸಾರ್ವಜನಿಕರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಪುರಸಭೆಯ ಈ ಕಾರ್ಯಾಚರಣೆಯು ಮುಂದುವರೆಸಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ ಅವರು ತಿಳಿಸಿದ್ದಾರೆ.
ತಾಳಿಕೋಟೆ ನಗರದ ವ್ಯಾಪ್ತಿಯಲ್ಲಿ ಚಿರೋನೊಮಿಡ್ ನೊಣಗಳ ಹಾವಳಿಯು ಕಂಡುಬAದಿದ್ದು ಈ ಹಾವಳಿಯನ್ನು ತಡೆಗಟ್ಟಲು ಪುರಸಭೆಯು ಕಾರ್ಯಪ್ರವೃತ್ತವಾಗುವದರೊಂದಿಗೆ ಪಾಗಿಂಗ್ ಸೇರಿದಂತೆ ಚರಂಡಿ ಇನ್ನಿತರ ಕಡೆಗಳಲ್ಲಿ ಕ್ರೀಮಿನಾಶಕ ಪೌಡರ್ ಸಿಂಪಡಿಸುವದರೊAದಿಗೆ ಕ್ರಮಕ್ಕೆ ಮುಂದಾಗಿದೆ ನಮ್ಮ ಸಿಬ್ಬಂದಿಗಳು ಬಂದಾಗ ಫಾಗಿಂಗ್ ಮತ್ತು ಕ್ರೀಮಿನಾಶಕ ಪೌಡರ್ ಸಿಂಪರಣೆಗೆ ಸಾರ್ವಜನಿಕರು ಅವಕಾಶ ಮಾಡಿಕೊಡಬೇಕು ಸಾಯಂಕಾಲವಾಗುತ್ತಿದ್ದAತೆ ಸಾರ್ವಜನಿಕರು ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿಕೊಳ್ಳುವದು ಸೂಕ್ತವಾಗಿದೆ.
ವಸಂತ ಪವಾರ
ಪುರಸಭೆ ಮುಖ್ಯಾದಿಕಾರಿ ತಾಳಿಕೋಟೆ






















