ಕೇಬಲ್ ಅಳವಡಿಕೆಗೆ ಬೇಕಾಬಿಟ್ಟಿ ರಸ್ತೆ ಅಗೆತಗುತ್ತಿಗೆದಾರನಿಗೆ ಪುರಸಭೆ ಮುಖ್ಯಾಧಿಕಾರಿಯಿಂದ ತರಾಟೆೆ

ತಾಳಿಕೋಟೆ:ಜ.೨೨: ಪಟ್ಟಣದ ವಿಜಯಪುರ ರಸ್ತೆಗೆ ಹೊಂದಿಕೊAಡು ಜಾನಕಿ ಹಳ್ಳದ ಹತ್ತಿರ ಕೇಬಲ್ ಅಳವಡಿಕೆಗೆ ಪುರಸಭೆಯ ಅನುಮತಿಯ ನಿಯಮ ಮೀರಿ ಬೇಕಾ ಬಿಟ್ಟಿ ರಸ್ತೆ ಅಗೆಯುತ್ತಿರುವ ಮಾಹಿತಿ ಅರೇತ ಪುರಭೆ ಮುಖ್ಯಾಧಿಕಾರಿ ವಸಂತ ಪವಾರ ಅವರು ಸ್ಥಳಕ್ಕೆ ಆಗಮಿಸಿ ಕೇಬಲ್ ಅಳವಡಿಕೆ ಸ್ಥಳದಲ್ಲಿದ್ದ ಏರಟೇಲ್ ಕಂಪನಿಯ ಕೇಬಲ್ ಹಾಕಲು ಗುತ್ತಿಗೆ ಹಿಡಿದ ಗುತ್ತಿಗೆದಾರನಿಗೆ ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರರಂದು ನಡೆದಿದೆ.
ಈ ಮೊದಲು ಏರಟೇಲ್ ಕಂಪನಿಯ ಕೇಬಲ್‌ಗಳನ್ನು ಅಳವಡಿಸಲಾಗಿತ್ತು ಅದರೆ ಕೇಬಲ್‌ಗಳು ಹಳೆಯದಾಗಿದ್ದರಿಂದ ಹೊಸ ಕೆಬಲ್ ಅಳವಡಿಕೆಗೆ ಏರಟೇಲ್ ಕಂಪನಿಯಿAದ ಬೋರಿಂಗ್ ಮೂಲಕ ಕೇಬಲ್ ಅಳವಡಿಕೆಗೆ ಪುರಸಭೆಯಿಂದ ಅನುಮತಿ ಪಡೆದುಕೊಳ್ಳಲಾಗಿತ್ತು ಪುರಸಭೆಯಿಂದ ಅನುಮತಿ ಪಡೆದುಕೊಳ್ಳುವಾಗ ಬೊರಿಂಗ್ ಮೂಲಕ ಕೇವಲ್ ಅಳವಡಿಸುವದಾಗಿ ಮುಚ್ಚಳಿಕೆ ಪತ್ರ ನೀಡಿ ಅನುಮತಿ ಪಡೆದುಕೊಂಡು ಸದ್ಯ ಕೇಬಲ್ ಅಳವಡಿಕೆಗೆ ಬೋರಿಂಗ್ ಮೂಲಕ ಕೇಬಲ್ ಅಳವಡಿಸದೇ ರಸ್ತೆಯನ್ನು ಬೇಕಾಬಿಟ್ಟಿ ಎಲ್ಲೆಂದರಲ್ಲಿ ಅಗೆಯುವದರೊಂದಿಗೆ ಕೇಬಲ್‌ಗಳನ್ನು ರಸ್ತೆಯಲ್ಲಿ ಹಾಕುತ್ತಾ ಸಾಗಿದ್ದರು. ಈ ವಿಷಯವನ್ನು ಅರೀತ ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ ಅವರು ಸಿಬ್ಬಂದಿಯೊAದಿಗೆ ಆಗಮಿಸಿ ಸ್ಥಳದಲ್ಲಿದ್ದ ಏರಟೇಲ್ ಕಂಪನಿಯ ಕೇಬಲ್ ಅಳವಡಿಕೆಗೆ ಗುತ್ತಿಗೆ ಪಡೆದ ಗುತ್ತಿಗೆದಾರನಿಗೆ ತರಾಟೆಗೆ ತೆಗೆದುಕೊಂಡರಲ್ಲದೇ ಕೇಬಲ್ ಅಳವಡಿಕೆ ಬೋರಿಂಗ್ ಮೂಲಕ ಎಂದು ಮುಚ್ಚಳಿಕೆ ಬರೆದುಕೊಟ್ಟು ಈಗ ಬೇಕಾಬಿಟ್ಟಿಯಾಗಿ ರಸ್ತೆ ಅಗೆಯುತ್ತಾ ಸಾಗಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಲ್ಲದೇ ಕೂಡಲೇ ಕೆಲಸ ಸ್ಥಗಿತಗೊಳಿಸಲು ಸೂಚಿಸಿದಾಗ್ಯೂ ಕೂಡಾ ಕೇಬಲ್ ಅಳವಡಿಕೆ ಸಮಯದಲ್ಲಿ ಕೆಟ್ಟ ರಸ್ತೆಯನ್ನು ಸರಿ ಮಾಡುತ್ತೇವೆ ಯೊಚಿಸಬೇಡಿ ಎಂದು ಅಧಿಕಾರಿಗಳಿಗೆ ಉತ್ತರಿಸುವದರೊಂದಿಗೆ ತಮ್ಮ ಕೆಲಸವನ್ನು ಸಮಜಾಯಿಸಲು ಮುಂದಾದಾಗ ಮುಖ್ಯಾಧಿಕಾರಿ ವಸಂತ ಪವಾರ ಅವರು ಪುರಸಭೆಯಿಂದ ಅನುಮತಿ ಪಡೆದುಕೊಂಡ ನಿಯಮವನ್ನು ಮೀರಿ ಕೆಲಸ ಮಾಡುವದರಲ್ಲದೇ ಕೆಡಿಸಿದ ರಸ್ತೆ ಮಾಡುತ್ತೇವೆಂದು ಬೇಕಾಬಿಟ್ಟಿ ರಸ್ತೆ ಅಗೇಯುವದು ನಡೆಯುವದಿಲ್ಲಾ ಕೆಲಸವನ್ನು ಸ್ಥಗಿತಗೊಳಿಸಲು ಸೂಚಿಸಿದರಲ್ಲದೇ ರಸ್ತೆ ಅಗೆಯುವ ಕೆಲಸ ಸ್ಥಗಿತಗೊಳಿಸದಿದ್ದರೆ ಕಾನೂನಾತ್ಮಕವಾಗಿ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಏಚ್ಚರಿಸಿ ತೆರಳಿದರು.

ಈ ಸಮಯದಲ್ಲಿ ಪುರಸಭೆ ಜೆಇ ಸಂದೀಪ ವಠಾರ, ಆರೋಗ್ಯ ನಿರಿಕ್ಷಕ ಶಿವಾನಂದ ಜುಮನಾಳ, ಶ್ರೀಪಾದ ಜೋಶಿ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸಲಕರಣೆಗಳು ಪುರಸಭೆ ವಶಕ್ಕೆ
ಏರಟೇಲ್ ಕೇಬಲ್ ಅಳವಡಿಕೆಗಾಗಿ ರಸ್ತೆ ಅಗೆಯಲು ಗುತ್ತಿಗೆದಾರನು ಬಳೆಸುತ್ತಿದ್ದ ಗುದ್ದಲಿ, ಪುಟ್ಟಿ, ಸಲಕೆ, ಹಾರಿ ಅಲ್ಲದೇ ಇನ್ನಿತರ ಸಲಕರಣೆಗಳನ್ನು ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ ಅವರು ವಶಕ್ಕೆ ಪಡೆದುಕೊಂಡರಲ್ಲದೇ ಪುರಸಭೆ ನಿಯಮ ಮೀರಿ ಬೇಕಾಬಿಟ್ಟಿ ರಸ್ತೆ ಅಗೇದರೆ ಸುಮ್ಮನೇ ಕೂಡುವದಿಲ್ಲಾ ಪುರಸಭೆ ಆಸ್ತಿ ಸಾರ್ವಜನಿಕ ಆಸ್ತಿ ಆಗಿದ್ದು ಇದನ್ನು ಹಾಳು ಯಾರು ಮಾಡಿದರೂ ಸಹೀಸಲ್ಲಾ ಅದರಲ್ಲಿ ಪ್ರಮುಖ ರಾಜ್ಯ ಹೆದ್ದಾರಿ ರಸ್ತೆಯ ಪಕ್ಕದಲ್ಲಿಯೇ ಕೇಬಲ್ ಅಳವಡಿಕೆಗೆ ಬೇಕಾಬಿಟ್ಟಿ ರಸ್ತೆ ಅಗೆದಿದ್ದಾರೆ ಹೀಗಾಗಿ ರಸ್ತೆ ಅಗೆಯಲು ಬಳೆಸಿದ ಸಲಕರಣೆಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆAದು ಪತ್ರಿಕೆಗೆ ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ ಅವರು ತಿಳಿಸಿದ್ದಾರೆ.