
ಮುಂಬೈ, ಜ. ೧೬- ದೇಶದ ಆರ್ಥಿಕ ರಾಜಧಾನಿ ಮುಂಬೈ ಸೇರಿದಂತೆ ಮಹಾರಾಷ್ಟ್ರದ ೨೯ ಮಹಾನಗರ ಪಾಲಿಕೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ನಡೆದಿದ್ದು, ಬಿಜೆಪಿ ನೇತೃತ್ವದ ಮಹಾಯುತಿ ಆರಂಭಿಕ ಮುನ್ನಡೆ ಸಾಧಿಸಿದೆ.
ಮಹಾರಾಷ್ಟ್ರದ ೨೯ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಡ ಮಹಾಯುತಿ ಮೈತ್ರಿಕೂಟ ೨೩ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಹಿಡಿಯುವತ್ತ ಮುನ್ನಡೆ ಸಾಧಿಸಿದೆ.
ಮುಂಬೈ, ಪುಣೆ, ನಾಗಪುರ್ ಸೇರಿದಂತೆ ಮಹಾರಾಷ್ಟ್ರದ ಪ್ರಮುಖ ನಗರಪಾಲಿಕೆಗಳಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಮುನ್ನಡೆಯಲ್ಲಿದ್ದು, ಶಿವಸೇನೆ, ಕಾಂಗ್ರೆಸ್, ಎನ್‌ಸಿಪಿ ಪಕ್ಷಗಳಿಗೆ ಹಿನ್ನಡೆಯಾಗಿದೆ.
ದೇಶದ ಆರ್ಥಿಕ ರಾಜಧಾನಿ ಹಾಗೂ ಶ್ರೀಮಂತ ಮಹಾನಗರ ಪಾಲಿಕೆಯಾಗಿರುವ ಮುಂಬೈನಲ್ಲಿ ಪಾಲಿಕೆ ಆಡಳಿತಕ್ಕಾಗಿ ಬಿಜೆಪಿ ನೇತೃತ್ವದ ಮಹಾಯುತಿ ಹಾಗೂ ಶಿವಸೇನೆ ನಡುವೆ ಹಣಾಹಣಿಯೇ ನಡೆದಿದ್ದು, ಆರಂಭಿಕವಾಗಿ ಬಿಜೆಪಿ ಮುನ್ನಡೆಯಲ್ಲಿದೆ.
ಮುಂಬೈ ಮಹಾನಗರ ಪಾಲಿಕೆ ಶಿವಸೇನೆಯ ಭದ್ರ ಕೋಟೆಯಾಗಿದ್ದು, ಇದೇ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಮಹಾಯುತಿ ಈ ಭದ್ರಕೋಟೆಯನ್ನು ಬೇಧಿಸಿ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಈ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಹಲವು ವರ್ಷಗಳಿಂದ ದೂರವಾಗಿದ್ದ ಉದ್ಧವ್ ಠಾಕ್ರೆ ಹಾಗೂ ರಾಜ್‌ಠಾಕ್ರೆ ಒಂದಾಗಿದ್ದರೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.
ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು ವಿಭಜಿಸಿ ಏಕನಾಥ್‌ಶಿಂಧೆ ಜತೆಗೂಡಿ ಹಾಗೆಯೇ ಎನ್‌ಸಿಪಿಯನ್ನು ವಿಭಜಿಸಿ ಅಜಿತ್ ಪವಾರ್ ಜತೆಗೂಡಿ ಮಹಾಯುತಿ ಮೈತ್ರಿಕೂಟ ರಚಿಸಿಕೊಂಡಿರುವ ಬಿಜೆಪಿ ಮುಂಬೈ ಸೇರಿದಂತೆ ಮಹಾರಾಷ್ಟ್ರದ ಪ್ರಮುಖ ಪಟ್ಟಣಗಳ ಪಾಲಿಕೆಗಳ ಚುನಾವಣೆಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಆಡಳಿತ ಪಕ್ಷದ ಭಾಗವಾಗಿದ್ದ ಎನ್‌ಸಿಪಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎನ್ ಸಿಪಿ ಶರದ್ ಪವಾರ್ ಬಣದ ಜೊತೆಗೆ ಕೈಜೋಡಿಸಿ ಚುನಾವಣೆ ಎದುರಿಸಿತ್ತು. ಎನ್ ಸಿಪಿ ಹಾಗು ಎನ್ ಸಿಪಿ ಶರದ್ ಪವಾರ್ ಬಣ. ಹಚ್ಚಿನ ಸ್ಥಾನ ಪಡೆಯುವಲ್ಲಿ ವಿಫಲವಾಗಿವೆ.
ಈ ಬಾರಿ ವಿರೋಧ ಪಕ್ಷಗಳ ಮೈತ್ರಿಕೂಟದಲ್ಲಿ ಶಿವಸೇನೆ ಉದ್ದವ್ ಠಾಕ್ರ ಬಣ ಮತ್ತು ಸೋದಹ ಸಂಬಂಧಿ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಜೊತೆಯಾಗಿ ಸ್ಪರ್ಧೆ ಮಾಡಿದ್ದವು, ಉದ್ದವ್ ಠಾಕ್ರೆ ಬಣ-ಹಾಗು ಎಂಎನ್ ಎಸ್ ಪೈಪೋಟಿ ನೀಡಿದೆ.
ಕಾಂಗ್ರೆಸ್ ಹಾಗು ವಿಬಿಎ ಹೆಚ್ಚಿನ ಸ್ಥಾನ ಹಾಗು ಇತರರು ಹಲವು ಕ್ಷೇತ್ರಗಳಲ್ಲಿ ಗೆಲವು ಸಾಧಿಸಿ ಅಧಿಕಾರ ಚುಕ್ಕಾಣಿ ಹಿಡಯುವುಲ್ಲಿ ನಿರ್ಣಾಯಕ ಪಾತ್ರವಹಿಸಿದ್ದಾರೆ.
ಬಿಎಂಸಿಯಲ್ಲಿ ಮುನ್ನೆಡೆ
ಮುಂಬೈನ ೨೨೭ ಸ್ಥಳೀತ ಸಂಸ್ಥಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ , ಶಿವಸೇನೆ ಮೈತ್ರಿಕೂಟ ಮುನ್ನೆಡೆ ಪಡೆದಿದೆ. ಬಹುಮತ ಪಡೆಯಲು ೧೧೪ ಸಂಖ್ಯೆ ಅಗತ್ಯವಿದ್ದು, ೮೬ಕ್ಕೂ ಅಧಿಕ ಸ್ಥಾನ ಪಡೆದು ವಿಜಯದತ್ತ ಹೆಜ್ಜೆ ಹಾಕಿದ್ದಾರೆ.
ಶಿವಸೇನೆ ಉದ್ದವ್ ಠಾಕ್ರೆ ಬಣ ಎನ್ ಸಿಪಿ ಎನ್ ಸಿಪಿ ಶರದ್ ಪವಾರ್ ಬಣ. ಕಾಂಗ್ರೆಸ್, ಎಂಎನ್‌ಎಸ್, ವಿಬಿಎ
ಹಾಗೂ ಇತರರು ಕ್ಷೇತ್ರಗಳಲ್ಲಿ ಕಮಾಲು ಮಾಡಲು ವಿಫಲವಾಗಿದೆ.
ಇತ್ತೀಚೆಗೆ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ ಮತ್ತು ಎನ್ ಸಿಪಿ ಪಕ್ಷಗಳು ಬಾರಿ ಮಹುಮತದಿಂದ ಅಧಿಕಾರ ಹಿಡಿದಿದ್ದವು. ಈ ಭಾರಿ ಮಹಾಯುತಿ ಮೈತ್ರಿಕೂಟದಲ್ಲಿ ಬಿಜೆಪಿ, ಶಿವಸೇನೆ ಹೊರತು ಪಡಿಸಿ ಬೇರೆ ಬೇರೆಯಾಗಿ ಸ್ಪರ್ಧಿಸಿದ್ದವು.
ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಬಿಜೆಪಿ ನೇತೃತ್ವದ ಮಹಾಯುತಿ ಪಾಲಿಕೆ ಚುನಾವಣೆಗಳಲ್ಲೂ ಗೆಲುವಿನತ್ತ ದಾಪುಗಾಲು ಇಟ್ಟಿದೆ.
ಮುಂಬೈ, ಪೂನಾ, ನಾಗಪುರ ಸೇರಿದಂತೆ ಪ್ರಮುಖ ಪಾಲಿಕೆಗಳಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮುನ್ನಡೆ ಕಾಯ್ದುಕೊಂಡಿದ್ದು, ಕಾಂಗ್ರೆಸ್, ಶಿವಸೇನೆ, ಶರತ್ ಪವಾರ್ ನೇತೃತ್ವದ ಎನ್‌ಸಿಪಿ ಹಿನ್ನಡೆ ಅನುಭವಿಸಿವೆ.
ಮುಂಬೈನ ಒಟ್ಟು ೨೭೭ ವಾರ್ಡ್‌ಗಳ ಪೈಕಿ ಬಿಜೆಪಿ ೪೨, ಶಿಂಧೆ ನೇತೃತ್ವದ ಶಿವಸೇನೆ ೧೩, ಉದ್ಧವ್ ನೇತೃತ್ವದ ಶಿವಸೇನೆ ೨೮, ಕಾಂಗ್ರೆಸ್ ೬, ಎಂಎನ್‌ಎಸ್ ೨ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.
ನವಿ ಮುಂಬೈ ಪಾಲಿಕೆಯ ೧೧ ವಾರ್ಡ್‌ಗಳ ಪೈಕಿ ಬಿಜೆಪಿ ೧೫, ಶಿಂಧೆ ಶಿವಸೇನೆ ೧೨ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.
ಥಾಣೆಯಲ್ಲಿ ಒಟ್ಟು ೧೩೧ ವಾರ್ಡ್‌ಗಳಿದ್ದು, ಶಿಂಧೆ ಶಿವಸೇನೆ ೧೪, ಬಿಜೆಪಿ ೧೨, ಶರದ್ ಪವಾರ್‌ರವರ ಎನ್‌ಸಿಪಿ ೨ ವಾರ್ಡ್‌ಗಳಲ್ಲಿ ಮುನ್ನಡೆಯಲ್ಲಿವೆ.
ಮುಂಬೈನ ೨೨೭ ವಾರ್ಡ್‌ಗಳು ಸೇರಿ ಮಹಾರಾಷ್ಟ್ರದ ೮೯೩ ಪಾಲಿಕೆ / ಪುರಸಭೆ ವಾರ್ಡ್‌ಗಳ ೨೮೬೯ ಸ್ಥಾನಗಳಿಗೆ ಗುರುವಾರ ಮತದಾನ ನಡೆದಿತ್ತು. ಇಂದು ಮತ ಎಣಿಕೆ ನಡೆದಿದೆ. ಸಂಜೆಯೊಳಗೆ ಎಲ್ಲಾ ಪಾಲಿಕೆ, ಪುರಸಭೆಗಳ ಫಲಿತಾಂಶ ಪ್ರಕಟವಾಗಲಿದೆ.


























