
ಕೊಲ್ಹಾರ:ನ.೧೮: ತಾಲ್ಲೂಕಿನ ಸುಕ್ಷೇತ್ರ ಮುಳವಾಡ ಗ್ರಾಮದ ಆರಾಧ್ಯ ದೇವರಾದ ಶ್ರೀ ಗೌರಿ ಶಂಕರ ಜಾತ್ರಾ ಮಹೋತ್ಸವವು ಬಹಳ ವಿಜೃಂಭಣೆಯಿAದ ಜರುಗಿತು.
ಈ ವೇಳೆ ಜಾತ್ರೆಯಲ್ಲಿ ಗ್ರಾಮದ ಶಿವರಾಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಮಲ್ಲಗಂಬ ಪ್ರದರ್ಶನವನ್ನು ಈ ಬಾರಿ ವಿಶೇಷವಾಗಿ ಆಯೋಜಿಸಲಾಗಿತ್ತು. ಮಲ್ಲಗಂಬ ಪ್ರದರ್ಶನವು ಅಪಾರ ಸಂಖ್ಯೆಯಲ್ಲಿ ಜಾತ್ರೆಗೆ ಆಗಮಿಸಿದ ಭಕ್ತರ ಜನರ ಗಮನವನ್ನು ಸೆಳೆಯಿತು. ಉತ್ತರ ಕರ್ನಾಟಕದ ಗ್ರಾಮೀಣ ಕ್ರೀಡೆಯಾದ ಮಲ್ಲಗಂಬ ಮರೆಯಾಗುತಿರುವ ಸಂದರ್ಭದಲ್ಲಿ ಮಲ್ಲಗಂಬವನ್ನು ಉಳಿಸುವ ನಿಟ್ಟಿನಲ್ಲಿ ತುಳಿಸಿಗೇರಿಯ ದೈಹಿಕ ನಿರ್ದೇಶಕರಾದ ಸಿ ಕೆ ಚನಾಳರವರು ಹಾಗೂ ತರಬೇತಿದಾರ ಪ್ರಶಾಂತ ಸೊನ್ನದರವರು ಇಲ್ಲಿನ ಮಕ್ಕಳಿಗೆ ಮಾರ್ಗದರ್ಶನ ಮಾಡಿದ ಹಿನ್ನೆಲೆಯಲ್ಲಿ ಮಕ್ಕಳು ಉತ್ತಮ ಪ್ರದರ್ಶನ ನೀಡಿದರು.
ಜಾತ್ರೆಯ ನಿಮಿತ್ತ ಆಯೋಜಿಸಿದ್ದ ನಾಟಕ, ಗೀ ಗೀ ಪದಗಳು, ಚಿತ್ರ ವಿಚಿತ್ರ ಮದ್ದು ಸುಡುವ ಕಾರ್ಯಕ್ರಮ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕ್ರಿಕೆಟ್, ಕಬಡ್ಡಿ, ಕುಸ್ತಿ ವ್ಹಾಲಿಬಾಲ ಕ್ರೀಡಾಕೂಟಗಳು ಬಹಳ ಸಡಗರ ಸಂಭ್ರಮದಿAದ ಜರುಗಿದವು. ಅದೇ ರೀತಿಯಾಗಿ ಸೋಮವಾರ ಗ್ರಾಮದ ಪ್ರಾಥಮಿಕ ಅರೋಗ್ಯ ಕೇಂದ್ರ ಹಾಗೂ ಶ್ರೀ ಸತ್ಯ ಸಾಯಿ ಸೇವಾ ಸಮಿತಿ ವತಿಯಿಂದ ಶ್ರೀ ಗೌರಿ ಜಾತ್ರೆಯ ನಿಮಿತ್ಯವಾಗಿ ಹಾಗೂ ಶ್ರೀ ಸತ್ಯ ಸಾಯಿಬಾಬಾ ರವರ ೧೦೦ನೇ ಹುಟ್ಟುಹಬ್ಬದ ನಿಮಿತ್ಯವಾಗಿ ರಕ್ತ ದಾನ ಶಿಬಿರ ಹಮ್ಮಿಕೊಳ್ಳಲಾಯಿತು.
ಈ ವೇಳೆ ಚನ್ನಪ್ಪಗೌಡ ಬಿರಾದಾರ, ಬಸವರಾಜ ಸಿದ್ದಾಪುರ, ಕಲಬಸಪ್ಪ ವಿಜಾಪುರ, ಸಂಗಮೇಶ ವಿಜಾಪುರ, ಈರಣ್ಣ ಬೀಳಗಿ,ಸಂಗನಗೌಡ ಮ ಪಾಟೀಲ. ನಂದು ಕುಬಕಡ್ಡಿ, ಹಣಮಂತ ಕಳಸಗೊಂಡ, ಬಾಳು ಚಿನ್ನಕೆಕರ, ರವಿ ಕೆಂಗನಾಳ, ವೈದ್ಯಧಿಕಾರಿ ನಂದಿನಿ, ಗಂಗಾಧರ ಹಾದಿಮನಿ, ನಿಲೇಶ ಕುರಾವಿನಶೆಟ್ಟಿ, ರಮೇಶ ಕಾರಜೋಳ, ಸದಾನಂದ ಮಮದಾಪುರ, ರಮೇಶ ಹಂಚಿನಾಳ, ಶ್ರೀಶೈಲ ಸಬರದಸೇರಿದಂತೆ ಅನೇಕರು ಉಪಸ್ಥಿತರಿದ್ದರು.























