
ಸೇಡಂ: ಜು. 06: ಸುಮಾರು ಏಳನೆಯ ಶತಮಾನದಲ್ಲಿ ಕ್ರಿ.ಶ 680ರಲ್ಲಿ ನಡೆದ ಕರ್ಬಲಾ ಕದನದಲ್ಲಿ ಮರಣ ಹೊಂದಿದ ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ರ ಸವಿನೆನಪಿಗಾಗಿ ಶೋಕದ ದಿನವನ್ನು ಆಚರಿಸುವ ಹಬ್ಬವೇ ಮೊಹರಂ ಹಬ್ಬವಾಗಿದ್ದು, ಈ ಹಬ್ಬವನ್ನು ತಾಲೂಕಿನ ಮಳಖೇಡ, ರಂಜೋಳ್, ಮೇದಕ್, ಕೊಡ್ಲಾ, ನಾಚವಾರ, ಅಳ್ಳೋಳ್ಳಿ, ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಿಂದೂ,ಮುಸ್ಲಿಂ,ಕ್ರೈಸ್,ಬೌದ್ಧ ಸಮುದಾಯದವರು ಭಾವೈಕ್ಯತೆಯಿಂದ ಸಡಗರ ಸಂಭ್ರಮದಿಂದ ಮೊಹರಂ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಿದ್ದಾರೆ.ನ್ಯಾಯ ತ್ಯಾಗ ಮತ್ತು ದಬ್ಬಳಿಕೆಯ ವಿರುದ್ಧ ಪ್ರತಿರೋಧವನ್ನು ಸಂಕೇತಿಸುವ ಹಬ್ಬವೆ ಮೊಹರಂ ಹಬ್ಬ ಎಂದು ಮುಸ್ಲಿಂ ಬಾಂಧವರು ಸಂಜೆವಾಣಿ ವರದಿಗಾರರೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹಲಗೆ ಸಂಗೀತಕ್ಕೆ ಬಡೆಗೆ ನೃತ್ಯ ಮಾಡುವ ಜೊತೆಗೆ ಮೊಹರಂ ಹಾಡುಗಳು ಸಾಭಿಕರನ್ನು ದೇವರ ಸ್ಮರಣೆಗೆ ಮುಂದಾಗುತ್ತಿರುವುದು ನೋಡಬಹುದಾಗಿದೆ.