ಗಿರಿನಾಡಿನ ಪ್ರಗತಿಗೆ ಮುದ್ನಾಳ ಕುಟುಂಬದ ಸೇವೆ ಅವಿಸ್ಮರಣೀಯ

ಸೈದಾಪುರ:ಸೆ.೧೧:ಗಿರಿನಾಡಿನ ಪ್ರಗತಿಗೆ ಮುದ್ನಾಳ ಕುಟುಂಬದ ಪ್ರತಿ ಸದಸ್ಯರ ಕೊಡುಗೆ ಅವಿಸ್ಮರಣೀಯವಾಗಿದೆ. ಅದರಲ್ಲಿ ಮಾಜಿ ಶಾಸಕ ದಿ.ವೆಂಕಟರೆಡ್ಡಿಗೌಡ ಮುದ್ನಾಳ ರವರು ಮಾಡಿದ ಜನ ಸೇವೆಯು ಇಂದಿಗೂ ಜೀವಂತವಾಗಿವೆ ಎಂದು ಹಿರಿಯ ಮುಖಂಡರು ಹಾಗೂ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಮುದ್ನಾಳ ಕುಟುಂಬದ ಅನುಯಾಯಿಗಳು ಮತ್ತು ಅಭಿಮಾನಿಗಳು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಮುದ್ನಾಳ ಕುಟುಂಬದ ವಿಶ್ವನಾಥರೆಡ್ಡಿ ಮುದ್ನಾಳ್, ಡಾ.ವೀರಬಸವಂತರೆಡ್ಡಿ ಹಾಗೂ ಮಾಜಿ ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ರವರು ಇರವಷ್ಟು ಕಾಲ ಜಿಲ್ಲೆಯಲ್ಲಿ ಪಕ್ಷಾತೀತವಾಗಿ ಸಮಾಜದ, ಬಡಜನರ ಸೇವೆ ಮಾಡುತ್ತಾ ಅಪಾರ ಸ್ನೇಹ ಬಳಗವನ್ನು ಹೊಂದಿದ್ದಾರೆ. ಅವರನ್ನು ಸ್ಮರೀಸಲು ದಿ.ವೆಂಕಟರಡ್ಡಿಗೌಡ ಮುದ್ನಾಳ ರವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಸೆಪ್ಟೆಂಬರ್ ೧೭ರಂದು ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು. ಈ ಕಾರ್ಯದಲ್ಲಿ ಪ್ರತಿಯೊಬ್ಬ ಅಭಿಮಾನಿಗಳು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಯುವ ಮುಖಂಡ ಮಹೇಶರಡ್ಡಿ ಮುದ್ನಾಳ, ನಗರದ ಎನ್‌ವಿಎಂ ಹೋಟೆಲ್ ಪಕ್ಕದ ಮೈದಾನದಲ್ಲಿ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುವುದು. ವಿವಿಧ ಮಠಾಧೀಶರ ಸಾನಿಧ್ಯ ವಹಿಸಲಿದ್ದು, ಪಕ್ಷಾತೀತವಾದ ರಾಜಕೀಯ ಗಣ್ಯರು ಪಾಲ್ಗೊಳ್ಳುವರು. ಸುಮಾರು ೧೦ ಸಾವಿರಕ್ಕಿಂತ ಹೆಚ್ಚು ಮುದ್ನಾಳ ಕುಟುಂಬದ ಹಿತೈಸಿಗಳು ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಎಪಿಎಮ್‌ಸಿ ಮಾಜಿ ಅಧ್ಯಕ್ಷ ಭೀಮಣ್ಣಗೌಡ ಕ್ಯಾತ್ನಾಳ ಪ್ರಾಸ್ತವಿಕವಾಗಿ ಮಾತನಾಡಿ, ಪುಣ್ಯಸ್ಮರಣೆ ಕರ‍್ಯಕ್ರಮವನ್ನು ಅಚ್ಚುಕಟ್ಟಾಗಿ ಹಮ್ಮಿಕೊಳ್ಳಲು ನಿರ್ಧರಿಸಿದ್ದು, ಅಂದು ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಈಗಿನಿಂದಲೇ ತಯಾರಿ ನಡೆಸಲಾಗುತ್ತಿದೆ ಎಂದು ಹೇಳಿದರು.
ಸಭೆಯಲ್ಲಿ ಹಿರಿಯ ಮುಖಂಡ ಭೀಮರೆಡ್ಡಿ ಪಾಟೀಲ್ ಶೆಟ್ಟಿಹಳ್ಳಿ, ಸಿದ್ದಣ್ಣಗೌಡ ಕಡೇಚೂರು, ಬಸವರಾಜಯ್ಯಸ್ವಾಮಿ ಬದ್ದೇಪಲ್ಲಿ, ಮಲ್ಲಣಗೌಡ ಕೂಡಲೂರು, ಭೀಮಣ್ಣಗೌಡ ಕ್ಯಾತನಾಳ, ಶರಣುಗೌಡ ಬಾಡಿಯಾಳ, ಪ್ರಕಾಶಗೌಡ ಸೈದಾಪುರ, ಶ್ರೀಧರ ಘಂಟಿ ಬಾಡಿಯಾಳ, ನಿರಂಜನರೆಡ್ಡಿಗೌಡ ಶೆಟ್ಟಿಹಳ್ಳಿ, ಶ್ರೀದೇವಿ ಪಾಟೀಲ್ ಪರ್ಲಾ, ಬಸಪ್ಪಗೌಡ ಬೆಳಗುಂದಿ, ಚಂದ್ರುಗೌಡ ಸೈದಾಪುರ, ವೆಂಕಟೇಶ ಜಿ ಪುರಿ, ಬಸವಂತ ಬೆಳಗುಂದಿ, ರವೀಂದ್ರ ಕೂಡಲೂರು, ಹಣಮರೆಡ್ಡಿ ಮೋಟ್ನಳ್ಳಿ, ದೇವರಾಜಗೌಡ ಹೆಗ್ಗಣಗೇರಾ, ಮಹೇಶ ಜೇಗರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.