
ಕಿತ್ತೂರು,ಡಿ.೨೮: ತಾಲೂಕಿನ ಕಲಂಭಾವಿ ಅಕ್ಷಯ ಟ್ರಸ್ಟ್ ಹೊಸ ಪೌಢಶಾಲೆಗೆ ಕೆನರಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿನೀಡಿದರು. ಅಲ್ಲಿಯ ಮಕ್ಕಳ ಸಂಖ್ಯೆ, ವಿವಿಧ ದಾಖಲೆಗಳನ್ನು ಪರಿಶೀಲಿಸಿ ಮುಖ್ಯೋಪಾಧ್ಯಾಯರ ಹಾಗೂ ಸಂಸ್ಥೆಯ ಅಧ್ಯಕ್ಷರ ಜೊತೆ ಸಂವಾದ ನಡೆಸಿ ವಿದ್ಯಾಭ್ಯಾಸ ಕುರಿತು ಮಕ್ಕಳೊಂದಿಗೆ ರ‍್ಚಿಸಿ ಪ್ರಗತಿಯ ಕುರಿತು ಮರ‍್ಗರ‍್ಶನ ನೀಡಿದರು.
ಈ ವೇಳೆ ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ನರ‍್ದೇಶಕ ಮಹಾಂತೇಶ ದೊಡ್ಡಗೌಡರ, ಸಂಸ್ಥೆಯ ಅಧ್ಯಕ್ಷ ಅನುಪ ದೇಶಪಾಂಡೆ, ಮಾಜಿ ಜಿಪಂ ಅಧ್ಯಕ್ಷ ಚನ್ನಬಸಪ್ಪ ಮೊಕಾಶಿ, ಮಂಡಳ ಅಧ್ಯಕ್ಷ ಶ್ರೀಕರ ಕುಲರ‍್ಣಿ, ಬಿಇಓ ಸಿ.ವೈ.ತುಬಾಕದ, ಮುಖ್ಯೋಪಾಧ್ಯಾಯ ಶಿವಾಜಿ ಕದಂ, ರವಿಂದ್ರ ಸೋಮನಟ್ಟಿ, ಉಳವಯ್ಯಾ ಜಮನೂರ, ಮಲ್ಲಪ್ಪ ಉಪಾಸಿ, ಫಕ್ಕೀರಪ್ಪ ಬಡಿಗೇರ, ಭೀಮಪ್ಪ ಕದಂ, ಜಿಲ್ಲಾ ಪ್ರಧಾನ ಕರ‍್ಯರ‍್ಶಿ ಸಂದೀಪ ದೇಶಪಾಂಡೆ, ಸಹ ಶಿಕ್ಷಕರು-ಶಿಕ್ಷಕೀಯರು, ಮಕ್ಕಳು ಇನ್ನಿತರರಿದ್ದರು. ಕಮೀಟಿಯವರು, ಶಿಕ್ಷಕರು ಜೊತೆಗೂಡಿ ಸತ್ಕರಿಸಿದರು.























