ಸಂಸದ .ಸುಧಾಕರ್ ಮೇಲೆ ಹಲ್ಲೆ – ನಸ್ಸೀರ್‌ಗೆ ಸಮನ್ಸ್ ಜಾರಿ

ಕೋಲಾರ,ಅ,೧೩- ವಿಧಾನ ಸೌಧದಲ್ಲಿ ಸಂಸದ ಡಾ. ಕೆ.ಸುಧಾಕರ್ ಮೇಲೆ ಹಲ್ಲೆ ಮಾಡಿದರೆಂದು ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮ್ಮದ್ ವಿರುದ್ದ ಪ್ರಕರಣ ದಾಖಲಾಗಿದ್ದು ಅ.೨೭ ರಂದು ಬೆಂಗಳೂರಿನ ೪೨ನೇ ಸಿ.ಎಂ.ಜೆ.ಎಂ. ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ.


ವಿಧಾನಸೌಧ ಠಾಣೆಯ ಪೊಲೀಸರು ಪ್ರಕರಣದ ಸಂಬಂಧ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಿರುವ ಹಿನ್ನಲೆಯಲ್ಲಿ ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ವಿಚಾರಣೆಗೆ ಹಾಜರಾಗುವಂತೆ ನಸ್ಸೀರ್ ಆಹ್ಮಮದ್ ಅವರಿಗೆ ಸಮನ್ಸ್ ಜಾರಿಗೊಳಿಸಿ ಮುಂದಿನ ವಿಚಾರಣೆಯನ್ನು ಅ೨೭ಕ್ಕೆ ಮುಂದೊಡಿದೆ.


ಪ್ರಕರಣ ವಿವರ-
ಚಿಕ್ಕಬಳ್ಳಾಪುರ ಶಾಸಕರಾಗಿದ್ದ ಹಾಗೂ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದ ಡಾ. ಕೆ.ಸುಧಾಕರ್ ಅವರು ೨೦೧೯ರ ಜು.೧೦ ರಂದು ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ವಿಧಾನಸೌಧಕ್ಕೆ ಬಂದಿದ್ದರು. ಸ್ಪೀಕರ್ ಅವರ ಕಚೇರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ನಸ್ಸೀರ್ ಆಹಮ್ಮದ್ ಮತ್ತು ಇತರರು ವಿಧಾನಸೌಧದ ಉತ್ತರದ ಕಡೆ ಇರುವ ಲಿಫ್ಟ್ ಬಳಿ ಡಾ.ಕೆ.ಸುಧಾಕರ್ ಅವರನ್ನು ತಡೆಯಲು ಯತ್ನಿಸಿ ಬಲವಂತದಿಂದ ಎಳೆದಾಡಿ ಹಲ್ಲೆ ಸಹ ಮಾಡಿದ್ದಾರೆ ಎಂದು ದೂರಲಾಗಿತ್ತು.


ಈ ಪ್ರಕರಣದ ವಿರುದ್ದ ಸೂಕ್ತ ಕ್ರಮ ಜರುಗಿಸ ಬೇಕೆಂದು ವಕೀಲ ಎನ್.ಪಿ. ಅಮೃತೇಶ್ ಎಂಬುವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಮೇರೆಗೆ ಡಾ. ಕೆ. ಸುಧಾಕರ್ ಅವರನ್ನು ವಿಚಾರಣೆ ಮಾಡಿ ಹೇಳಿಕೆ ಪಡೆದಿದ್ದ ಪೊಲೀಸರು ೨೦೧೯ರ ಅ.೮ ರಂದು ನಸ್ಸೀರ್ ಆಹಮ್ಮದ್ ವಿರುದ್ದ ಐ.ಸಿ.ಸಿ. ಸೆಕ್ಷನ್ ೩೨೩ ಮತ್ತು ೩೪೧ರ ಅಡಿ ಎಫ್.ಐ.ಆರ್. ದಾಖಲಿಸಿದ್ದರು ಬಳಿಕ ತನಿಖೆ ನಡೆಸಿ ನ್ಯಾಯಾಲಯಕ್ಕೆದ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.