
ಕಲಬುರಗಿ,ನ.೧೫-ಚಲನಚಿತ್ರಗಳು ಮನೋರಂಜನೆ ಜೊತೆಗೆ ಸಮಾಜದ ಜನತೆಯ ಮನೋಧರ್ಮ ಸಹ ಪರಿಣಾಮಕಾರಿಯಾಗಿ ಬದಲಾಯಿಸಬಲ್ಲವು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ.ಸಿದ್ಧರಾಮ ಹೊನ್ಕಲ್ ಇಂದು ಒಳ್ಳೆಯ ಚಲನಚಿತ್ರಗಳ ಕುರಿತು ಕರೆ ನೀಡಿದರು.
ಅವರು ನಾಡಿನ ಸಾಕ್ಷಿ ಪ್ರಜ್ಞೆಯ ಲೇಖಕ ನಾಡೋಜ ಬರಗೂರು ರಾಮಚಂದ್ರಪ್ಪ ಅವರ “ಸ್ವಪ್ನಮಂಟಪ” ಚಲನಚಿತ್ರದ ಸಮುದಾಯದತ್ತ ಸಿನೆಮಾ…ದ ಪ್ರದರ್ಶನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುರಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪದವಿ ವಿದ್ಯಾರ್ಥಿಗಳ ಉದ್ದೇಶಿಸಿ ಮಾತನಾಡಿದರು.ಯಾದಗಿರಿ ಜಿಲ್ಲೆಯ ಎಲ್ಲಾ ಆರು ತಾಲೂಕುಗಳಲ್ಲಿ ಈ ಚಲನಚಿತ್ರದ ಪ್ರದರ್ಶನ ಏರ್ಪಡಿಸಿರುವುದರ ಹಿನ್ನೆಲೆಯಲ್ಲಿ ಅವರು ಮಾತನಾಡುತ್ತಾ ಹೇಳಿದರು. ಈ ಚಲನಚಿತ್ರ ಚಾರಿತ್ರಿಕ ಘಟನೆಯನ್ನು ವಾಸ್ತವದ ಹಿನ್ನೆಲೆಯಲ್ಲಿ ಸಮೀಕರಿಸಿ ಸುಂದರವಾಗಿ ಹಾಗೂ ಮನೋಜ್ಞವಾಗಿ ನಿರ್ಮಿಸಿದ್ದಾರೆ.ಪ್ರೀತಿ ಪ್ರೇಮದ ಸೌಹಾರ್ದತೆಯ ಮನಸು ಒಡೆಯುವ ದುಷ್ಟ ಶಕ್ತಿಗಳನ್ನು ಜನ ಸಂಘಟನೆಯ ಮೂಲಕ ಹಿಮ್ಮೆಟ್ಟಿಸುವ ನೈತಿಕ ಶಕ್ತಿ ಇಂತಹ ಚಲನಚಿತ್ರಗಳನ್ನು ಜನತೆ ಹೆಚ್ಚು ಹೆಚ್ಚು ನೋಡಬೇಕು.
ಕಾಮ ಮತ್ತು ಹಿಂಸೆ ಪ್ರದಾನ ಸಿನೆಮಾಗಳನ್ನು ತಿರಸ್ಕರಿಸಬೇಕು. ಈ ಚಿತ್ರದಲ್ಲಿ ನಾಡು ನುಡಿ ಪ್ರೇಮದ ಜೊತೆಗೆ ಸಾಮಾಜಿಕ ಕಾಳಜಿ ಸಹ ಡಾ.ಬರಗೂರರು ಅದ್ಭುತವಾಗಿ ನೀಡಿದ್ದಾರೆ.ಇದು ಅವರ ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ಹೊಂದಿರುವುದರಿAದ ನೋಡುಗರಿಗೆ ಹೊಸ ಸಂವೇದನೆ ನೀಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಬಲ ಭೀಮರಾಯ ದೇಸಾಯಿ ವಹಿಸಿದ್ದರು.ಇಂತಹ ಜನಮುಖಿ ಸಿನೆಮಾ ನಮ್ಮ ವಿದ್ಯಾರ್ಥಿಗಳಿಗೆ ತೋರಿಸುವ ವ್ಯವಸ್ಥೆ ಮಾಡಿದ ನಾಡೋಜ ಬರಗೂರರಿಗೆ ಹಾಗೂ ಲೇಖಕ ಸಿದ್ಧರಾಮ ಹೊನ್ಕಲ್ ಅವರಿಗೆ ಅಭಿನಂದನೆಗಳು ಹೇಳಿದರು.
ವೇದಿಕೆಯಲ್ಲಿ ಡಾ.ಗುರುರಾಜ ನಾಗಲಿಕರ್,ಡಾ.ಎಂ.ಎA.ವಗ್ಗರ, ದೇವಿಂದ್ರಪ್ಪ ಪಾಟೀಲ್,ದೇವು ಹೆಬ್ಬಾಳ,ಮುಂತಾದ ಉಪನ್ಯಾಸಕರು ಭಾಗವಹಿಸಿದ್ದರು.ಕಾರ್ಯಕ್ರಮವನ್ನು ಡಾ.ಜಗದೀಶಕುಮಾರ ನಾಯಕ ನಿರ್ವಹಿಸಿ ಚಲನಚಿತ್ರ ಪ್ರದರ್ಶನ ಏರ್ಪಡಿಸಿದ್ದರು. ಇದೇ ಸಂದರ್ಭದಲ್ಲಿ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಜನುಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನುಡಿನಮನ ಸಲ್ಲಿಸಲಾಯಿತು. ನೂರಾರು ವಿದ್ಯಾರ್ಥಿಗಳು ವೀಕ್ಷಿಸಿ ಸಮುದಾಯದತ್ತ ಸಿನೆಮಾ… ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

























