
ಕೆ.ಆರ್.ಪುರ,ಜೂ.೧೧-ಲಯನ್ಸ್ ಕ್ಲಬ್ ಆಫ್ ಬೆಂಗಳೂರಿನ ಮದರ್ ತೆರೇಸಾ ನೂತನ ಘಟಕವನ್ನು ಕ್ಷೇತ್ರದ ಶಿಗೇಹಳ್ಳಿಯಲ್ಲಿ ಉದ್ಘಾಟನೆ ಮಾಡಲಾಯಿತು.
ನೂತನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಲಯನ್ಸ್ ಎನ್.ಎಸ್.ಸಿ.ಬೋಸ್ ಕ್ಲಬ್ ಅಧ್ಯಕ್ಷ ಅರಳಪ್ಪ ಅವರು ಮದರ್ ತೆರೇಸಾ ಘಟಕದ ಮೂಲಕ ಮಹಿಳೆಯರು ಸಮಾಜಕ್ಕೆ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದ್ದು,ಮಹಾನ್ ತ್ಯಾಗಮಹಿ ಮದರ್ ತೆರೇಸಾ ಅವರ ಆದರ್ಶಗಳ ಆಧಾರದಲ್ಲಿ ಘಟಕ ಮುಂದುವರೆಯಲಿದೆ ಎಂದು ಹೇಳಿದರು.
ಮಹಿಳೆಯರು ಸ್ವಯಂ ಪ್ರೇರಣೆಯಿಂದ ಲಯನ್ಸ್ ಕ್ಲಬ್ ನ ಸೇವಾಕಾರ್ಯಗಳಲ್ಲಿ ತೊಡಗಿಕೊಂಡಿದ್ದು,ಸಮಾಜದಲ್ಲಿ ಬದಲಾವಣೆ ಚಲಹೊಂದಿದ್ದಾರೆ ಎಂದು ನುಡಿದರು. ಪರಿಸರ ಕಾಳಜಿಯನ್ನು ಪ್ರಸರಿಸಲು ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಡಲಾಯಿತು.
ಸುತ್ತಮುತ್ತಲಿನ ಸಮಾಜಸೇವಕರನ್ನು ಗುರುತಿಸಿ, ವಿವಿಧ ಕ್ಷೇತ್ರಗಳಲ್ಲಿ ಸಮಾಜಸೇವೆ ಸಲ್ಲಿಸುತ್ತಿರುವ ಸಮಾಜಸೇವೆಯನ್ನು ಮುಂದುವರೆಸಲು ಪ್ರೇರೇಪಿಸಲಾಯಿತು.
ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಅನನ್ಯವಾಗಿದ್ದು,ಮಹಿಳೆಯರ ಏಳಿಗೆಗೆ ಶ್ರಮಿಸುತ್ತಿರುವ ಇಂತಹ ಸಂಘಟನೆಗಳ ಕಾರ್ಯ ಅರ್ಥಪೂರ್ಣ ಎಂದು ನುಡಿದರು. ಮಹಿಳೆಯರ ಸಬಲೀಕರಣದ ಉದ್ದೇಶದಿಂದ ಟೈಲರಿಂಗ್ ತರಬೇತಿ ನೀಡಲಾಗುತ್ತಿದ್ದು, ತರಬೇತಿ ಪಡೆದ ಹತ್ತು ಮಹಿಳೆಯರಿಗೆ ಟೈಲರಿಂಗ್ ಮಿಷನ್ ವಿತರಣೆ ಮಾಡಲಾಯಿತು,ಮಹಿಳಾ ಸಬಲೀಕರಣ ಸೇರಿದಂತೆ ಸಮಾಜದ ಬೆಳವಣಿಗೆಗೆ ನಮ್ಮ ಕಾರ್ಯ ಮುಂದುವರೆಯಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಜಿಲ್ಲಾ ರಾಜ್ಯಪಾಲರಾದ ಸಿ. ಎಂ. ನಾರಾಯಣಸ್ವಾಮಿ,ಮಾಜಿ ಲಯನ್ಸ್ ಕ್ಲಬ್ ಜಿಲ್ಲಾ ರಾಜ್ಯಪಾಲರಾದ ಲಯನ್ ಎಚ್.ಕೆ.ಗಿರೀಧರ್,ಲಯನ್ ಮೋಹನ್,ಲಯನ್ ರಾಜಶೇಖರಯ್ಯ, ಮದರ್ ತೆರೇಸಾ ಘಟಕ ದ ಅಧ್ಯಕ್ಷೆ ಲಯನ್ ಎಂ.ಪವಿತ್ರ, ಲಯನ್ಸ್ ಎನ್.ಎಸ್.ಸಿ.ಬೋಸ್ ಕ್ಲಬ್ ಘಟಕದ ಕಾರ್ಯದರ್ಶಿ ಲಾರೆನ್ಸ್, ಸಗಯ್ ರಾಜ್ ಹಾಗೂ ಸುರೇಶ್ ರುದ್ರಪ್ಪ ಉಪಸ್ಥಿತರಿದ್ದರು.