ಕಲಬುರಗಿ,ಸೆ.9: ನಗರದ ಸೇಂಟ್ ಮೇರಿ ಚರ್ಚ್ ರಸ್ತೆ ದೈವಾನುಗ್ರಹ ಮಾತೆ ಮಹಾದೇವಾಲಯದಲ್ಲಿ ಮಾತೆ ಮರಿಯಮ್ಮನವರ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಜನ್ಮದಿನದಪ್ರಯುಕ್ತ ಮಹಾಪ್ರಸಾದ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು.ಮಹಾದಾಸೋಹವನ್ನು ಪೂಜ್ಯ ವಂದನಿಯ ಸ್ವಾಮಿ ಧರ್ಮಾಧ್ಯಕ್ಷರು ಡಾ. ರಾಬರ್ಟ್ ಮೈಕಲ್ ಮಿರಾಂದ ಧರ್ಮಕ್ಷೇತ್ರ ಗುಲ್ಬರ್ಗ,ಶ್ರೇಷ್ಠ ಗುರುಗಳಾದ ವಂ. ಸ್ವಾಮಿ ಸಂತೋಷ್ ಬಾಪು, ವಂ. ಸ್ವಾಮಿ, ಜೋಸಫ್ ಪಣ್, ಸಹಾಯಕ ಗುರುಗಳಾದ ವಂ. ಸ್ವಾಮಿ.ಆರನ್ ವ್ಯಾಸ್ ಇವರೆಲ್ಲರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.ಹಲವಾರು ಭಕ್ತರು ಉಪಸ್ಥಿತರಿದ್ದರು ಎಂದು ದೈವಾನುಗ್ರಹ ಮಾತೆ ಮಹಾದೇವಾಲಯ ವಿಚಾರಣೆಯ ಗುರುಗಳಾದ ವಂ ಸ್ವಾಮಿ ಜೋಸೆಫ್ ಪ್ರವೀಣ್ ಅವರು ತಿಳಿಸಿದ್ದಾರೆ.
























