
ತಾಳಿಕೋಟೆ:ಮೇ.೨೯: ವಿದ್ಯಾರ್ಥಿ ಸ್ಥಾನಮಾನ ಹೊಂದಿದವರು ತಂದೆ ತಾಯಿಯವರನ್ನು ದೇವರೆಂದು ಕಾಣಿರಿ ಅದರಂತೆ ಕಲಿಸಿದ ಗುರುವನ್ನು ಹಾಗೂ ಗುರುವಿನ ಸ್ಥಾನಮಾನವನ್ನು ಅಲಂಕರಿಸಿದAತಹ ಮಹಾ ಯೋಗಿ ಅವರ ಹಿತನುಡಿಗಳನ್ನು ಆಲಿಸಿ ಪಾಲಿಸಿದರೆ ಮುಂದೊAದು ದಿನ ವಿದ್ಯಾರ್ಥಿಯಾದವರು ಉನ್ನತ ಸ್ಥಾನಮಾನ ಪಡೆದು ತಮ್ಮ ಜೀವನದಲ್ಲಿ ಬೇಕಾದುದ್ದನ್ನು ಸಾದಿಸಬಹುದಾಗಿದೆ ಎಂದು ಬಳಗಾನೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾದ ಶ್ರೀಮತಿ ಮಡಿವಾಳಮ್ಮ ನಾಡಗೌಡ ಅವರು ನುಡಿದರು.
ಇತ್ತೀಚಗೆ ಪಟ್ಟಣದಲ್ಲಿ ಸ್ಪೂರ್ತಿ ಕೋಚಿಂಗ್ ಕ್ಲಾಸಿಸ್ ಬೇಸಿಗೆ ತರಬೇತಿ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಏರ್ಪಡಿಸಲಾದ ಅಮ್ಮನಿಗೊಂದು ನಮನ ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನ ಅಲಂಕರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು ಶಿಕ್ಷಣವೆಂದರೆ ಜ್ಞಾನ ಕೌಶ್ಯಲ್ಯ ಮತ್ತು ಒಂದು ಗುಂಪಿನ ಪದ್ದತಿಯಲ್ಲಿ ಭೋದನೆ ಮಾಡುವದಾಗಿದ್ದು ಇದಕ್ಕೆ ತರಬೇತಿ ಶಿಕ್ಷಣವೆನ್ನಲಾಗುತ್ತಿದೆ ಎಂದರು. ಶಿಕ್ಷಣವು ಸಾಮಾನ್ಯವಾಗಿ ಪ್ರಾಥಮಿಕ, ಮಾಧ್ಯಮಿಕ ಹಂತ ನಂತರ ಕಾಲೇಜು ವಿಶ್ವ ವಿದ್ಯಾಲಯಗಳಲ್ಲಿ ಶಿಷ್ಯ ವೃತ್ತಿ ಎಂದು ವಿಂಗಡಿಸಲಾಗುತ್ತಿರುವದರಲ್ಲಿ ಪಡೆಯುತ್ತಿರುವ ಶಿಕ್ಷಣ ಒಳ್ಳೆಯ ಮಾರ್ಗದತ್ತ ಕೊಂಡೊಯುತ್ತದೆ ಅಂತಹ ಒಳ್ಳೆಯ ಮಾರ್ಗದತ್ತ ವಿದ್ಯಾರ್ಥಿಗಳನ್ನು ಕೊಂಡೊಯುವ ಕಾರ್ಯ ತಾಳಿಕೋಟೆಯ ಸ್ಪೂರ್ತಿ ಶಿಕ್ಷಣ ಕ್ಲಾಸಿಸ್‌ನಲ್ಲಿ ನಡೆಯುತ್ತಿರುವದರಿಂದ ವಿದ್ಯಾರ್ಥಿಗಳಿಗೆ ಒಳ್ಳೆಯ ಮಾರ್ಗದರ್ಶನಕ್ಕೆ ಅನುಕೂಲವಾಗಿದೆ ಪ್ರತಿವರ್ಷ ಈ ಸಂಸ್ಥೆಯಡಿಯಲ್ಲಿ ಶಿಕ್ಷಣ ಪಡೆದು ಹೆಚ್ಚಿನ ಅಂಕ ಗಳಿಸುವದರೊಂದಿಗೆ ವಿದ್ಯಾರ್ಥಿಗಳು ಸನ್ಮಾನಿಸಿ ಗೌರವಿಸಿಕೊಳ್ಳುತ್ತಿರುವದು ಸಂತಸದ ಸಂಗತಿಯಾಗಿದೆ ಎಂದರು.
ಇನ್ನೋರ್ವ ಅತಿಥಿ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ ಅವರು ಮಾತನಾಡಿ ಇಂದಿನ ಕಾರ್ಯಕ್ರಮ ನೊಡಿದರೆ ವಿದ್ಯಾಬುದ್ದಿಯನ್ನು ನೀಡುವಂತಹದ್ದಾಗಿದೆ ಹಾಗೂ ಒಳ್ಳೆಯ ಸಂಸ್ಕಾರವನ್ನೂ ಸಹ ನೀಡಲಾಗುತ್ತಿದೆ ಎಂಬುದು ಅನಿಸದೇ ಇರಲಾರದು ವಿದ್ಯಾರ್ಥಿಗಳು ಶಿಕ್ಷಣ ಪಡೆದು ಹೆಚ್ಚಿನ ಅಂಕ ಪಡೆದು ಪ್ರತಿವರ್ಷ ಈ ಸಂಸ್ಥೆಯಲ್ಲಿ ಸನ್ಮಾನಿಸಿಕೊಳ್ಳುತ್ತಾ ಸಾಗಿರುವದು ಹರ್ಷದಾಯಕ ಸಂಗತಿಯಾಗಿದೆ ಈ ಸಂಸ್ಥೆಯ ಸಂಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಕುಮಾರಿ ಶ್ವೇತಾ ಯರಗಲ್ಲ ಅವರ ಕಾರ್ಯ ಮಹತ್ವದ್ದಾಗಿದೆ ಎಂಬುದು ಎದ್ದು ಕಾಣುತ್ತಲಿದೆ ಶಿಕ್ಷಣ ಕ್ಷೇತ್ರದಲ್ಲಿ ಏಷ್ಟು ಕಲಿತರೂ ಕಡಿಮೆ ಶ್ರದ್ದೆ, ಪರಿಶ್ರಮ ಎಂಬುದು ವಿದ್ಯಾರ್ಥಿಗಳಲ್ಲಿ ಬರಬೇಕು ಅಂದರೆ ವಿದ್ಯೆದ ಒಲುಮೆಯಾಗಲಿದೆ ಎಂದರು.
ದಿವ್ಯ ಸಾನಿದ್ಯ ವಹಿಸಿ ದೀಪ ಬೆಳಗಿಸುವದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಆಶಿರ್ವಚನ ವಿಯುತ್ತಾ ವಿದ್ಯಾರ್ಥಿ ಸ್ಥಾನ ಮಾನ ಹೊಂದಿದವರು ಮಾತಾಪಿತರ ಹೆಸರು ತರುವಂತಹ ಕಾರ್ಯ ಮಾಡಬೇಕು ಅವರು ಯಾವ ರೀತಿ ವಿದ್ಯಾಭ್ಯಾಸಕ್ಕಾಗಿ ತಮ್ಮ ದುಡಿಮೆಯಿಂದ ಹಣ ನೀಡಿ ಮಕ್ಕಳಿಗಾಗಿ ಶ್ರಮಿಸುತ್ತಾರೆಂಬುದನ್ನು ವಿದ್ಯಾರ್ಥಿಯಾದವನು ಅರ್ಥೈಸಿಕೊಳ್ಳಬೇಕೆಂದು ಹೇಳಿದ ಶ್ರೀಗಳು ಪ್ರತಿವರ್ಷ ತಾಳಿಕೋಟೆಯಲ್ಲಿ ಜರುಗಲಿರುವ ಶ್ರೀ ಖಾಸ್ಗತೇಶ್ವರ ಜಾತ್ರೋತ್ಸವಕ್ಕೆ ಎಲ್ಲರೂ ಬನ್ನಿ ನಮಗೆ ಏನು ಕೊಡುವದು ಬೇಡಾ ನೀವು ಕಲಿಯುತ್ತಿರುವ ಶಿಕ್ಷಣದಲ್ಲಿ ಹೆಚ್ಚಿನ ಅಂಕ ಬಂದಿದೆ ಅಂದರೆ ಸಾಕು ಎಂದು ಹೇಳಿದ ಶ್ರೀಗಳು ವಿದ್ಯಾರ್ಥಿಗಳು ನಿಮ್ಮ ಕಾಲು ಮೇಲೆ ನೀವು ನಿಲ್ಲುವಂತಾಗಿರಿ ಸಾಧನೆ ಎಂಬುದು ಬಹು ಮುಖ್ಯ ಒಳ್ಳೆಯ ಸಾಧನೆ ಮಾಡಿ ನಿಮ್ಮ ಏಳಿಗೆಯನ್ನು ಮಾಡಿಕೊಳ್ಳಿರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಂಚಾಲಕಿ ಕು.ಶ್ವೇತಾ ಯರಗಲ್ಲ ಅವರು ಪ್ರಾಸ್ಥಾವಿಕ ಮಾತನಾಡಿದರು.
ಇನ್ನೋರ್ವ ಪುರಸಭಾ ಸದಸ್ಯರಾದ ಜೈಸಿಂಗ್ ಮೂಲಿಮನಿ ಅವರು ವಿದ್ಯಾರ್ಥಿಯಾದವನು ಯಾವ ರೀತಿ ಸಾಧನೆ ಮಾಡಿದರೆ ವಿದ್ಯೆ ಎಂಬುದು ಒಲಿಯುತ್ತದೆ ಎಂಬುದರ ಕುರಿತು ಇತ್ತೀಚಗೆ ತಮ್ಮ ಪುತ್ರ ಎಸ್.ಎಸ್.ಎಲ್.ಸಿ. ಪರಿಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ೫ನೇ ರ‍್ಯಾಂಕ್ ಪಡೆದುಕೊಂಡಿರುವ ಕುರಿತು ವಿವರಿಸಿದರು.
ಇದೇ ಸಮಯದಲ್ಲಿ ಎಸ್‌ಎಸ್‌ಎಲ್‌ಸಿ ಪರಿಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಗಗನಸಿಂಗ್ ಮೂಲಿಮನಿ, ಕವಿತಾ ಚೌದ್ರಿ, ಸುವರ್ಣಾ ಮುದ್ನೂರ, ವಿಜಯಲಕ್ಷಿö್ಮÃ ಕಡಕಲ್ಲ, ಸನ್ಮಾನಿಸಿ ಗೌರವಿಸಲಾಯಿತು.
ಸಂಸ್ಥೆಯ ಸಂಚಾಲಕರಾದ ಸಿದ್ದಾರೂಡ ಮದರಿ ಅವರು ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಮಾತೆಯರ ಉಡಿ ತುಂಬುವ ಕಾರ್ಯಕ್ರಮ ನೆರವೇರಿಸಲಾಯಿತಲ್ಲದೇ ವಿದ್ಯಾರ್ಥಿಗಳು ಗುರುಗಳ ಹಾಗೂ ಮಾತಾಪಿತರ ಪಾದಪೂಜೆಗೈಯುವದರೊಂದಿಗೆ ಆಶಿರ್ವಾದ ಪಡೆದರು.
ಈ ಸಮಯದಲ್ಲಿ ಶ್ರೀಮತಿ ಶಾಂತಾ ಮದರಿ, ಸಿರಿನ್ ಚೌದ್ರಿ, ಮಹಾಂತೇಶ ಬಸರಕೊಡ, ಪೃಥ್ವಿ ಹೆಗಡೆ, ಶಿಕ್ಷಕ ವಿನೋದ ಚಿಕ್ಕಮಠ, ಒಳಗೊಂಡು ಸುಮಾರು ೧೫೦ಕ್ಕೂ ಮೇಲ್ಪಟ್ಟು ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವಿದ್ಯಾ ಕವಿತಾಳ ನಿರೂಪಿಸಿ ವಂದಿಸಿದರು.