ಅಫಜಲಪುರ ; ಸೆ.17:ನೆರೆಯ ರಾಜ್ಯ ಮಹಾರಾಷ್ಟ್ರ
ಉಜನಿ ಹಾಗೂ ಸೀನಾ ಜಲಾಶಯ ತುಂಬಿ ಹರಿಯುತ್ತಿರುವುದರಿಂದ ಭೀಮಾನದಿಗೆ ಸುಮಾರು 1.50 ಲಕ್ಷ ಕ್ಯೂಸೆಕ್ ನೀರನ್ನು ಸೊನ್ನ್ ಡ್ಯಾಮಿನಿಂದ ಹರಿಬಿಡಲಾಗಿದೆ ಎಂದು ಕೆಎನ್ ಎಲ್ ಕಾರ್ಯಪಾಲಕ ಅಭಿಯಂತರಾದ ಸಂತೋಷ ಕುಮಾರ್ ಸಜ್ಜನ ಮಾಹಿತಿ ನೀಡಿದರು.
ಅಮರ್ಜಾ ಕೂಡಾ ತುಂಬಿ ಹರಿಯುತ್ತಿದ್ದು, ನೀರಿನ ಹರಿವು ಹೆಚ್ಚಾಗಿರುವ ಕಾರಣದಿಂದ ನದಿ ತೀರದ ರೈತರು ಹಾಗೂ ಸಾರ್ವಜನಿಕರು ಜಾಗೃತಿಯಿಂದ ಇರಲು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದರು.























