
ಗದಗ:ಫೆ.15: ಎಐ ಒಂದು ವಿಶಾಲವಾದ ವಿಷಯವಾಗಿದ್ದು, ಕೇವಲ ತಂತ್ರಜ್ಞಾನದ ವಿಷಯವಲ್ಲ “ಎಲ್ಲಾ ವಿದ್ಯಾರ್ಥಿಗಳಿಗೆ ಎಐ ಅಗತ್ಯವಿದೆ ಎಂದು ವಿಟಿಯು ಕುಲಪತಿ ಡಾ. ಎಸ್ ವಿದ್ಯಾಶಂಕರ್ ಹೇಳಿದರು. ಅವರು ಗದಗ ನಗರದ
ಪ್ರತಿಷ್ಠಿತ ಶ್ರೀ ತೋಂಟದ ಸಿದ್ದಲಿಂಗೇಶ್ವರ ಕಲ್ಯಾಣ ಕೇಂದ್ರದ ತೋಂಟದಾರ್ಯ ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ನೂತನ ಕಟ್ಟಡದ ಭೂಮಿ ಪೂಜೆ ಹಾಗೂ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು (ಂIಅಖಿಇ) ಐಡಿಯಾ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದ ಅವರು
ನಮ್ಮ ದೇಶದಲ್ಲಿ ಅಭಿವೃದ್ಧಿಪಡಿಸಲಾದ ಕೃತಕ ಬುದ್ಧಿಮತ್ತೆ (ಂI) ಎಲ್ಲರನ್ನೂ ಒಳಗೊಳ್ಳುವಂತಹದ್ದಾಗಿರುತ್ತದೆ. ವ್ಯವಸ್ಥೆಗಳೊಂದಿಗೆ ಸುಲಭವಾಗಿ ಪರಸ್ಪರ ಕಾರ್ಯನಿರ್ವಹಿಸಬಲ್ಲದು ಮತ್ತು ಅದರ ಸಾಮಥ್ರ್ಯಗಳಲ್ಲಿ ಬಲವಾಗಿರುತ್ತದೆ. ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ನಾವೀನ್ಯತೆ, ವ್ಯಾಪಕ ಅಳವಡಿಕೆ ಮತ್ತು ರಾಷ್ಟ್ರೀಯ ಸಾಮಥ್ರ್ಯ ನಿರ್ಮಾಣವನ್ನು ಉತ್ತೇಜಿಸಲು ಎಐ ಅನ್ನು ಹೇಗೆ ಬಳಸಬಹುದು ಎಂದು ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು.
ನ್ಯಾಷನಲ್ ಬೋರ್ಡ್ ಆಫ್ ಅಕ್ರಿಡಿಟೇಶನ್. ಹಾಗೂ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ. ನಂತಹ ಮಾನ್ಯತಾ ಸಂಸ್ಥೆಗಳು ಬೋಧನೆ, ಸಂಶೋಧನೆ ಮತ್ತು ಮೂಲಸೌಕರ್ಯಗಳಷ್ಟೇ ಅಲ್ಲದೆ, ವಿದ್ಯಾರ್ಥಿಗಳಿಗೆ ದೊರೆಯುವ ಉದ್ಯೋಗಾವಕಾಶಗಳನ್ನೂ ಮೌಲ್ಯಮಾಪನದ ಪ್ರಮುಖ ಅಂಶವಾಗಿ ಪರಿಗಣಿಸಬೇಕು.
ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ಉತ್ತಮ ಕಟ್ಟಡಗಳಿಗಿಂತ ಗುಣಮಟ್ಟದ ಮಾನವ ಸಂಪನ್ಮೂಲವೇ ಮುಖ್ಯ, ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ದೂರವಿದ್ದು ಸಮಯಕ್ಕೆ ಮೌಲ್ಯ ನೀಡುತ್ತಾ ಏಕಾಗ್ರತೆಯಿಂದ ಅಭ್ಯಾಸ ಮಾಡಬೇಕು. ಬಾಹ್ಯಾಕಾಶ ಮತ್ತು ಜೀವಶಾಸ್ತ್ರ ತಂತ್ರಜ್ಞಾನಗಳಂತಹ ಭವಿಷ್ಯದ ಕ್ಷೇತ್ರಗಳಿಗೆ ವಿದ್ಯಾರ್ಥಿಗಳು ಸಜ್ಜಾಗಬೇಕು.ಇಂದಿನ ಯುವಪೀಳಿಗೆ ತಂತ್ರಜ್ಞಾನದಲ್ಲಿ ಬಹಳಷ್ಟು ಮುಂದುವರಿದಿದೆ. ತಾಂತ್ರಿಕ ಕ್ಷೇತ್ರದ ಬೆಳವಣಿಗೆಗೂ ಅಪಾರ ಕೊಡುಗೆ ನೀಡುತ್ತಿದ್ದಾರೆ. ನ್ಯಾನೋ ಟೆಕ್ನಾಲಜಿ, ಬಯೋ ಟೆಕ್ನಾಲಜಿ ಮತ್ತು ಕೃತಕಬುದ್ಧಿಮತ್ತೆಯಲ್ಲಿ ಹೆಚ್ಚಿನ ಆಸಕ್ತಿ ತೋರಬೇಕು. ವಿವಿಧ ತಂತ್ರಜ್ಞಾನ ಕಲಿಕೆಯಿಂದ ಉದ್ಯೋ ಗಾವಕಾಶ ವಿಪುಲವಾಗಿವೆ ಎಂದು ಹೇಳಿದರು.
ಖ್ಯಾತ ಶಿಕ್ಷಣ ತಜ್ಞರು ಹಾಗೂ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿಗಳಾದ ಪೆÇ್ರ. ಎಸ್.ಎಸ್. ಪಟ್ಟಣಶೆಟ್ಟರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಸಂಸ್ಥಾಪಕರಾದ ಲಿಂಗೈಕ್ಯ ಜಗದ್ಗುರು ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಆಶಯದಂತೆ ಶೀಘ್ರದಲ್ಲೇ ಬಡ ವಿದ್ಯಾರ್ಥಿಗಳಿಗಾಗಿ ಉಚಿತ ವಸತಿ ನಿಲಯ ಪ್ರಾರಂಭಿಸಲಾಗುವುದು’ ಎಂದು ತಿಳಿಸಿದರು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಹೇಶ ಎಂ. ಆವಟೆ ಅವರು ಸುಮಾರು ರೂ. 60 ಲಕ್ಷ ವೆಚ್ಚದಲ್ಲಿ ಎಐಸಿಟಿಇ ಸಹಯೋಗದೊಂದಿಗೆ ನಿರ್ಮಿಸಲಾದ ಐಡಿಯಾ ಪ್ರಯೋಗಾಲಯ ಹಾಗೂ ನೂತನ ಕಟ್ಟಡದ ವಿವರಗಳನ್ನು ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಶಿರೋಳ ತೋಂಟದಾರ್ಯ ಮಠದ ಪೂಜ್ಯ ಶ್ರೀ ಶಾಂತಲಿಂಗ ಮಹಾಸ್ವಾಮೀಜಿ ಅವರು ಆಶೀರ್ವಚನ ನೀಡಿ, ಗ್ರಾಮೀಣ ಹಾಗೂ ಬಡ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶಗಳು ಇನ್ನಷ್ಟು ವಿಸ್ತಾರವಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ
ಮಾಜಿ ಸಚಿವರು ಹಾಗೂ ಹಿರಿಯ ರಾಜಕಾರಣಿ ಶರಣ ಶ್ರೀ ಎಸ್.ಎಸ್. ಪಾಟೀಲ, ಸಂಸ್ಥೆಯ ಮಾಜಿ ನಿರ್ದೇಶಕರಾದ ಶ್ರೀ ಎಸ್.ಟಿ. ಪಾಟೀಲ, ಆಡಳಿತ ಮಂಡಳಿ ಸದಸ್ಯರಾದ ಡಾ. ರಾಜಶೇಖರ ಪವಾಡಶೆಟ್ಟರ, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲರಾದ ಡಾ. ಜಿ. ಬಿ. ರೇವಣಕರ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಡಾ. ಜಯಶ್ರೀ ರಡ್ಕಲ್ ಅವರು ನೆರವೇರಿಸಿದರು.
























