
ಕಲಬುರ್ಗಿ: ನಗರದ ಹೊರವಲಯದ ನಂದಿಕೂರು ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳ ಕಾಲ ನಿರಂತರವಾಗಿ ಪ್ರತಿನಿತ್ಯ ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ವ್ಯವಸ್ಥಾಪಕರಾದ ಪ್ರಭಾವತಿ ಮಹಿಳಾ ಸ್ವಸಹಾಯ ಸಂಘ ತೆಲಕರ್ ನಗರ ನಂದಿಕೂರ್ ಇವರಿಗೆ ಶ್ರೀ ಶಿವಲಿಂಗ ಶರಣರು ನಂದಿಕೂರ್ ಅವರ ವತಿಯಿಂದ ಡೋಲಕ ಸೇರಿದಂತೆ ಬಜನೆಗೆ ಅಗತ್ಯವಿರುವ ವಿವಿಧ ಸಾಮಗ್ರಿಗಳನ್ನು ನೀಡಲಾಯಿತು ಅಲ್ಲದೆ ಜಿಲ್ಲಾ ಪಂಚಾಯತ್ ಕಲಬುರ್ಗಿ ಪ್ರಧಾನ ಕಾರ್ಯದರ್ಶಿ, ಶ್ರೀ ಲಕ್ಷ್ಮಣ ಶೃಂಗೇರಿಯವರು ಜಮಖಾನೆಗಳನ್ನು ಒದಗಿಸಿದ್ದರು . ಉದ್ಯಮಿದಾರರು ಶ್ರೀ ನಾರಾಯಣ ಸರ್ವ ಶೆಟ್ಟಿ ಅವರು ಸಹ ವಿವಿಧ ಸಾಮಗ್ರಿಗಳನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಸಹಕರಿಸಿದ್ದರು ಈ ಸಂದರ್ಭದಲ್ಲಿ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷ ಅನಿತಾ ಪವನಕುಮಾರ ವಳಕೇರಿ, ಚಂದ್ರಕಲಾ ಎಚ್ ಪ್ರಭುಗೋಳ, ರೋಷನ್ ಬಿ ಉತ್ತನಾಳ್, ಅಂಬಿಕಾ ಎಸ್ ಮಡಿವಾಳ, ಆಶಾ ಬಿ ಮುಚ್ಕೇಡ್, ಸಂಗಮೇಶ್ ಮಡಿವಾಳ,ಬೀರಪ್ಪ ಎಸ್ ಮುಚ್ಚಖೆಡ, ಪವನಕುಮಾರ ಬಿ ವಳಕೇರಿ ಹಾಗೂ ಹೂವಣ್ಣ ಪ್ರಭುಗೋಳ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶ್ರಾವಣ ಮಾಸ ಸಂದರ್ಭದಲ್ಲಿ ಪ್ರತಿದಿನ ನಡೆಯುತ್ತಿರುವ ಭಜನೆ ಕಾರ್ಯಕ್ರಮವು ಭಕ್ತಿಭಾವದ ವಾತಾವರಣ ಮೂಡಿಸಿದು ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.





























