ಮುಂಗಾರು ಬೆಳೆ ರೈತರ ಮಿತ್ರ ಇದ್ದಹಾಗೆ :ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು

ಯಾದಗಿರಿ:ಅ.೨೮:ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ತೋಗರಿ, ಹೆಸರು, ಉದ್ದು, ಹತ್ತಿ, ಸೋಯ ಹಾಗೂ ಭತ್ತ ಇವೆಲ್ಲವೂ ಬೆಳೆಗಳು ರೈತರು ತಮ್ಮ ತಮ್ಮ ಹೊಲಗಳಲ್ಲಿ ಮುಂಗಾರು ಬೆಳೆ ಬಿತ್ತುವ ಸಮಯದಲ್ಲಿ ಬಿತ್ತನೆ ಬೀಜ ಮೊದಲುಗೊಂಡು ರಸಗೋಬ್ಬರ ಹಾಗೂ ಔಷಧಿಗಳನ್ನು ಖರಿಧಿಸಲು ತಮ್ಮ ಶಕ್ತಿ ಮೀರಿ ಖರ್ಚುಮಾಡಿಕೊಂಡಿದ್ದಾರೆ. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದಹಾಗಿದೆ ಈ ಸತತವಾಗಿ ಸುರಿಯುತ್ತಿರುವ ಮಳೆಯಿಂದ. ರೈತರಿಗೆ ಮುಂಗಾರು ಬೆಳೆಗಳಾದ ಹೆಸರು ಉದ್ದು ಈ ಬೆಳೆಗಳು ರೈತರಿಗೆ ಮಿತ್ರರು ಇದ್ದಹಾಗೆ ಯಾಕೆಂದರೆ ಸಕಾಲದಲ್ಲಿ ರೈತರಿಗೆ ತಮ್ಮ ಖರ್ಚು ಗಳಿಗೆ ಬೆಳೆ ಬಂದು ರೈತನು ಮಾರಿದಾಗ ರೈತರ ಕೈಯಲ್ಲಿ ಸರಿಯಾದ ಸಮಯದಲ್ಲಿ ಹಣ ಇದ್ದು ತಮ್ಮ ದಿನನಿತ್ಯದ ಖರ್ಚು ಗಳಿಗೆ ಉಪಯೋಗ ಮಾಡಿಕೊಳ್ಳುತಿದ್ದನು ಎಂದು ಶಾಸಕರು ಹೇಳಿದರು. ಬುಧವಾರ ದಂದು ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಅಧಿಕಾರಗಳ ಜೊತೆಯಲ್ಲಿ ಕ್ಷೇತ್ರದಲ್ಲಿ ಬಾರಿ ಸುರಿದ ಮಳೆಗೆ ರೈತರು ಹಾಗೂ ಅಧಿಕಾರಿಗಳ ಜೊತೆಗೂಡಿ ಮಳೆಗೆ ನಷ್ಟ ವಾಗಿರುವ ರೈತರ ಹೊಲಗಳಿಗೆ ಶಾಸಕರು ಕುದ್ದಾಗಿ ಬೆಟ್ಟಿ ನೀಡಿ ಬೆಳೆಗಳನ್ನು ವೀಕ್ಷಿಸಿ ಮಾತನಾಡಿದ ಶಾಸಕರು. ಮುಂಗಾರು ಬೆಳೆಗಳು ಜಾಸ್ತಿ ಮಳೆಬಂದರು ತಡೆದು ಕೊಳ್ಳುವದಿಲ್ಲ ಹಾಗೂ ಕಡಿಮೆ ಮಳೆ ಬಂದರು ಕೂಡ ತಡೆದು ಕೊಳ್ಳುವದಿಲ್ಲ ಆದುದರಿಂದ ಈ ಸಮಯದಲ್ಲಿ ಜಾಸ್ತಿ ಮಳೆಬಂದು ಬೆಳೆ ಸಂಪೂರ್ಣವಾಗಿ ಬೆಳೆಯು ರೈತನ ಕೈಬಿಟ್ಟಿದೆ ಹೀಗಾಗಿ ಸರಕಾರವು ಪೂರ್ತಿ ಭರವಸೆ ಕೊಟ್ಟಿದೆ. ಆದುದರಿಂದ ಅಧಿಕಾರಿಗಳು ಹೊಲಗಳಿಗೆ ತೆರಳಿ ಕೇವಲ ೧೫ ಅಥವಾ ೨೦ ದಿನಗಳಲ್ಲಿ ಹೊಲಗಳ ಸರ್ವೆ ಮಾಡಿಮುಗಿಸಿ ಕೊಡಲು ಅಧಿಕಾರಿಗಳಿಗೆ ಹೆಚ್ಚರಿಕೆ ನೀಡಿದರು. ತಮ್ಮ ತಮ್ಮ ಹೊಲಗಳಿಗೆ ಸರ್ವೆ ಮಾಡಲು ಸಂಭAದ ಪಟ್ಟ ಅಧಿಕಾರಿಗಳು ಬಂದಾಗ ರ?ತರು ಅಧಿಗಾರಿಗಳಿಗೆ ಸಹಕಾರ ನೀಡಬೆಕು ಎಂದು ರೈತರಿಗೆ ಹೇಳಿದರು. ಸರ್ವೆ ಕಾರ್ಯಮುಗಿದ ಮೇಲೆ ಸರಕಾರದಿಂದ ರ?ತರಿಗೆ ಪರಿಹಾರ ಧನ ಸಾಧ್ಯ ವಾದಷ್ಟು ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ ಕೊಡಿಸಲು ಪ್ರಮಾಣಿಕ ಕೆಲಸ ಮಾಡುತ್ತೆನೆ ಎಂದು ಹೇಳಿದರು. ಈ ವೇಳೆ ಸಂಭAದ ಪಟ್ಟ ಅಧಿಕಾರಿಗಳು ಹಾಗೂ ರೈತ ಮುಖಂಡರು ಮತ್ತು ಹೊಲದಲ್ಲಿ ರೈತರು ಇದ್ದರು.