Home ಜಿಲ್ಲೆ ಕಲಬುರಗಿ ಮುಂಗಾರು ಆರಂಭ:ಪರವಾನಿಗೆ ಹೊಂದಿರುವ ಮಾರಾಟಗಾರರಿಂದ ಬೀಜ ಗೊಬ್ಬರ ಮಾತ್ರ ಖರೀದಿಸಿ: ವಿಶಾಲಕುಮಾರ್

ಮುಂಗಾರು ಆರಂಭ:ಪರವಾನಿಗೆ ಹೊಂದಿರುವ ಮಾರಾಟಗಾರರಿಂದ ಬೀಜ ಗೊಬ್ಬರ ಮಾತ್ರ ಖರೀದಿಸಿ: ವಿಶಾಲಕುಮಾರ್

ಸೇಡಂ,ಮೇ,30:ತಾಲೂಕಿನಲ್ಲಿ ಈಗಾಗಲೇ ಮುಂಗಾರು ಆರಂಭವಾಗಿದ್ದು ರೈತ ಬಾಂಧವರು ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ಅಧಿಕೃತ ಪರವಾನಿಗೆ ಹೊಂದಿರುವ ಮಾರಾಟಗಾರರಿಂದ ಮಾತ್ರ ಖರೀದಿಸಬೇಕು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಶಾಲಕುಮಾರ್ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು ರೈತರು ಖರೀದಿಸುವಾಗ ರಶಿದಿ/ಬಿಲ್ ಕಡ್ಡಾಯವಾಗಿ ಪಡೆಯಬೇಕು. ಬೀಜ ರಸಗೊಬ್ಬರ ಚೀಲದ ಮೇಲೆ ನಿಗದಿಪಡಿಸಿದ ದರಗಳಿಗಿಂತ ಹೆಚ್ಚಿನ ದರದಲ್ಲಿ ಖರಿದಿಸಬಾರದು ಯಾವುದೇ ಮಾರಾಟ ಮಳಿಗೆಗಳಲ್ಲಿ ನಿಗದಿಪಡಿಸಿದ ದರಗಳಿಗಿಂತ ಹೆಚ್ಚಿನ ದರಕ್ಕೆ ಮಾರಾಟಮಾಡಿದಲ್ಲಿ ಅಂತಹವರ ವಿರುದ್ಧ ಕಠಿಣ
ಕಾನೂನು ಕ್ರಮ ಜರುಗಿಸಲಾಗುವುದು.ಅನದಿಕೃತ ಮಾರಾಟಗಾರರು ಕಂಡುಬಂದರೆ ಅಂತಹವರ ವಿರುದ್ಧ ನಿರ್ದಾಕ್ಷಣವಾಗಿ ಕಾನೂನು ಕ್ರಮ ಜರುಗಿಸಲಾಗುವುದು. ರಸಗೊಬ್ಬರ ದಾಸ್ತಾನು ಮಾರಾಟ ಮಳಿಗೆಯಲ್ಲಿ ಲಭ್ಯವಿದ್ದು, ಹೆಸರು, ಉದ್ದು, ತೋಗರಿ ಹಾಗೂ ಕಬ್ಬು ಬೆಳೆಗೆ
10:26:26, 20:20:0:13, 12:36:16, 19:19:19 ಹಾಗೂ 15:15:15 ಈ ಗೋಬ್ಬರಗಳಲ್ಲಿ ಫೆÇಟ್ಯಾಷ್ ಮತ್ತು ಗಂಧಕ ಇರುವ ಕಾರಣ ಬೆಳೆಗಳ ಇಳುವರಿ ಅಧಿಕವಾಗುತ್ತದೆ, ಹಾಗಾಗಿ ಡಿ.ಎ.ಪಿ. ಬದಲಾಗಿ ಸಂಯುಕ್ತ ಸಮತೋಲನ ರಸಗೊಬ್ಬರಗಳನ್ನು ಉಪಯೋಗಿಸಬೆಕು.ಯೂರಿಯ ಖರಿದಿಸುವ ರೈತರು ಕಡ್ಡಾಯವಾಗಿ ಈIಆ ಹೋಂದಿರಬೆಕು ರಸಗೊಬ್ಬರ ಮಳಿಗೆಗೆ ಹೋಗುವಾಗ ಆಧಾರ ಪ್ರತಿಯನ್ನು ತೆಗೆದುಕೊಂಡು ಹೋಗಬೇಕು.ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಈಗಾಗಲೆ ದಾಸ್ತಾನು ಮಾಡಲಾಗಿದೆ.ಮುಂಗಾರು ಹಂಗಾಮಿಗೆ ಬಿತ್ತನೆ ಗುರಿ, ತೋಗರಿ 65,000 ಹೇ,ಹೆಸರು 12,000 ಹೇ.ಉದ್ದು 5,000 ಭತ್ತ 1,500 ಹೇ ಇತರೆ 1,850 ಹೇ ಓಟ್ಟು 85,350 ಹೇ. ಬಿತ್ತನೆ ಗುರಿ ಹೊಂದಲಾಗಿದೆ.ಮುಂಗಾರು ಮಾನ್ಸೂನ್ ಜೂನ್ ಮೊದಲನೆವಾರದಿಂದ ಪ್ರಾರಂಭವಾಗುವ ಸಾಧ್ಯತೆಯಿದ್ದು ರೈತರು ಬಿತ್ತನೆಗೆ ಅವಸರ ಮಾಡದೆ ತಮ್ಮ ಹೊಲಗಳಲ್ಲಿ ಬಿತ್ತನೆಗೆ ಬೇಕಾಗುವ ತೇವಾಂಶವಿದ್ದಲ್ಲಿ ಮಾತ್ರ ಬಿತ್ತನೆಮಾಡಬೇಕಾಗಿ ಸೂಚಿಸಿದೆ.ಬಿತ್ತನೆ ಮಾಡುವ ಮುನ್ನ ರೈತರು ಬಿತ್ತನೆ ಬೀಜಕ್ಕೆ ಟ್ರೈಕೋಡರ್ಮಾ 4ಗ್ರಾಂ/ಕೆಜಿ ಬಿಜೋಪಚಾರ ಮಾಡಬೇಕೆಂದು
ಸೂಚಿಸಿದ್ದಾರೆ.