(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಈ ತಿಂಗಳ ೨೨ ರಿಂದ ರಾಜ್ಯದಲ್ಲಿ ನಡೆಸಲು ಉದ್ದೇಶಿಸಿರುವ ಹಿಂದುಳಿದ ವರ್ಗಗಳ ಶೈಕ್ಷಣಿಕ, ಆರ್ಥಿಕ, ಜಾತಿಯ ಸಮೀಕ್ಷೆ. ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡುವ ಮತ್ತು ಗಣತಿ ಹೆಸರಲ್ಲಿ ಹಣ ಲೂಟಿ ಮಾಡುವ ಹುನ್ನಾರವನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೊಂದಿದ್ದಾರೆಂದು ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದ್ದಾರೆ.
ಅವರು ಇಂದು ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ. ಹಿಂದುಳಿದ ವರ್ಗಗಳ ಶೈಕ್ಷಣಿಕ, ಆರ್ಥಿಕ, ಜಾತಿಯ ಮರು ಗಣತಿಗೆ ಸರ್ಕಾರ ಮುಂದಾಗಿದೆ. ಬರುವ ಡಿಸೆಂಬರ್ ಒಳಗೆ ವರದಿ ನೀಡಲು ಆಯೋಗದ ಮುಖ್ಯಸ್ಥ. ಮಧು ಸೂಧನ ನಾಯಕ್ ಅವರಿಗೆ ವಹಿಸಿದ್ದಾರೆ. ಮಧು ಸೂಧನ್ ಅವರು ಸಿದ್ದರಾಮಯ್ಯ ಅವರಿಗೆ ಬಹು ಆಪ್ತರು ಎಂಬುದನ್ನು ಮರೆಯಬೇಕಿಲ್ಲ ಎಂದು ಹೇಳಿದರು.
ಕಳೆದ ಹತ್ತು ವರ್ಷಗಳ ಹಿಂದೆ ೧೫೦ ಕೋಟಿ ರೂ ವೆಚ್ಚ ಮಾಡಿ ೫೪ ಪ್ರಶ್ನೆಗಳ ಮೂಲಕ ಕಾಂತರಾಜ ಸಮಿತಿ ಸಮೀಕ್ಷೆ ವರದಿ ಮಾಡಿತ್ತು. ಅದು ಅವೈಜ್ಞಾನಿಕ ಎಂದು ಈಗ ೬೦ ಪ್ರಶ್ನೆಗಳ ಮೂಲಕ ಸೆ. ೨೨ ರಿಂದ ೪೨೦ ಕೋಟಿ ರೂ ವೆಚ್ಚದಲ್ಲಿ ಸಮೀಕ್ಷೆ ನಡೆಯಲಿದೆ.
ಸಮೀಕ್ಷೆಯಲ್ಲಿ ೫೨ ಹಿಂದು ಜಾತಿಗಳ ಮುಂದೆ ಕ್ರಿಶ್ಚಿಯನ್ ಸೇರಿಸಿದ್ದಾರೆ. ಇದು ಯಾಕೆ ಸಿದ್ದರಾಮಯ್ಯ ಅವರಿಗೆ ಯಾಕೆ ಅರ್ಥವಾಗುತ್ತಿಲ್ಲ. ಇದು ಜಾತಿಗಳ ನಡುವೆ ದ್ವೇಷ ಮೂಡಿಸುವ ಕೆಲಸವೇ ಎಂದು ಪ್ರಶ್ನಿಸಿದರು.
ಇನ್ನು ಐದು ಗ್ಯಾರೆಂಟಿ ಯೋಜನೆಗಳ ಮೂಲಕ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ ಎಂದು ಸಮೀಕ್ಷೆ ಮಾಡಿ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡುವ ಹುನ್ನಾರ ನಡೆದಿದೆ ಎಂದು ದೂರಿದರು.
ಅತ್ಯಂತ ಕಡಿಮೆ ಅವಧಿಯಲ್ಲಿ ಸಮೀಕ್ಷೆ ಮಾಡಲು ಹೊರಟಿರುವುದು ಸಮೀಕ್ಷೆ ಹೆಸರಲ್ಲಿ ಹಣವನ್ನು ಲೂಟಿ ಮಾಡಲು ಹೊರಟಿದ್ದಾರೆಂದು ಸಹ ಆರೋಪಿಸಿದರು.
ತಮ್ಮ ಸಿಎಂ ಕುರ್ಚಿಗೆ ಸಂಕಷ್ಟ ಬಂದಾಗಲೆಲ್ಲ ಸಿದ್ದರಾಮಯ್ಯ ಅವರು ಇಂತಹ ಸರ್ವೇಗಳ ಮೂಲಕ ಪಕ್ಷದ ಹೈ ಕಮಾಂಡ್ ಮೇಲೆ ಒತ್ತಡ ತರುವ ಪ್ರಯತ್ನ ಮಾಡುತ್ತಾರೆ ಕುರ್ಚಿ ಉಳಿಸಿಕೊಳ್ಳಲು. ಆದರೂ ಅವರು ತಮ್ಮ ೧೭ ನೇ ರಾಜ್ಯ ಬಜೆಟ್ ಮಂಡಿಸುವುದು ಡೌಟ್ ಎಂದರು ಶ್ರೀರಾಮುಲು.
೧೦ ಲಕ್ಷ ರೂ ಕೊಡಿ;
ಹಾಸದಲ್ಲಿ ನಿನ್ನೆ ಸಂಜೆ ನಡೆದ ಅಪಘಾತದಲ್ಲಿ ಸಾವನ್ನಪ್ಪಿರುವ ನಗರದ ಯುವಕ ಪ್ರವೀಣ್ ಕುಟುಂಬಕ್ಕೆ ರಾಜ್ಯ ಸರ್ಕಾರ ೫ ಲಕ್ಷ ರೂ, ಪ್ರಧಾನಿ ಮೋದಿ ಅವರು ಎರೆಡು ಲಕ್ಷರೂ ಪರಿಹಾರ ಘೋಷಣೆ ಮಾಡಿದ್ದಾರೆ.
ಮೃತ ಯುವಕ ಕುಟುಂಬವನ್ನು ಪರಿಪಾಲನೆ ಮಾಡುವ ಭವಿಷ್ಯ ಹೊಂದಿದ್ದ ಅದಕ್ಕಾಗಿ ರಾಜ್ಯ ಸರ್ಕಾರ ಹತ್ತು ಲಕ್ಷ ರೂ ಪರಿಹಾರ ನೀಡುವಂತೆ ಒತ್ತಾಯ ಮಾಡಿದರು.

























