Home ಮುಖಪುಟ ಸುದ್ದಿ ಮಹತ್ವ ಪಡೆದ ಮೋದಿ ಇಸ್ರೇಲ್ ಪ್ರವಾಸ

ಮಹತ್ವ ಪಡೆದ ಮೋದಿ ಇಸ್ರೇಲ್ ಪ್ರವಾಸ

ಬಾಂಧವ್ಯವೃದ್ಧಿಗೆ ಸಹಕಾರ

ನವದೆಹಲಿ,ಫೆ. ೨೫- ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನಗಳ ಇಸ್ರೇಲ್ ಭೇಟಿ ಮಹತ್ವ ಪಡೆದುಕೊಂಡಿದ್ದು ವ್ಯಾಪಾರ, ರಕ್ಷಣೆ ಮತ್ತು ಭದ್ರತೆ ಸೇರಿದಂತೆ ಮಹತ್ವದ ವಿಷಯಗಳು ಚರ್ಚೆಗೆ ಬರುವ ನಿರೀಕ್ಷೆ ಇದೆ. ಒಂಭತ್ತು ವರ್ಷಗಳ ಬಳಿಕ ಮೋದಿಯವರು ಎರಡನೇ ಬಾರಿಗೆ ಇಸ್ರೇಲ್ ಗೆ ಭೇಟಿ ನೀಡುತ್ತಿರುವುದು ಮಹತ್ವ ಪಡೆದುಕೊಂಡಿದೆ.

ಇರಾನ್ ಮೇಲೆ ಅಮೆರಿಕದ ದಾಳಿಯ ಬೆದರಿಕೆಯ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರ ಈ ಭೇಟಿ ಭಾರತ- ಇಸ್ರೇಲ್ ನಡುವಿನ ಸಂಬಂಧ, ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.

ಭಾರತ- ಇಸ್ರೇಲ್ ನಡುವಿನ ಆಳವಾದ ಮತ್ತು ದೀರ್ಘಕಾಲೀನ ಕಾರ್ಯತಂತ್ರದ ಪಾಲುದಾರಿಕೆಯನ್ನು ಪುನರುಚ್ಚರಿಸುತ್ತದೆ ಮತ್ತು ಸಾಮಾನ್ಯ ಸವಾಲುಗಳನ್ನು ಪರಿಶೀಲಿಸಲು ಮತ್ತು “ಎರಡು ಪ್ರಜಾಪ್ರಭುತ್ವ ದೇಶಗಳ ನಾಯಕರ ಭೇಟಿ ಮಹತ್ವ ಪಡೆದುಕೊಂಡಿದೆ.

ಉಭಯ ದೇಶಗಳ ನಡುವಿನ ಬಲವಾದ ಪಾಲುದಾರಿಕೆಗಾಗಿ ಅವರ ಹಂಚಿಕೆಯ ದೃಷ್ಟಿಕೋನವನ್ನು ಸಾಧಿಸುವತ್ತ ಪ್ರಯತ್ನಗಳನ್ನು ಮರುಜೋಡಿಸಲು” ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ.

ದ್ವಿಪಕ್ಷೀಯ ಚರ್ಚೆ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಅನೌಪಚಾರಿಕ ಸಭೆ ನಡೆಸಲಿದ್ದಾರೆ.

ಬಳಿಕ ಇಸ್ರೇಲ್ ಸಂಸತ್ತು ನೆಸ್ಸೆಟ್ ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ತಂತ್ರಜ್ಞಾನ ಮತ್ತು ನಾವೀನ್ಯತೆ ಪ್ರದರ್ಶನಕ್ಕೆ ಭೇಟಿ ನೀಡಲಿದ್ದಾರೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಆಯೋಜಿಸಿರುವ ಖಾಸಗಿ ಭೋಜನ ಕೂಟದಲ್ಲಿ ಭಾಗವಹಿಸಲಿದ್ದಾರೆ.

ನಾಳೆ ಉಭಯ ನಾಯಕರ ನಡುವೆ ನಿಯೋಗ ಮಟ್ಟದ ಮಾತುಕತೆ ನಡೆಯಲಿದೆ.

೨೦೧೭ ರ ಬಳಿಕ ಭೇಟಿ;

೨೦೧೭ರ ನಂತರ ಪ್ರಧಾನಿ ಅವರ ಎರಡನೇ ಇಸ್ರೇಲ್ ಭೇಟಿಯಾಗಿದ್ದು ಈ ವೇಳೆ ಭದ್ರತಾ ಸಹಕಾರದ ಕುರಿತಾದ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ. ರಕ್ಷಣಾ ಖರೀದಿಗಳ ಜೊತೆಗೆ, ಭಾರತವು ಸುಧಾರಿತ ಶಸ್ತ್ರಾಸ್ತ್ರ ತಂತ್ರಜ್ಞಾನಗಳ ವರ್ಗಾವಣೆಯತ್ತ ಗಮನ ಹರಿಸುತ್ತಿದೆ.

ಭಾರತ ೨೦೩೫ ರ ವೇಳೆಗೆ ಕ್ಷಿಪಣಿ ಮತ್ತು ಡ್ರೋನ್ ಬೆದರಿಕೆಗಳಿಂದ ನಗರಗಳು ಮತ್ತು ಪ್ರಮುಖ ಸ್ಥಾಪನೆಗಳನ್ನು ರಕ್ಷಿಸುವ ಗುರಿ ಹೊಂದಿರುವ “ಸುದರ್ಶನ ಚಕ್ರ” ಎಂಬ ಸ್ಥಳೀಯ, ಬಹು-ಪದರದ ವಾಯು ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದು ಇಸ್ರೇಲ್ ಭೇಟಿ ಮಹತ್ವ ಪಡೆದುಕೊಂಡಿದೆ.

ಕಳೆದ ವರ್ಷದ ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತ ಇಸ್ರೇಲ್‌ನ ಮುಂದುವರಿದ ಡ್ರೋನ್‌ಗಳು, ದೀರ್ಘ-ಶ್ರೇಣಿಯ ಕ್ಷಿಪಣಿಗಳು ಮತ್ತು ಲೇಸರ್ ಆಧಾರಿತ ರಕ್ಷಣಾ ವ್ಯವಸ್ಥೆ ಅವಳವಡಿಸಿಕೊಳ್ಳುವ ಭಾರತ ಮುಂದಾಗಿದೆ.

ಭದ್ರತಾ ಮೂಲಸೌಕರ್ಯ ಹೆಚ್ಚಿಸಲು ಮುಂದಾಗಿದ್ದು ಭವಿಷ್ಯದಲ್ಲಿ ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ವೈಮಾನಿಕ ದಾಳಿಗಳ ಮೂಲಕ ಪಾಕಿಸ್ತಾನದ ಯಾವುದೇ ದಾಳಿ ತಡೆಯಬಲ್ಲ ಬಹು-ಪದರದ ಗುರಾಣಿ ರಚಿಸಲು ನೋಡುತ್ತಿದೆ ಎಂದು ಅಧಿಕಾರಿಗಳ ಉನ್ನತ ಮೂಲಗಳು ತಿಳಿಸಿವೆ.

ಭಾರತದ ಡಿಆರ್ ಡಿಒ ಅಭಿವೃದ್ಧಿ ಪಡಿಸಿದ ಎಂಕೆ-೨ ವ್ಯವಸ್ಥೆ ಎಂದು ಕರೆಯಲ್ಪಡುವ ಹೈ-ಎನರ್ಜಿ ಲೇಸರ್-ಆಧಾರಿತ ಡೈರೆಕ್ಟ್ ಎನರ್ಜಿ ವೆಪನ್ ಅನ್ನು ಅಭಿವೃದ್ಧಿಪಡಿಸಿದ್ದರೆ, ಇಸ್ರೇಲ್ ಡ್ರೋನ್‌ಗಳು, ರಾಕೆಟ್‌ಗಳು ಮತ್ತು ಗಾರೆಗಳನ್ನು ಪ್ರತಿಬಂಧಿಸಬಲ್ಲ ಹೈ-ಎನರ್ಜಿ ಲೇಸರ್ ಆಯುಧವಾದ ಐರನ್ ಬೀಮ್ ನಿಯೋಜಿಸಲು ಪ್ರಾರಂಭಿಸಲಾಗಿದೆ ಎನ್ನಲಾಗಿದೆ.

ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ


ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಭೇಟಿಯ ಬಗ್ಗೆ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದ್ದು, ಅವರ ಆತ್ಮೀಯ ಸ್ನೇಹಿತ ಮತ್ತು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಇಡೀ ಜಗತ್ತು ಟೀಕಿಸುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ ಅವರು “ನೈತಿಕ ಹೇಡಿತನವನ್ನು” ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಿದೆ.


ಗಾಜಾವನ್ನು ಅವಶೇಷ ಮತ್ತು ಧೂಳನ್ನಾಗಿ ಮಾಡಿರುವ ಮತ್ತು ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಅಕ್ರಮ ವಸಾಹತುಗಳ ವಿಸ್ತರಣೆಗೆ ಸಂಚು ರೂಪಿಸುತ್ತಿರುವ ಇಸ್ರೇಲ್ ನ್ನು ಪ್ರಧಾನಿ ಮೋದಿ ಅವರು “ನಿರ್ಲಜ್ಜವಾಗಿ ಅಪ್ಪಿಕೊಳ್ಳುತ್ತಿದ್ದಾರೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಹೇಳಿದ್ದಾರೆ.