
ಸಂಜೆವಾಣಿ ವಾರ್ತೆ,
ವಿಜಯಪುರ, ಡಿ. ೨೨ : ಮನುಷ್ಯನ ಒತ್ತಡದ ಬದುಕಿನಲ್ಲಿ ಗಲಿಬಿಲಿ ಗೋವಿಂದ ಹಾಸ್ಯ ಈ ಚಲನಚಿತ್ರವು ಉತ್ತಮ ಆರೋಗ್ಯಕ್ಕೆ ಪೂರಕವಾಗಲಿದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಸಮೀಪದ ಸುಕ್ಷೇತ್ರ ಇಂಚಗೇರಿ ಮಠದಲ್ಲಿ ಭಾನುವಾರ ೩ದಿನಗಳವರೆಗೆ ಇಂಚಗೇರಿ ಮಠ ಮತ್ತು ಸುತ್ತಲಿನ ವಿವಿಧ ಸ್ಥಳಗಳಲ್ಲಿ ಹಮ್ಮಿಕೊಂಡ ‘ಗಲಿಬಿಲಿ ಗೋವಿಂದ’ ಹಾಸ್ಯ ಚಲನಚಿತ್ರ ಚಿತ್ರೀಕರಣಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಗಲಿಬಿಲಿ ಗೋವಿಂದ ಚಲನಚಿತ್ರದ ಸಂಭಾಷಣೆ, ಸಾಹಿತ್ಯ, ಚಿತ್ರ ಕಥೆ ರಚನೆಕಾರ ಸಂಗೀತ ನಿರ್ದೇಶಕ ನಾಯಕ ನಟ ಡಾ.ಸಂಗಮೇಶ ಉಪಾಸೆ ಮಾತನಾಡಿ, ‘ಗ್ರಾಮೀಣ ಭಾಗದಲ್ಲಿ ಅನಾಥ ಮಕ್ಕಳ ಕುರಿತು ಅವರ ಸಮಸ್ಯೆ ಮೇಲೆ ಬೆಳಕು ಚೆಲ್ಲುವ ಹಾಗೂ ಜಿಲ್ಲೆಯ ಇಂಚಗೇರಿಮಠ, ಸಾವಳಸಂಗದ ಗುಡ್ಡದ ಸಿದ್ದೇಶ್ವರ ವೃಕ್ಷೋಧ್ಯಾನದಲ್ಲಿ, ಹೊರ್ತಿ, ಹಳಗುಣಕಿಯ ಅಶೋಕ ಹೊಟೇಲ್ ವಿಲೇಜ್ ರೆಸೋರ್ಟ ಹೋಟೆಲ್, ಅಂಜುಟಗಿ, ಇಂಡಿ ಇನ್ನಿತರೆಡೆಗಳಲ್ಲಿ ರೂ.೧ಕೋಟಿ ವೆಚ್ಚದ ಈ ಚಲನಚಿತ್ರ ಚಿತ್ರೀಕರಣ ಮಾಡಲಾಗುತ್ತಿದೆ. ಇದೊಂದು ಅನಾಥ ಮಕ್ಕಳ ಮತ್ತು ಸಾಮಾಜಿಕ ಕಳಕಳಿಯ ೫ಜನ ನಿರ್ಮಾಪಕರ ತಂಡ, ವಿವಿಧ ಕಲಾವಿದರ ತಂಡವಿದೆ ಎಂದರು. ಈ ಚಿತ್ರಕ್ಕೆ ಎಲ್ಲ ಕಲಾಭಿಮಾನಿಗಳು ಮತ್ತು ಎಲ್ಲರೂ ಪ್ರೋತ್ಸಾಹಿಸಿ, ಆಶೀರ್ವದಿಸಬೇಕು ಎಂದು ವಿನಂತಿ ಸಿದರು.
ನಾಗಠಾಣ ಬಿಜೆಪಿ ಮುಖಂಡ ಸಂಜೀವ ಐಹೊಳೆ, ಇಲಿಯಾಸ ಬೋರಾಮಣಿ, ಸುರೇಶ ಗೊಣಸಗಿ, ಪಾರ್ವತಿ ಕುರ್ಲೆ, ಭೀಮಣ್ಣ ಕೌಲಗಿ, ಸಂದೀಪ ರಾಠೋಡ, ಜೆಟ್ಟೆಪ್ಪ ರವಳಿ, ಮಲ್ಲಣ್ಣ ಸಕ್ರಿ, ಕಲ್ಲಪ್ಪ ಅರವತ್ತಿ ಹಾಗೂ ಗ್ರಾಮ ಮತ್ತು ಸುತ್ತಲಿನ ನೂರಾರು ಕಲಾಭಿಮಾನಿಗಳು ಭಾಗವಹಿಸಿದ್ದರು.

























