ಯಾದಗಿರಿ,ನ.೪: ರೈತರಿಗೆ ಯಾವುದೇ ತೊಂದರೆಯಾಗದAತೆಯೇ ಹತ್ತಿ ಖರೀದಿಸುವ ಮೂಲಕ ಧಾರಣಿಯಲ್ಲೂ ತಾರತಮ್ಯ ಮಾಡಬೇಡಿ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಸೂಚಿಸಿದರು.
ಎಪಿಎಂಸಿ ವಾರ್ಡ್ ನಲ್ಲಿರುವ ಶ್ರೀ ರಾಜೇಂದ್ರ ಅಗ್ರೊ ಇಂಡಸ್ಟ್ರೀಸ್ ನ ಹತ್ತಿ ಮಿಲ್ ನಲ್ಲಿ ಭಾರತೀಯ ಹತ್ತಿ ನಿಗದವು ರೈತರಿಂದ ಖರೀದಿಸುವ ಹತ್ತಿ ಬೆಳೆ ವ್ಯಾಪಾರದ ಆರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶುಭಾರಂಭಗೊAಡ ಈ ಸ್ಥಳದಲ್ಲಿ ಇಂದು ಒಂದು ದಿನ ರೈತರು ತರುವ ಹತ್ತಿಯನ್ನು ಯಾವುದೇ ರೀತಿಯ ನಿಯಮಗಳ ಹಚ್ಚಿ ಕಡಿಮೆ ದರದಲ್ಲಿ ತೆಗೆದುಕೊಳ್ಳದೇ ನಿಗದಿತ ೮೧೧೦ ರೂ. ಖರೀದಿಸಬೇಕೆಂದು ಹೇಳಿದರು.
ರೈತರು ತರುವ ಹತ್ತಿಗೆ ತೇವಾಂಶ ಹೆಚ್ಚಿಗೆ ಇದ್ದು, ಶೇ.೧೨ರಷ್ಟು ಇದ್ದರೆ ಕಡಿಮೆ ದರ ಇಲ್ಲಿ ನೀಡಿದರೂ ಬೇರೆ ಕಡೆ ಹೆಚ್ಚಿಗೆ ಕೊಟ್ಟರೂ ವ್ಯತ್ಯಾಸದ ಹಣ ಆ ಮೇಲೆ ರೈತರಿಗೆ ನೀಡುವ ವ್ಯವಸ್ಥೆ ಆಗಬೇಕೆಂದು ಶಾಸಕರು ಸಂಬAಧಪಟ್ಟ ಅಧಿಕಾರಿಗಳಿಗೆ ಕಡಕ್ ಆಗಿ ಸೂಚಿಸಿದರು.
ಈ ವೇಳೆ ಹತ್ತಿಯನ್ನು ಪರಿಶೀಲಿಸಿದ ಶಾಸಕರು, ರೈತರಿಂದ ಮಾಹಿತಿ ಪಡೆದರು.ಮಿಲ್ ನ ಮಾಲೀಕರಾದ ಸುಮೇರ್ ಮಲ್ ಜೈನ್, ಮಿತೇಶಕುಮಾರ ಜೈನ್,ಪ್ರಶಾಂತ ಜೈನ್, ಬಸವರಾಜಪ್ಪ ದಳಪತಿ ಸೇರಿದಂತೆ ಇತರರಿದ್ದರು.























