ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಶಾಸಕ ಶರಣಗೌಡ ಕಂದಕೂರರಿAದ ಕಿಟ್ ವಿತರಣಗೆ ಚಾಲನೆ

ಗುರುಮಠಕಲ್:ಸೆ.೨೩:ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಶಾಸಕ ಶರಣಗೌಡ ಕಂದಕೂರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯ ಸರಕಾರ ಹಮ್ಮಿಕೊಂಡಿರುವ ಈ ಸಮೀಕ್ಷೆಯಿಂದ ರಾಜ್ಯದ ಜನತೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯನ್ನು ನಿಖರವಾಗಿ ಅರಿತುಕೊಳ್ಳುವುದರ ಮೂಲಕ ಹಿಂದುಳಿದ ಸಮುದಾಯಗಳ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಸಂಬAಧಿಸಿದAತೆ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು. ಸಮೀಕ್ಷೆ ಕುರಿತು ಜನತೆಯಲ್ಲಿ ಯಾವುದೇ ತಪ್ಪು ಸಂದೇಶ ಬೇಡ. ಸಮೀಕ್ಷೆಯಿಂದ ಎಲ್ಲಾ ಸಮುದಾಯಗಳ ಆರ್ಥಿಕ ,ಶೈಕ್ಷಣಿಕವಾಗಿ ಗುರುತಿಸಲು ಸಾಧ್ಯವಾಗಲಿದೆ ಎಂದ ಅವರು ಸಮೀಕ್ಷೆಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮುಂದಾಗಿದೆ. ಈ ಸಮೀಕ್ಷೆ ಸೆ.೨೨ರಿಂದ ಅಕ್ಟೋಬರ್ ೭ರವರೆಗೆ ನಡೆಯಲಿದೆ. ಭವಿಷ್ಯದಲ್ಲಿ ರೂಪಿಸಬೇಕಾದ ಯೋಜನೆಗಳ ಬಗ್ಗೆ ಒಂದು ಸರಿಯಾದ ಮಾಹಿತಿ ಇದರಿಂದ ದೊರಕಲಿದೆ ಎಂದು ತಿಳಿಸಿದರು. ಸಮೀಕ್ಷೆ ಸಂದರ್ಭದಲ್ಲಿ ಲೋಪದೊಷಗಳು ಕಂಡುಬAದರೆ ಸ್ಥಳಿಯ ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಲು ಸೂಚಿಸಿದರು.ತಾಲೂಕಿನಲ್ಲಿ ೨೫೮ ಜನ ಗಣತಿದಾರರು ಆಯ್ಕೆಯಾಗಿದ್ದಾರೆ ಮತ್ತು ೧೩ ಜನ ಮೇಲ್ವಿಚಾರಣೆಗೆ ನಿಯೋಜನೆಗೋಂಡಿದ್ದು ಸರಾಸರಿ ೧೦೦ ಕುಟುಂಬಗಳಿಗೆ ಹಂಚಿಕೆ ಮಾಡಲಾಗಿದ್ದು ಮತ್ತು ಒಂದು ಕುಟುಂಬಕ್ಕೆ ಎಷ್ಟು ಸಮಯ ಬೇಕಿದೆ ಎನ್ನುವುದು ಗಣತಿ ಆರಂಭವಾದ ಬಳಿಕ ತಿಳಿಯುತ್ತದೆ ಆದುದರಿಂದ ಈ ಸಮಿಕ್ಷೆಯು ಬಹಳ ನಿಮ್ಮ ಮೇಲೆ ಜವಾಬ್ದಾರಿ ಇರುವದರಿಂದ ಮನೆ ಮನೆ ಭೇಟಿ ಸಮಯದಲ್ಲಿ ೬೦ ಕಾಲಂಗಳನ್ನು ತುಂಬುವಾಗ ಮನೆಯಲ್ಲಿರುವ ಮುಗ್ದ ಜನರು ತಾವು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ಅವರಿಂದ ಪಡೆದು ಮತ್ತು ಸಂಬAದಿಸಿದ ಗುರುತಿನ ಚೀಟಿಗಳನ್ನು ತರುವವರೆಗೂ ತಾಳ್ಮೆ ಯಿಂದ ಅವರ ಮನಸ್ಸು ಗೆದ್ದು ಸರಕಾರಕ್ಕೆ ಒಳ್ಳೆಯ ಹೆಸರು ತರಲು ತಾವು ಪ್ರಾಮಾಣಿಕ ಕೆಲಸಮಾಡಬೇಕಾಗಿದೆ ಎಂದು ಹೇಳಿದರು. ಈ ವೇಳೆ ತಹಸೀಲ್ದಾರ್ ಶಾಂತಗೌಡ ಬಿರಾದಾರ್, ಗ್ರೇಡ್ -೨ ತಹಸೀಲ್ದಾರ್ ನರಸಿಂಹ ಸ್ವಾಮಿ ಹಾಗೂ ಗಣತಿದಾರರು ಇದ್ದು ಕಾರ್ಯಕ್ರಮದ ನಿರೂಪಣೆಯನ್ನು ಬಾಲಪ್ಪ ಸಿರಿಗೆಂ ನೀಡಿದರು.