Home ಜಿಲ್ಲೆ ಬೆಂಗಳೂರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ರೂಪಕಲಾಶಶಿಧರ್ ಚಾಲನೆ

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ರೂಪಕಲಾಶಶಿಧರ್ ಚಾಲನೆ

filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: null;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: off;albedo: ;confidence: ;motionLevel: -1;weatherinfo: null;temperature: 46;

ಕೆಜಿಎಫ್: ಫೆ,೮: ಕ್ಷೇತ್ರದ ಗಡಿ ಭಾಗದ ಘಟ್ಟಮಾದಮಂಗಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಲ್ಲಿಕಲ್ಲು ಗ್ರಾಮದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ೧.೫೦ ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ ಅಲ್ಲಿಕಲ್ಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ ೫ ಲಕ್ಷ ಅನುದಾನದಲ್ಲಿ ಅಡುಗೆ ಕೊಣೆಯನ್ನು ಶಾಸಕಿ ರೂಪಕಲಾಶಶಿಧರ್ ಉದ್ಘಾಟಿಸಿದರು.


ಈವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಿ ರೂಪಕಲಾಶಶಿಧರ್ ಕ್ಷೇತ್ರವು ಗಡಿ ಭಾಗದಲ್ಲಿ ಇದ್ದು ಹಲವು ಗ್ರಾಮಗಳಿಗೆ ಸಂರ್ಪಕ ಕಲ್ಪಿಸುವ ರಸ್ತೆಗಳು ಹಳ್ಳಕೊಳ್ಳಗಳಿಂದ ಕೂಡಿದ್ದು ಸಾರ್ವಜನಿಕರು ನಿತ್ಯ ರಸ್ತೆಯಲ್ಲಿ ವಾಹನ ಚಾಲಾಯಿಸಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಇದ್ದು ರಸ್ತೆ ನಿರ್ಮೀಸಿಕೊಡುವಂತೆ ಬೇಡಿಕೆಯನ್ನು ಮುಂದಿಟ್ಟಿದ್ದರು ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳ ಮನವೂಲಿಸಿ ೭ ಕೋಟಿಗಳ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದು ಎನ್.ಜಿ.ಹುಲ್ಕೂರು ರಾಮಸಾಗರ ಘಟ್ಟಮಾದಮಂಗಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.


ಕ್ಷೇತ್ರದ ಅಭಿವೃದ್ಧಿಗಾಗಿ ನೂರಾರು ಕೋಟಿ ಅನುದಾನವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಬಿಡುಗಡೆಗೊಳಿಸಿದ್ದು ನಗರ ಭಾಗದಲ್ಲಿ ಈಗಾಗಲೇ ಮುಖ್ಯ ರಸ್ತೆಯ ಡಾಂಭರಿಕರಣ ಕಾಮಗಾರಿಯು ಪೂರ್ಣಗೊಂಡಿದೆ ಮತ್ತು ಬೀದಿ ದೀಪಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ ಹಾಗೇ ಈಗಾಗಲೇ ಗೃಹ ಸಚಿವರು ಭಾರತೀಯ ಮೀಸಲು ಪಡೆಗಾಗಿ ೧೦೦ ಎಕರೆ ಪ್ರದೇಶದಲ್ಲಿ ತರಬೇತಿ ಕೇಂದ್ರವನ್ನು ನಿರ್ಮೀಸಲು ಭೂಮಿ ಪೂಜೆಯನ್ನು ನೆರೆವೆರಿಸಿದ್ದಾರೆ ಮತ್ತು ೯೭೦ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿ ಇದ್ದು ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ಟೌನ್ ಶೀಫ್ ಕಾಮಗಾರಿ ಸಹ ಪ್ರಾರಂಭವಾಗಲಿದ್ದು ಒಟ್ಟಾರೆ ಮುಂದಿನ ದಿನಗಳಲ್ಲಿ ನಿರುದ್ಯೋಗ ಸಮಸ್ಯೆ ಬಗೆಹರಿಯಲಿದೆ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಅವಕಾಶಗಳು ಲಭಿಸಲಿದೆ ಎಂದು ಹೇಳಿದರು.


ಈ ಸಂರ್ದಭದಲ್ಲಿ ಘಟ್ಟಮಾದಮಂಗಲ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರೋಜಾ, ಉಪಾಧ್ಯಕ್ಷ ಜಯರಾಮರೆಡ್ಡಿ, ಮಾಜಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸುನಂದಮ್ಮ ರಾಮಕೃಷ್ಣರೆಡ್ಡಿ, ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುಲೋಚನ ಬಾಬು, ಅಲ್ಲಿಕಲ್ಲು ಬಾಬುರೆಡ್ಡಿ, ಗ್ಯಾರೆಂಟಿ ಅನುಷ್ಠಾನ ಯೋಜನೆ ಅಧ್ಯಕ್ಷ ರಾದಕೃಷ್ಣರೆಡ್ಡಿ, ವಕೀಲ ಪದ್ಮನಾಬರೆಡ್ಡಿ, ಬಾಸ್ಕರ್ ರೆಡ್ಡಿ ,ಅಮರೇಶ್‌ಬಾಬು, ಎಪಿಎಂಸಿ ನಿದೇರ್ಶಕ ಗಣೇಶ್, ರಾವ್ , ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹಾಗೂ ಇತರರು ಹಾಜರಿದ್ದರು