೧೦ ಕೋಟಿ ವೆಚ್ಚದ ಸಂರ್ಪಕ ರಸ್ತೆಗೆ ಶಾಸಕಿ ರೂಪ ಚಾಲನೆ

ಕೆಜಿಎಫ್:ಆ:೨೬:ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ಬಿಡುಗಡೆಗೊಂಡಿರುವ ೧೦ ಕೋಟಿ ಅನುದಾನದಲ್ಲಿ ೧೫ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ೩೦ ಗ್ರಾಮಗಳಲ್ಲಿ ಸಂರ್ಪಕ ರಸ್ತೆಗೆ ಭೂಮಿ ಪೂಜೆಯನ್ನು ಶಾಸಕಿ ರೂಪಕಲಾಶಶಿಧರ್ ತಿ.ಗೊಲ್ಲಹಳ್ಳಿ ಪಂಚಾಯ್ತಿಯ ತಿಮ್ಮಸಂದ್ರ ಹಾಗೂ ಬೇತಮಂಗಲ ಗ್ರಾಮದ ಬಸ್ ನಿಲ್ದಾಣದಲ್ಲಿ ಭೂಮಿ ಪೂಜೆ ನೆರೆವೆರಿಸಿದರು.


ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಿ ರೂಪಕಲಾಶಶಿಧರ್ ನಮ್ಮ ಪಕ್ಷದ ಮುಖಂಡರು ಗ್ರಾಮಸ್ಥರು ಹಲವು ದಿನಗಳಿಂದ ಗ್ರಾಮಗಳ ಸಂರ್ಪಕ ರಸ್ತೆ ಹದಗೆಟ್ಟಿದ್ದು ದುರಸ್ಥಿಪಡಿಸುವಂತೆ ಬೇಡಿಕೆಯನ್ನು ಮುಂದಿಡುತ್ತಿದ್ದರು ಅವರ ಭೇಡಿಕೆಯಂತೆ ಆರ್.ಡಿ.ಪಿಆರ್ ಅನುದಾನದಡಿಯಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ೨ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.


ಗುಣಮಟ್ಟದಲ್ಲಿ ರಾಜಿ ಇಲ್ಲ

೧೦ ಕೋಟಿ ಅನುದಾನದಲ್ಲಿ ೩೦ ಗ್ರಾಮಗಳಲ್ಲಿ ಸಂರ್ಪಕ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು ಗುಣಮಟ್ಟದ ಕಾಮಗಾರಿಗೆ ನನ್ನ ಪ್ರಥಮ ಅಧ್ಯತೆಯಾಗಿದ್ದು ಯಾವುದೇ ಕಾರಣಕ್ಕೂ ರಾಜಿಯ ಪ್ರಶ್ನೆಯೆ ಇಲ್ಲ ಗುಣಮಟ್ಟದ ಕಾಮಗಾರಿ ಕಾಣಬೇಕಾದರೆ ಈ ಭಾಗದ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಸದಸ್ಯರು ನಾಗರೀಕರು ರಸ್ತೆ ಕೆಲಸದ ಸಂದರ್ಭದಲ್ಲಿ ಸ್ಥಳದಲ್ಲಿ ಇದ್ದು ಗುಣಮಟ್ಟದ ಕಾಮಗಾರಿ ನಡೆಸುವಂತೆ ಅವರಿಂದ ಕೆಲಸವನ್ನು ತೆಗೆದುಕೊಳ್ಳಬೇಕು ಎಂದರು.


ಈಗಾಗಲೇ ನಗರ ಹಾಗೂ ಗ್ರಾಮೀಣಭಾಗದಲ್ಲಿ ಪ್ರಮುಖ ರಸ್ತೆಗಳ ಅಭಿವೃದ್ಧಿ ಕೆಲಸ ಮಾಡಲಾಗಿದ್ದು ಉಳಿದಿರುವ ಭಾಕಿ ರಸ್ತೆ ಕಾಮಗಾರಿಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.


ಇದೇ ವೇಳೆ ಮಾತನಾಡಿದ ಬೇತಮಂಗಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ವೀನುಕಾರ್ಥಿಕ್ ಬೇತಮಂಗಲದಲ್ಲಿ ಹಲವು ರಸ್ತೆಗಳು ಹದಗೆಟ್ಟಿದ್ದು ನಾವು ಶಾಸಕರಿಗೆ ರಸ್ತೆ ದುರಸ್ಥಿಪಡಿಸುವಂತೆ ಮನವಿ ಮಾಡಿದರ ಮೇರೆಗೆ ಅಧ್ಯತೆ ಮೇರೆಗೆ ಬಸ್ ನಿಲ್ದಾಣದ ಸಂರ್ಪಕ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮಾಡಿದ್ದು ಮುಂದಿನ ದಿನಗಳಲ್ಲಿ ಪ್ರತಿಯೊಂದು ವಾರ್ಡ್‌ಗಳಲ್ಲಿ ಹದಗೆಟ್ಟಿರುವ ರಸ್ತೆಗಳಿಗೆ ಕಾಯ ಕಲ್ಪ ಕಲ್ಪಿಸಲಿದ್ದಾರೆ ಅಭಿವೃದ್ಧಿಗೆ ಮತ್ತೊಂದು ಹೆಸರೇ ರೂಪಕಲಾಶಶಿಧರ್ ಆಗಿದ್ದು ಕೆಜಿಎಫ್ ವಿಧಾನಸಭೆ ಕ್ಷೇತ್ರದಲ್ಲಿ ಕೈಗಾರಿಕೆ ಕ್ರಾಂತಿಯನ್ನು ಉಂಟು ಮಾಡಲಿದ್ದಾರೆ ಇದರಿಂದ ಸಾವಿರಾರು ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಅವಕಾಶ ದೊರಕಲಿದೆ ಎಂದು ಹೇಳಿದರು.


ಸಂರ್ಪಕ ರಸ್ತೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ್, ಬೇತಮಂಗಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ವೀನುಕಾರ್ಥಿಕ್, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಅ.ಮು.ಲಕ್ಷ್ಮಿನಾರಾಯಣ ,ವಿಎಸ್‌ಎಸ್‌ಎನ್ ಅಧ್ಯಕ್ಷ ವೆಂಕಟಚಲಪತಿ, ಗರಾಮ ಪಂಚಾಯ್ತಿ ಸದಸ್ಯರಾದ ಶಂಕರ್ ,ಸುರೇಂದ್ರಗೌಡ,ಪಾಪಣ್ಣ, ರಾಜಣ್ಣ, ರಾಜಪ್ಪ ಹಾಗೂ ಇತರರು ಹಾಜರಿದ್ದರು.