ಬಸವನಬಾಗೇವಾಡಿ :ಅ.೨೭:ಕುದುರೆ ಸಾಲವಾಡಿಗೆ ಗ್ರಾಮದ ರಸ್ತೆಯ ಅಗಲೀಕರಣ ವಿಷಯದಲ್ಲಿ ದೇವರ ಹಿಪ್ಪರಗಿಯ ಮತಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲರು ಕಾನೂನು ಬಾಹಿರವಾಗಿ ಮನೆಗಳನ್ನು ಕೆಡುವಿದ್ದಾರೆ ಕಾರಣ ಶಾಸಕರು ಕೂಡಲೇ ನಿರಾಶ್ರಿತರ ಬಳಿ ಕ್ಷಮೆ ಕೇಳಬೇಕು ಈ ಕಾರ್ಯದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಮಾನ್ಯ ಜಿಲ್ಲಾಧಿಕಾರಿಗಳು ಕೂಡಲೇ ಅಮಾನತ್ತ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಶಾಂತಗೌಡ ಪಾಟೀಲ್ ನಡಹಳ್ಳಿ ಅವರು ಅಗ್ರಹಿಸಿದರು ತಾಲೂಕಿನ ಕುದುರೆ ಸಾಲವಾಡಗಿ ಗ್ರಾಮದಲ್ಲಿ ರಸ್ತೆ ಅಗಲೀಕರಣ ನೆಪದಲ್ಲಿ ೧೪೩ ಮನೆಗಳನ್ನು ಕೆಡವಿದ್ದಾರೆ ಆ ಕುಟುಂಬಗಳಿಗೆ ಸೂಕ್ತ ಹಾಗೂ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊAಡು ತಾಲೂಕಿನ ದಂಡಾಧಿಕಾರಿಗಳ ಕಚೇರಿ ಮುಂದೆ ಕಳೆದ ೧೧ ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಶನಿವಾರ ಸಂಜೆ ಭೇಟಿ ನೀಡಿ ಬೆಂಬಲ ಸೂಚಿಸಿ ಮಾತನಾಡಿದರು ಶಾಸಕರು ಚುನಾವಣೆ ವಿಷಯದಲ್ಲಿ ರಾಜಕೀಯ ಮಾಡಲಿ ಆದರೆ ಅಭಿವೃದ್ಧಿನೇ ಪದದಲ್ಲಿ ಬಡವರ ಮನೆಗಳನ್ನು ಕೆಡವಿ ರಾಜಕೀಯ ಮಾಡುವುದು ಸರಿಯಲ್ಲ ಕಾನೂನು ಪ್ರಕಾರ ಅಭಿವೃದ್ಧಿ ಮಾಡಿದರೆ ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಒಂದು ವೇಳೆ ನಿಮ್ಮ ಮನೆಯನ್ನು ಅಳತೆ ಮಾಡಿದರೆ ನಿಮ್ಮ ಮನೆಯ ರಸ್ತೆ ಮೇಲಿದ್ದರೆ ನೀವು ನಿಮ್ಮ ಮನೆಯನ್ನು ತೆರೆವುಗೊಳಿಸಲು ಸಿದ್ಧರಾಗಬೇಕಾಗುತ್ತದೆ ನೀವು ನಿಮ್ಮ ಮನೆಯನ್ನು ತೆರೆವುಗೊಳಿಸಿದರೆ ನಾನು ರಾಜಕೀಯದಿಂದ ದೂರ ಉಳಿಯುತ್ತೇನೆ ಎಂದು ಸವಾಲು ಹಾಕಿದರು ಈ ಸಂದರ್ಭದಲ್ಲಿ ಮುಖಂಡರಾದ ಡಾ. ಪ್ರಭುಗೌಡ ಲಿಂಗದಳ್ಳಿ ಅಶೋಕ್ ಗೌಡ ಪಾಟೀಲ ಅರವಿಂದ ಕುಲಕರ್ಣಿ ಅರವಿಂದ ಸಜ್ಜನ ಮಾತನಾಡಿದರು ಮುಖಂಡರಾದ ಹನುಮಂತರಾಯ ಗುಣಿಕಿ ಶಾಂತಗೌಡ ಪಾಟೀಲ ಬಾಳನ್ ಗೌಡ ಪಾಟೀಲ ರಂಜಾನ್ ಮುಜಾವರ ದಾವಲ್ ಸಾಬ್ ಅತ್ತಾರ ಕಾಮೇಶ್ ಭಜಂತ್ರಿ ಪ್ರಮೋದಗೌಡ ಹಚ ಡ ದ ಬಾಬು ಪಿಂಜಾರ ನಜೀರ ಗುಡ್ನಾಳ ದಾವಲ್ ಸಾಬ್ ಡವಳಗಿ ಯಾಕೋ ಬ ಅತ್ತಾರ್ ಶ್ರೀಮತಿ ಜಗದೇವಿ ಗುಂಡಳ್ಳಿ ಶ್ರೀಮತಿ ರಮಿಜ ನದಾಫ್ ಅನೇಕ ಜನ ಮಹಿಳೆಯರು ಭಾಗವಹಿಸಿದ್ದರು























