1.29 ಕೋಟಿ ರೂ ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿ ಶಾಸಕ ಮತ್ತಿಮೂಡ ಚಾಲನೆ

ಕಲಬುರಗಿ :ಮೇ.20:ತಾಲೂಕಿನ ಇಟಗಾ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಶಾಸಕ ಬಸವರಾಜ್ ಮತ್ತಿಮೂಡ್ ಅವರು ಅಡಿಗಲ್ಲು ನೆರವೇರಿಸಿದರು.
ಆರ್ ಎಮ್ ಎಸ್ ಎ ಯೋಜನೆ ಅಡಿ 1. ಕೋಟಿ, 29ಲಕ್ಷ ರೂಪಾಯಿ ವೆಚ್ಚದಲ್ಲಿ ಕಲಬುರಗಿ ತಾಲೂಕಿನ ಇಟಗಾ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಗ್ರಾಮಿಣ ಮತಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್ ಅವರು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.
ಇನ್ನು ನಿಜಾಮೊದ್ದಿನ ಪಟೇಲ್ ಅವರು ಇಟಗಾ ಅಹಮದಬಾದ್ ಗ್ರಾಮ ಸರ್ವೆ ನಂ 73/6 ರಲ್ಲಿ 33 ಗುಂಟೆ ಶಾಲೆ ನಿರ್ಮಾಣಕ್ಕಾಗಿ ದೇಣಿಗೆ ನೀಡಿದ್ದು, ನಿಜಾಮೊದ್ದಿನ ಅವರನ್ನು ಶಾಸಕರು ಹಾಗೂ ಗಣ್ಯರು ಸನ್ಮನಿಸಿ ಗೌರವಿಸಿದರು.
ಈ ಸಂಧರ್ಭದಲ್ಲಿ ಬಿಇಓ ಸೋಮಶೇಖರ ಹಂಚಿನಾಳ, ಭೂಪಾಲ ತೆಗನೂರ್ ಗ್ರಾಮ ಪಂಚಾಯತ್ ಅಧ್ಯಕ್ಷ ಮುತ್ತುರಾಜ್ ಎಮ್ ಶೇಳ್ಳಗಿ, ಭಾರತೀಯ ಜನತಾ ಪಾರ್ಟಿ ಎಸ್. ಟಿ ಮೊರ್ಚಾ ಕಲಬುರಗಿ ಗ್ರಾಮೀಣ ಮಂಡಲ ಅಧ್ಯಕ್ಷ ದೇವು ಎನ್. ಜಮಾದಾರ, ಎಇಇ ಶರಣಪ್ಪ ಹಿರೇಮಠ, ವಿನೋದ ಪಾಟೀಲ್, ವಿಶ್ವನಾಥ ಪಾಟೀಲ ಬೆನೂರ, ರೇವಣ್ಣಸಿದ್ದಪ್ಪ ಹರಸೂರ, ಚನ್ನವೀರಯ್ಯ ಹಿರೇಮಠ, ಚನ್ನಬಸಪ್ಪ ದೇಸಾಯಿ, ಕಾಶಿನಾಥ ದೇವಟಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.