
ಅಥಣಿ :ಜ.೨೯: ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿರುವಂತಹ ಅಜೀತ ಪವಾರ ಅವರು ಇಂದು ಬೆಳಗ್ಗೆ ಮುಂಬೈಯಿAದ ಬಾರಮತಿಗೆ ಹೋಗುವ ಸಂದರ್ಭದಲ್ಲಿ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿAಗ್ ಆಗುವ ಸಂದರ್ಭದಲ್ಲಿ ತಾಂತ್ರಿಕ ದೋಷದಿಂದ ವಿಮಾನ ಅಪಘಾತಕ್ಕೆ ಒಳಗಾಗಿ ಇಂದು ಬೆಳಿಗ್ಗೆ ಅವರು ನಿಧನರಾದ ಸುದ್ದಿ ಕೇಳಿ ತುಂಬಾ ಆಘಾತವಾಯಿತು. ಎಂದು ಶಾಸಕ ಲಕ್ಷ್ಮಣ ಸವದಿ ಸಂತಾಪ ಸೂಚಿಸಿದ್ದಾರೆ.
ಅವರು ಮಹಾರಾಷ್ಟ್ರದ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದರು. ಜನರ ಸೇವೆಗೆ ಸದಾ ಮುಂಚೂಣಿಯಲ್ಲಿದ್ದರು. ರಾಜಕಾರಣದಲ್ಲಿ ಬದ್ಧತೆ ಮತ್ತು ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿದ್ದರು. ನನಗೆ ಅತಿ ಆತ್ಮೀಯರು. ನನ್ನ ಜೊತೆ ಸಂಪರ್ಕ ಇಟ್ಟುಕೊಂಡವರು. ಸ್ನೇಹ ಜೀವಿಗಳು ನನ್ನ ಒಳ್ಳೆಯ ಸ್ನೇಹಿತರು ಆಗಿದ್ದರು ವಿಶೇಷವಾಗಿ ನಾವು ಮಹಾರಾಷ್ಟ್ರಕ್ಕೆ ಹೋದಂತಹ ಸಂದರ್ಭದಲ್ಲಿ ಅವರಿಗೆ ಭೇಟಿಯಾಗಿ ಭೀಮಾ ನದಿಗೆ ನೀರು ತರುವಂತಹ ವಿಷಯವಾಗಿರಬಹುದು ಅಥವಾ ಕೃಷ್ಣಾ ನದಿಗೆ ನೀರು ತರುವಂತಹ ವಿಷಯವಾಗಿರಬಹುದು. ಯಾವಾಗ ಯಾವಾಗ ಬೇಸಿಗೆಯ ಸಂದರ್ಭದಲ್ಲಿ ನಮಗೆ ಕುಡಿಯುವ ನೀರಿನ ಸಮಸ್ಯೆಯಾಗುತ್ತಿತ್ತೂ ಆವಾಗ ಅವರನ್ನು ನಾವು ಸಂಪರ್ಕ ಮಾಡುತ್ತಿದ್ದೇವು. ಅವರು ನಮ್ಮ ಜೊತೆ ಸ್ನೇಹಜೀವಿಯಾಗಿ ಅನೇಕ ಬಾರಿ ನಮಗೆ ನೀರು ಬಿಡಿಸಲು ಪ್ರಮುಖ ಪಾತ್ರ ವಹಿಸಿದ್ದರು ಎಂದರು ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ. ಅವರ ಕುಟುಂಬ ವರ್ಗದವರಿಗೆ. ಕಾರ್ಯಕರ್ತರಿಗೆ. ಅಭಿಮಾನಿಗಳಿಗೆ ಪ್ರೀತಿ ಪಾತ್ರರಿಗೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶಾಸಕ ಲಕ್ಷ್ಮಣ ಸವದಿ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

























