ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ಶಾಸಕ ಲಕ್ಷ್ಮಣ ಸವದಿ

ಅಥಣಿ : ಸೆ.18:ಕೂಲಿ ಕೆಲಸಕ್ಕೆ ಹೊರಟಿದ್ದ 30 ಕ್ಕೊ ಹೆಚ್ಚು ಮಹಿಳಾ ಕೂಲಿ ಕಾರ್ಮಿಕರು ವಾಹನ ಪಲ್ಟಿಯಾಗಿ ಎಲ್ಲರಿಗೂ ಗಾಯಗೊಂಡಿದ್ದರು. ಅದರಲ್ಲಿ ಕೆಲವರು ಗಂಭೀರವಾಗಿ ಗಾಯಗೊಂಡಿದ್ದರು ಈ ಹಿನ್ನಲೆಯಲ್ಲಿ ಅಥಣಿ ಸರಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಬುಧುವಾರ ಶಾಸಕ ಲಕ್ಷ್ಮಣ ಸವದಿ ಅವರು ಗಾಯಾಳುಗಳ ಯೋಗಕ್ಷೇಮವನ್ನು ವಿಚಾರಿಸಿ ಎದೆಗುಂದದೆ ಧೈರ್ಯವಾಗಿರಿ ಎಂದು ಧೈರ್ಯ ತುಂಬಿದರು. ಬಡ ಹಾಗೂ ಕೂಲಿ ಕಾರ್ಮಿಕರ ಆಸ್ಪತ್ರೆಯ ವೆಚ್ಚವನ್ನು ಸರಕಾರದಿಂದ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಹೇಳಿದರು
ಶಾಸಕ ಲಕ್ಷ್ಮಣ ಸವದಿ ಅವರು ಬೆಂಗಳೂರಿನಲ್ಲಿ ಇದ್ದರು ಅಪಘಾತದ ಸುದ್ದಿ ತಿಳಿದ ಕೂಡಲೇ ಬೆಂಗಳೂರಿನಲ್ಲಿ ತಮ್ಮ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಅಥಣಿಗೆ ಆಗಮಿಸಿ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುಗಳನ್ನು ಭೇಟಿ ಮಾಡಿದರು.
“ಯಾವತ್ತೂ ಯಾರು ಧೈರ್ಯ ಕಳೆದುಕೊಳ್ಳಬೇಡಿ, ನಿಮ್ಮೆಲ್ಲರ ಜೊತೆ ನಾವು ಯಾವತ್ತೂ ಇರುತ್ತೇವೆ ಎಂದು ಧೈರ್ಯ ಹೇಳಿದ ಅವರು, ಆಸ್ಪತ್ರೆಯ ವೈದ್ಯರು ಹಾಗೂ ಪೆÇಲೀಸ ಇಲಾಖೆ ಅಧಿಕಾರಿಗಳು ಯಾವುದೇ ಪ್ರಾಣ ಹಾನಿ ಆಗದ ಹಾಗೆ ನೋಡಿಕೊಂಡು ತುರ್ತು ಕ್ರಮ ಕೈಗೊಂಡು ಎಲ್ಲರನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಕೆಲಸವನ್ನು ಮಾಡಿದ್ದಾರೆ ಹಾಗೂ ಇಲ್ಲಿ ಇರುವ ಸಿಬ್ಬಂದಿಯವರು ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುತ್ತಿದ್ದಾರೆ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಜೊತೆಗೆ ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ರೀತಿಯ ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು
ಇದೊಂದು ಅನಿರೀಕ್ಷಿತವಾಗಿ ನಡೆದಿರುವ ಘಟನೆ ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ ಅವರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಬಸನಗೌಡ ಕಾಗೆ ಅವರಿಗೆ ಸೂಚನೆ ನೀಡಿದರು.
ಅಲ್ಲದೆ ಬಡ ಕೂಲಿ ಕಾರ್ಮಿಕರ ವೈಧ್ಯಕೀಯ ವೆಚ್ಚ ಭರಿಸಲು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣವನ್ನು ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಹೇಳಿದರು.

ಈ ವೇಳೆ ಪುರಸಭೆ ಸದಸ್ಯ ಸಂತೋಷ ಸಾವಡಕರ, ತಾಲೂಕು ವೈಧ್ಯಾದಿಕಾರಿ ಬಸನಗೌಡ ಕಾಗೆ, ಡಾ. ಆನಂದ ಕುಲಕರ್ಣಿ, ಡಾ. ಸಿ. ಎಸ್ ಪಾಟೀಲ, ಪ್ರಕಾಶ್ ನರಟ್ಪಿ. ಅಥಣಿ ಸಿಪಿಐ ಸಂತೋಷ ಹಳ್ಳೂರ, ಪಿಎ??? ಗಿರಿಮಲ್ಲಪ್ಪ ಉಪ್ಪಾರ, ಮುಖಂಡರಾದ ಜಡೇಪ್ಪ ಕುಂಬಾರ, ಆಸೀಫ್ ತಾಂಬೋಳಿ. ಪ್ರದೀಪ ನಂದಗಾಂವ. ಸಂಗಮೇಶ ಪಲ್ಲಕ್ಕಿ. ಮಲ್ಲು ಕುಳ್ಳೋಳ್ಳಿ, ಮುತ್ತು ಮೊಕಾಶಿ, ಬಸವರಾಜ ತೇರದಾಳ, ಮಹಾಂತೇಶ ಬಾಡಗಿ, ಮಂಜು ಹೋಳಿಕಟ್ಟಿ, ಪ್ರವೀಣ ಜಾಧವ, ಮಂಜು ನೂಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.